ಕುಂಭ ಮೇಳ ಸುಂದರಿ ಮೊನಾಲಿಸಾಗೆ ಮತ್ತೊಂದು ದೊಡ್ಡ ಕೆಲಸ.. 15 ಲಕ್ಷ ರೂಪಾಯಿ ಸಂಬಳ!

author-image
Ganesh
Updated On
ಕುಂಭ ಮೇಳ ಸುಂದರಿ ಮೊನಾಲಿಸಾಗೆ ಮತ್ತೊಂದು ದೊಡ್ಡ ಕೆಲಸ.. 15 ಲಕ್ಷ ರೂಪಾಯಿ ಸಂಬಳ!
Advertisment
  • ಮೊನಾಲಿಸಾಗೆ ಒಲಿದುಬಂತು ಚಿನ್ನದಂಥ ಅವಕಾಶ
  • ಬಂಗಾರಗಳಿಗೆ ಮೊನಾಲಿಸಾ ಅವರೇ ದೊಡ್ಡ ಆಭರಣ
  • ಕೇರಳ ಚೆಮ್ಮನೂರ್ ಜ್ಯೂವೆಲ್ಲರಿ ರಾಯಭಾರಿ ಈ ಮೊನಾಲಿಸಾ

ಮಹಾ ಕುಂಭದಲ್ಲಿ ಸಂಚಲನ ಸೃಷ್ಟಿಸಿದ ಗಾಜುಗಣ್ಣಿನ ಹುಡುಗಿ ಮೊನಾಲಿಸಾ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ಬಾಲಿವುಡ್ ಸಿನಿಮಾ ಬಳಿಕ ಇದೀಗ ಮತ್ತೊಂದು ದೊಡ್ಡ ಆಫರ್ ಬಂದಿದೆ.

ಕೇರಳದ ಜನಪ್ರಿಯ ಚೆಮ್ಮನೂರ್ ಜ್ಯೂವೆಲ್ಲರಿ ತನ್ನ ಪ್ರಚಾರದ ರಾಯಭಾರಿಯಾಗಿ ನೇಮಿಸಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆಯ ಬಾಬಿ ಚೆಮ್ಮನೂರು, ಇವತ್ತು ಮೊನಾಲಿಸಾ ಕೇರಳದ ಕಲ್ಲಿಕೋಟೆಗೆ ಬರಲಿದ್ದಾರೆ. ಅಲ್ಲಿ ಅವರನ್ನು ಕಂಪನಿಯ ಪ್ರಚಾರದ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅವರಿ 15 ಲಕ್ಷ ರೂಪಾಯಿ ಸಂಬಳ ನೀಡಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ: ಪ್ರಯಾಗರಾಜ್​ನ ಬಟ್ಟಲು ಕಂಗಳ ಸುಂದರಿಗೆ ಖುಲಾಯಿಸಿದ ಅದೃಷ್ಟ; ಇನ್ಮುಂದೆ ಸಿನಿಮಾದಲ್ಲಿ ಮಿಂಚಲಿದ್ದಾಳೆ ಮೊನಾಲಿಸಾ!

ಸಿನಿಮಾದಿಂದಲೂ ಆಫರ್..!

16 ವರ್ಷದ ಹುಡುಗಿ ಮಧ್ಯ ಪ್ರದೇಶದ ಖಾರ್ಗೊನ್​ ಜಿಲ್ಲೆಯ ಈ ಹುಡುಗಿ ಕುಂಭಮೇಳದಲ್ಲಿ ಕಂಡು ಸೋಷಿಯಲ್ ಮೀಡಿಯಾಗಳಲ್ಲಿ, ಪತ್ರಿಕೆಗಳ ತಲೆ ಬರಹದಲ್ಲಿ ಸುದ್ದಿಯಾಗಿ ಮಿಂಚಿದ್ದರು. ಈಗ ಹಿಂದಿಯ ಸಿನಿಮಾದಲ್ಲೂ ನಟಿಸಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಬಂದ ವರದಿಯ ಪ್ರಕಾರ, ದಿ ಡೈರಿ ಆಫ್​ ಮನಿಪುರ ಸಿನಿಮಾದಲ್ಲಿ ಮೋನಾಲಿಸಾ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪ್ರಯಾಗರಾಜ್​ನ ಬಟ್ಟಲು ಕಂಗಳ ಸುಂದರಿಗೆ ಖುಲಾಯಿಸಿದ ಅದೃಷ್ಟ; ಇನ್ಮುಂದೆ ಸಿನಿಮಾದಲ್ಲಿ ಮಿಂಚಲಿದ್ದಾಳೆ ಮೊನಾಲಿಸಾ!

ಇನ್ನು ವೈರಲ್ ಆಗುತ್ತಿದ್ದಂತೆಯೇ ‘ಮೊನಾಲಿಸಾ ಭೋಂಸ್ಲೆ 08’ ಅನ್ನೋ ಯುಟ್ಯೂಬ್ ಚಾನಲ್ ಆರಂಭಿಸಿದ್ದಾರೆ. ಇವಳ ಅದೃಷ್ಟವೋ? ಜೇನುಗಣ್ಣಿನ ಆಕರ್ಷಣೆಯೋ? ಈಕೆಯ ಪ್ರತೀ ವಿಡಿಯೋ ಮಿಲಿಯನ್​​ ವೀವ್ಸ್​ ಪಡೆಯುತ್ತಿವೆ. ಇದುವರೆಗೂ ಕೇವಲ 9 ವಿಡಿಯೋ ವ್ಲಾಗ್ ಮಾಡಿರೋ ಮೊನಾಲಿಸಾ ಎಂಟೇ ದಿನಗಳಲ್ಲಿ ಸರಿ ಸುಮಾರು 3 ಲಕ್ಷ ಸಬ್​ಸ್ಕ್ರೈಬರ್ಸ್​ ಹೊಂದಿದ್ದಾರೆ. ಸೋಷಿಯಲ್ ಬ್ಲೇಡ್ ಅನ್ನೋ ವೆಬ್​​ಸೈಟ್​ ಈಕೆಯ ಯುಟ್ಯೂಬ್ ವಿಡಿಯೋ ಆದಾಯ ತಿಂಗಳಿಗೆ 10 ಲಕ್ಷ ರೂಪಾಯಿ ದಾಟಲಿದೆ ಎಂದು ಅಂದಾಜಿಸಿದೆ.

ಇದನ್ನೂ ಓದಿ: Valentine’s Day; ಪ್ರೇಮಿಗಳಿಗಾಗಿ ಇವತ್ತು ಮೂರು ಸಿನಿಮಾಗಳು ರಿಲೀಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment