ಕುಂಭಮೇಳ ಮುಗಿಸಿ ಬರುವಾಗ ಭೀಕರ ಅಪಘಾತ.. ಮೈಸೂರಿನ ಭಕ್ತರು ಕೊನೆಯುಸಿರು

author-image
Bheemappa
Updated On
ಕುಂಭಮೇಳ ಮುಗಿಸಿ ಬರುವಾಗ ಭೀಕರ ಅಪಘಾತ.. ಮೈಸೂರಿನ ಭಕ್ತರು ಕೊನೆಯುಸಿರು
Advertisment
  • ಪ್ರಯಾಗರಾಜ್ ಪವಿತ್ರಾ ಸ್ನಾನ ಮುಗಿಸಿಕೊಂಡು ಬರುವಾಗ ಘಟನೆ
  • ಇಬ್ಬರ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದಕ್ಕೆ ಆಸ್ಪತ್ರೆಗೆ ದಾಖಲಿಸಿದ್ರು
  • ಇಬ್ಬರಿಗೂ ಮದುವೆ ಆಗಿಲ್ಲ, ದೇವರ ದರ್ಶನಕ್ಕೆ ತೆರಳಿದ್ದಾಗ ದುರಂತ

ಮೈಸೂರು: ಮಹಾ ಕುಂಭಮೇಳ ಮುಗಿಸಿ ಕಾಶಿಯಾತ್ರೆಗೆ ತೆರಳುವಾಗ ಭೀಕರ ಅಪಘಾತ ಸಂಭವಿಸಿ ಕರ್ನಾಟಕದ ಮೈಸೂರಿನ ಇಬ್ಬರು ವ್ಯಕ್ತಿಗಳು ಹಸುನೀಗಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರ ಬಳಿ ಈ ಘಟನೆ ನಡೆದಿದೆ.

ಪುರೋಹಿತರಾದ ರಾಮಕೃಷ್ಣ ಶರ್ಮಾ (31), ಅರುಣ್ ಶಾಸ್ತ್ರಿ (38) ಹಸುನೀಗಿದ ವ್ಯಕ್ತಿಗಳು. ಈ ಇಬ್ಬರು ತಮ್ಮ ಕಾರಿನಲ್ಲಿ ಪ್ರಯಾಗರಾಜ್ ಕುಂಭಮೇಳಕ್ಕೆ ತೆರಳಿದ್ದರು. ಕುಂಭಮೇಳದಲ್ಲಿ ಪವಿತ್ರಾ ಸ್ನಾನ ಮುಗಿಸಿದ ನಂತರ ಕಾಶಿಯಾತ್ರೆಗೆ ತೆರಳುತ್ತಿದ್ದರು. ಈ ವೇಳೆ ಮಿರ್ಜಾಪುರದ ಬಳಿ ಕಾರು ಹಾಗೂ ಲಾರಿ ನಡುವೆ ಭಯಾನಕ ಡಿಕ್ಕಿ ಸಂಭವಿಸಿದೆ. ಇದರಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.

publive-image

ಇದನ್ನೂ ಓದಿ:ಧನರಾಜ್​ಗೆ BIGG BOSS ಟ್ರೋಫಿ ಕೊಟ್ಟ ಹನುಮಂತ.. ದೋಸ್ತನ ಹಾಡಿ ಹೊಗಳಿದ ಪ್ರಾಣ ಸ್ನೇಹಿತ

ಇಬ್ಬರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಬೆಳಗ್ಗೆ 8.32ರ ಸಮಯಕ್ಕೆ ರಾಮಕೃಷ್ಣ, ಇಂದು ಬೆಳಗ್ಗೆ 3 ಗಂಟೆಗೆ ಅರುಣ್ ಕೊನೆಯುಸಿರೆಳೆದಿದ್ದಾರೆ. ರಾಮಕೃಷ್ಣ, ಕೆ.ಆರ್.ಎಸ್ ಹಿನ್ನೀರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿದ್ದರು. ಅರುಣ್ ಶಾಸ್ತ್ರಿ ಪುರೋಹಿತರಾಗಿ ಕೆಲಸ ಮಾಡುತ್ತಿದ್ದರು. ಈ ಇಬ್ಬರಿಗೂ ಮದುವೆ ಆಗಿರಲಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment