/newsfirstlive-kannada/media/post_attachments/wp-content/uploads/2025/01/MAHA-KUMBHA.jpg)
ಪ್ರಯಾಗ್ರಾಜ್ ಈಗ ಶಿವನೂರು ಆಗಿ ಶಕ್ತಿಯ ಸ್ಥಳವಾಗಿ ಮಾರ್ಪಟ್ಟಿದೆ. ಎಲ್ಲೆಲ್ಲೂ ಮಹಾದೇವನ ಭಜನೆ ನಡೀತಿದೆ. ಕೋಟಿ-ಕೋಟಿ ಭಕ್ತರ ಮಹಾ ಜಾತ್ರೆಯಾಗಿ ಮಾರ್ಪಟ್ಟ ಶತಮಾನದ ಮಹಾಕುಂಭ ಮೇಳದಲ್ಲಿ ಭಾಗಿಯಾಗಿ ಭಕ್ತ ಸಾಗರ, ಜಗನ್ನಾಥನ ಸ್ಮರಣೆಯಲ್ಲಿ ಮಿಂದೇಳ್ತಿದೆ. ಇದರ ನಡುವೆ ಕಾಲ್ತುಳಿತ ಸಂಭವಿಸಿದ್ದು, ಭಾರೀ ಆತಂಕಕ್ಕೆ ಕಾರಣವಾಗಿದೆ.
ಇಂದು ಮೌನಿ ಅಮಾವಾಸ್ಯೆ.. ಸಂಗಮದಲ್ಲಿ ಶಾಹಿಸ್ನಾನ
ಮಾಘ ಮಾಸದಲ್ಲಿ ಮೌನಿ ಅಮವಾಸ್ಯೆಯನ್ನ ಪವಿತ್ರ ದಿನ ಎನ್ನಲಾಗಿದೆ.. ಈ ದಿನ ಗಂಗಾನದಿಯ ನೀರು ಅಮೃತವಾಗಿ ಬದಲಾಗಿದ್ದು ಪುಣ್ಯಸ್ನಾನ ಮಾಡಿದ್ರೆ ಮೋಕ್ಷಪ್ರಾಪ್ತಿ ಎಂಬ ನಂಬಿಕೆ ಇದೆ.. ಹೀಗಾಗಿ ಇವತ್ತು ಮಹಾಕುಂಭ ಮೇಳದಲ್ಲಿ ಅಮೃತಸ್ನಾನ ಮಾಡಲು ಕೋಟ್ಯಾಂತರ ಭಕ್ತರು ಪ್ರಯಾಗ್ರಾಜ್ ಆಗಮಿಸಿದ್ದು, ಎಲ್ಲಿ ನೋಡಿದರೂ ಭಕ್ತ ಸಾಗರವೇ ಕಾಣ್ತಿದೆ. ಈಗಾಗಲೇ ಮುಂಜಾನೆಯಿಂದಲೇ ಭಕ್ತರು ಅಮೃತ ಸ್ನಾನದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ: ಹೊಸ ಬ್ಯುಸಿನೆಸ್ ಆರಂಭಿಸಿದ ಮೊನಾಲಿಸಾ.. ತಿಂಗಳ ಆದಾಯ ಬರೋಬ್ಬರಿ ₹10 ಲಕ್ಷ!
ಇಂದು 10 ಕೋಟಿಗೂ ಹೆಚ್ಚು ಭಕ್ತರಿಂದ ಶಾಹಿಸ್ನಾನ ಸಾಧ್ಯತೆ
144 ವರ್ಷಗಳ ಬಳಿಕ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಈಗಾಗಲೇ 14 ಕೋಟಿಗೂ ಅಧಿಕ ಭಕ್ತರು ಭೇಟಿ ಕೊಟ್ಟು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.. ಇವತ್ತು ಮೌನಿ ಅಮವಾಸ್ಯೆ ಹಿನ್ನೆಲೆ ಒಂದೇ ದಿನ ಸುಮಾರು 10 ಕೋಟಿಗೂ ಅಧಿಕ ಭಕ್ತರು ಗಂಗಾ ನದಿಯಲ್ಲಿ ಮಿಂದೇಳುವ ಸಾಧ್ಯತೆ ಇದೆ. ಮಹಾಕುಂಭ ತ್ರಿವೇಣಿ ಮಾರ್ಗ, ಕಾಳಿ ಮಾರ್ಗ ಸೇರಿದಂತೆ ಸಂಗಮದ ಮುಖ್ಯ ರಸ್ತೆಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದು, ಜನರ ನಿಯಂತ್ರಣಕ್ಕೆ ಭದ್ರತೆಯನ್ನ ಹೆಚ್ಚಿಸಿದ್ದಾರೆ.. ಇನ್ನು ಅಮೃತಸ್ನಾನ ಮಾಡಲು ತ್ರಿವೇಣಿ ಸಂಗಮದಲ್ಲಿ ಸುಮಾರು 25 ರಿಂದ 30 ಕಡೆ ಘಾಟ್ಗಳನ್ನು ನಿರ್ಮಿಸಲಾಗಿದೆ.
ಸೆಲೆಬ್ರಿಟಿಗಳಿಗೆ ಯಾವುದೇ ವಿಶೇಷ ವ್ಯವಸ್ಥೆ ಇರುವುದಿಲ್ಲ
ಮಹಾಕುಂಭಮೇಳದ ಎರಡನೇ ಶಾಹಿಸ್ನಾನ ಹಿನ್ನೆಲೆ ಕುಂಭಮೇಳಕ್ಕೆ 10 ಕೋಟಿಗೂ ಅಧಿಕ ಭಕ್ತರು ಸೇರುವ ನಿರೀಕ್ಷೆಯಿದೆ, ಈ ಹಿನ್ನೆಲೆ ಮೌನಿ ಅಮಾವಾಸ್ಯೆ ದಿನದಂದು ವಿಐಪಿಗಳಿಗೆ ಹಾಗೂ ಸಿನಿಮಾ ತಾರೆಯರು ಹಾಗೂ ಇತರೆ ಸೆಲೆಬ್ರಿಟಿಗಳಿಗೆ ಯಾವುದೇ ವಿಶೇಷ ವ್ಯವಸ್ಥೆ ಇರುವುದಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಅಧಿಕಾರಿಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಒಟ್ಟಾರೆ.. ಮಹಾಕುಂಭಮೇಳದಲ್ಲಿ ಇದುವರೆಗೆ 14 ಕೋಟಿಗೂ ಅಧಿಕ ಯಾತ್ರಿಕರು ಪುಣ್ಯಸ್ನಾನ ಮಾಡಿದ್ದಾರೆ. ಇವತ್ತು ತ್ರಿವೇಣಿ ಸಂಗಮದಲ್ಲಿ ಅಸಂಖ್ಯ ಭಕ್ತರು ಪುಣ್ನಸ್ನಾನ ಮಾಡಿ ಪುನೀತರಾಗಲು ಕಾತರರಾಗಿದ್ದಾರೆ.
ಇದನ್ನೂ ಓದಿ: BREAKING: ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಜೀವ ಕಳೆದುಕೊಂಡ 15 ಯಾತ್ರಿಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ