/newsfirstlive-kannada/media/post_attachments/wp-content/uploads/2025/01/KUMBHA_MELA-1.jpg)
ಪ್ರಯಾಗರಾಜ್: ಮಹಾ ಕುಂಭಮೇಳದ ಸಂಗಮ್ ಪ್ರದೇಶದಲ್ಲಿ ಕಾಲ್ತುಳಿತ ಸಂಭವಿಸಿ ಪ್ರಾಣಹಾನಿ ಸಂಭವಿಸಿವೆ. ಹಲವಾರು ಭಕ್ತರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ಸಿಎಂ ಯೋಗಿ ಆದಿತ್ಯನಾಥ್ ಸುರಕ್ಷತೆ ಕ್ರಮ ತೆಗೆದುಕೊಂಡಿದ್ದಾರೆ. ಮಧ್ಯೆರಾತ್ರಿ ಕಾಲ್ತುಳಿತ ಸಂಭವಿಸಲು 2 ಪ್ರಮುಖ ಕಾರಣಗಳು ಇವೆ ಅವೆಂದರೆ..
ಕಾರಣ- 1; ಸಂಗಮ್ ಪ್ರದೇಶದಲ್ಲಿ ಅಮೃತ್ ಸ್ನಾನ ಮಾಡಲು ಇರುವ ಹೆಚ್ಚಿನ ಪಾಂಟೂನ್ ಸೇತುವೆಗಳನ್ನು ಮುಚ್ಚಲಾಗಿತ್ತು. ಇದರಿಂದಾಗಿ ಸಂಗಮದಲ್ಲಿ ಕೋಟಿಗಟ್ಟಲೆ ಜನ ಸೇರತೊಡಗಿದರು. ಕ್ಷಣದಿಂದ ಕ್ಷಣಕ್ಕೆ ಭಕ್ತರ ದಟ್ಟಣೆ ನಿರಂತವಾಗಿ ಹೆಚ್ಚಾಗುತ್ತಲೇ ಹೋಯಿತು. ಹಲವು ಭಕ್ತರು ಬ್ಯಾರಿಕೇಡ್‌ಗಳಲ್ಲಿ ಸಿಲುಕಿಕೊಂಡಿದ್ದರು. ಇದನ್ನು ನೋಡಿದ ಕೆಲ ಜನರು ಕಾಲ್ತುಳಿತ ಸಂಭವಿಸಿದೆ ಮಾತನಾಡಿಕೊಳ್ಳಲು ಶುರು ಮಾಡಿದ್ದರಿಂದ ವದಂತಿ ಎಲ್ಲೆಡೆ ಹಬ್ಬಿತು.
ಇದನ್ನೂ ಓದಿ: Kumbh Mela ಕಾಲ್ತುಳಿತ; ಕೋಟಿ ಕೋಟಿ ಭಕ್ತರ ಬಳಿ ಸಿಎಂ ಯೋಗಿ ಮನವಿ ಮಾಡಿಕೊಂಡಿದ್ದು ಏನು?
ಕಾರಣ- 2; ಸಂಗಮ ಪ್ರದೇಶದಲ್ಲಿ ಪ್ರವೇಶಕ್ಕೆ ಮಾತ್ರ ಮಾರ್ಗವಿದೆ. ಮತ್ತೆ ನಿರ್ಗಮನಕ್ಕೆ ಯಾವುದೇ ಬೇರೆ ದಾರಿ ಇಲ್ಲ. ಸ್ನಾನ ಮಾಡಿದವರು ಅದೇ ಪ್ರವೇಶ ಪಡೆದ ದಾರಿಯಲ್ಲಿ ವಾಪಸ್ ಆಗಬೇಕು. ಹೀಗಾಗಿ ಜನ ಏಕಾಏಕಿ ಏರಿಕೆ ಆಗಿ ದಟ್ಟಣೆ ಹೆಚ್ಚಾಗಿತ್ತು. ಇದೇ ಸಮಯಕ್ಕೆ ಕಾಲ್ತುಳಿತ ಸಂಭವಿಸಿದ್ದರಿಂದ ಜನರಿಗೆ ಬೇರೆ ಕಡೆ ಹೋಗಲು ಅವಕಾಶ ಸಿಗಲಿಲ್ಲ. ಒಬ್ಬರ ಮೇಲೊಬ್ಬರು ಬೀಳುತ್ತಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಧ್ಯೆರಾತ್ರಿಯೇ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿವೆ. ತಕ್ಷಣ ಭದ್ರತೆ ಪಡೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು. ಇದು ಅಲ್ಲದೇ ಜನಸಂದಣಿ ಹೆಚ್ಚಾಗದಂತೆ ತಡೆಯಲು, ಪ್ರಯಾಗರಾಜ್‌ನ ಪಕ್ಕದ ಜಿಲ್ಲೆಗಳಲ್ಲಿ ಭಕ್ತರನ್ನು ಈಗಾಗಲೇ ನಿಲ್ಲಿಸಲಾಗಿದೆ. ಎಲ್ಲ ಅಧಿಕಾರಿಗಳನ್ನು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ