/newsfirstlive-kannada/media/post_attachments/wp-content/uploads/2025/01/KUMBHA_CM_YOGI.jpg)
ಪ್ರಯಾಗರಾಜ್: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ ಪ್ರಾಣ ಹಾನಿಯಾಗಿದ್ದು, ಕೆಲವು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಎಲ್ಲ ಭಕ್ತರೂ ಸಂಗಮ್ ಕಡೆಗೆ ಬರುವುದು ಬೇಡ. ಎಲ್ಲಾ ಕಡೆಗೂ ಗಂಗಾ ಮಾತಾ ಇದ್ದಾಳೆ ಎಂದು ಹೇಳಿದ್ದಾರೆ.
ಪ್ರಯಾಗರಾಜ್ನಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್ ಅವರು, ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ರಾತ್ರಿವರೆಗೆ ಅಮೃತ ಸ್ನಾನಕ್ಕೆ ಶುಭ ಘಳಿಗೆ ಇದೆ. ಇಂದು ಬೆಳಗ್ಗೆಯಿಂದಲೇ 3 ಕೋಟಿಗೂ ಅಧಿಕ ಜನರು ಅಮೃತ ಸ್ನಾನ ಮಾಡಿದ್ದಾರೆ. ಸ್ನಾನ ಮಾಡಲು ಎಲ್ಲರೂ ಸಂಗಮ್ ಪ್ರದೇಶದ ಕಡೆ ಬರಬೇಡಿ. ಎಲ್ಲ ಕಡೆಯೂ ಗಂಗಾ ಮಾತೆ ಇದ್ದಾಳೆ. ನಿಮಗೆ ಸಮೀಪವಾಗುವ ನದಿಯ ಸೆಕ್ಟರ್ ಬಳಿಗೆ ಹೋಗಿ ಸ್ನಾನ ಮಾಡಿ ಎಂದು ಸಿಎಂ ಯೋಗಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Bigg Boss; ಫ್ರೆಂಡ್ಶಿಪ್ ಕಟ್ ಮಾಡಿಕೋ ಎಂದಿದ್ದ ಗೌತಮಿ ಗಂಡ.. ಮಂಜು ರಿಯಾಕ್ಟ್ ಮಾಡಿದ್ದು ಹೇಗೆ?
12 ರಿಂದ 15 ಕಿಲೋ ಮೀಟರ್ ವ್ಯಾಪ್ತಿವರೆಗೆ ಭಕ್ತರು ಇದ್ದಾರೆ. ಸ್ನಾನಕ್ಕೆ ಎಲ್ಲರಿಗೂ ಅನುವು ಮಾಡಿಕೊಡಬೇಕಿದೆ. ರಾತ್ರಿ ನಡೆದ ಘಟನೆಯಲ್ಲಿ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕುಂಭದಲ್ಲಿ ಯಾವುದೇ ವಂದಂತಿ ಅಥವಾ ಸುಳ್ಳುಗಳನ್ನು ಹಬ್ಬಿಸುವ ಕೆಲಸ ಮಾಡಬೇಡಿ. ಭಕ್ತರು ಯಾವುದೇ ಸುದ್ದಿ ಇರಲಿ ಬೇಗ ನಂಬಲು ಹೋಗಬೇಡಿ ಎಂದು ಸಿಎಂ ಹೇಳದ್ದಾರೆ.
ಪ್ರಸ್ತುತ ಪ್ರಯಾಗರಾಜ್ನಲ್ಲಿ 10 ಕೋಟಿಗೂ ಹೆಚ್ಚು ಭಕ್ತರು, ಜನರು ಇದ್ದಾರೆ. ಮಧ್ಯೆರಾತ್ರಿ 2 ಗಂಟೆಗೆ ಕಾಲ್ತುಳಿತದ ಘಟನೆ ನಡೆದಿದೆ. ಪರಿಸ್ಥಿತಿ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದ್ದಾರೆ. ಘಟನೆಯಲ್ಲಿ ನಡೆದ ಪ್ರಾಣ ಹಾನಿಯ ಕುರಿತು ಅಧಿಕೃತ ಮಾಹಿತಿ ಉತ್ತರ ಪ್ರದೇಶದ ಸರ್ಕಾರ ನೀಡಿಲ್ಲ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ