/newsfirstlive-kannada/media/post_attachments/wp-content/uploads/2025/05/anupama.jpg)
ಕಲರ್ಸ್ ವಾಹಿನಿಯಲ್ಲಿ ಹೊಸ ಶೋ ಬರೋದಕ್ಕೆ ಸಜ್ಜಾಗ್ತಿದೆ. ಬಾಯ್ಸ್ ವರ್ಸಸ್ ಗರ್ಲ್ಸ್ ನಂತರ ಯಾವುದೇ ಶೋನ ಅನೌನ್ಸ್ ಮಾಡಿರಲಿಲ್ಲ ತಂಡ. ಸದ್ದಿಲ್ಲದೇ ಹೊಸ ಪ್ರೋಮೋ ರಿಲೀಸ್ ಮಾಡಿದೆ ವಾಹಿನಿ. ವಾರಂತ್ಯದಲ್ಲಿ ಮಜಾ ಟಾಕೀಸ್ ಪ್ರಸಾರವಾಗ್ತಿದೆ. ಇದರ ಜೊತೆಗೆ ಕುಕ್ಕಿಂಗ್ ಶೋ ಬರಲಿದೆ.
ಇದನ್ನೂ ಓದಿ:ಶಕ್ತಿಪೀಠ ಕಾಮಾಕ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟ ಕನ್ನಡದ ನಟಿ ಕಾರುಣ್ಯಾ ರಾಮ್; ಹೇಳಿದ್ದೇನು?
ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ನಿರೂಪಣೆ ಮಾಡಿದ್ದ ನಟಿ, ನಿರೂಪಕಿ ಅನುಪಮಾ ಹೊಸ ಶೋಗೂ ಮುಂದುವರೆದಿದ್ದಾರೆ. ಇನ್ನೂ, ಇವರ ಜೊತೆ ಕುರಿ ಪ್ರತಾಪ್ ಸಾಥ್ ಕೊಡಲಿದ್ದಾರೆ.
ಮಜಾ ಟಾಕೀಸ್ನಲ್ಲೂ ಕುರಿ ಪ್ರತಾಪ್ ಅವರು ಮುಖ್ಯ ಕಾಮಿಡಿಯನ್ ಆಗಿ ಕೆಲಸ ಮಾಡ್ತಿದ್ದಾರೆ. ಅವರ ಹಾಸ್ಯದ ಗಮ್ಮತ್ತು ಘಮ ಘಮಿಸೋ ಅಡುಗೆ ಶೋಗೂ ಮುಂದುವರೆಯಲಿದೆ.
ಇನ್ಮೇಲೆ ಫುಲ್ಲು ಕ್ವಾಟ್ಲೆ, ಫನ್‌ಟೈಮ್ ಸ್ಟಾರ್ಟ್ ಆಯ್ತಲೇ! ಕ್ವಾಟ್ಲೆ ಕಿಚನ್ ಎಂಬ ಅಡಿಬರಹದ ಜೊತೆ ಶೋ ಪ್ರೊಮೋ ರಿಲೀಸ್ ಆಗಿದೆ. ಕಲರ್ಸ್ ವಾಹಿನಿಯ ಹಿಂದಿ ಭಾಷೆಯಲ್ಲಿ ಫೇಮಸ್ ಆಗಿರೋ Laughter Chefs ನ ಕನ್ನಡಕ್ಕೆ ತರಲಾಗಿದ್ದು, ಅಲ್ಲಿ ಹಾಸ್ಯ ಕಲಾವಿದೆ ಭಾರತಿ ಶೋ ನಡೆಸಿ ಕೊಡ್ತಿದ್ದಾರೆ.
View this post on Instagram
ಇದೊಂದು ಪಕ್ಕಾ ಫನ್ ಶೋ. ಜೊತೆಗೆ ರುಚಿ.. ರುಚಿ ಅಡುಗೆಯ ಗಮ್ಮತ್ತು. ಇದೇ ಕ್ವಾಟ್ಲೆ ಕಿಚನ್ ರೂಪದಲ್ಲಿ ನೋಡುಗರಿಗೆ ಭರ್ಜರಿ ಭೋಜನದ ಮನರಂಜನೆಯ ರಸದೌತಣ ನೀಡಲಿದೆ. ಕ್ವಾಟ್ಲೆ ಕಿಚನ್ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಟೈಮ್, ಡೇಟ್ ಫಿಕ್ಸ್ ಆಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ