newsfirstkannada.com

‘ಕುರುಬರ ಸ್ವಾಮೀಜಿ ಗರ್ಭಗುಡಿಗೆ ಬಂದ್ರು ಅಂತ ದೇವಸ್ಥಾನ ತೊಳೆದರು’- ಈಶ್ವರಾನಂದಪುರಿ ಶ್ರೀ ಬೇಸರ

Share :

Published February 3, 2024 at 12:09pm

    ಬಾಗೂರು ಗ್ರಾಮದ ಚೆನ್ನಕೇಶವ ದೇವಸ್ಥಾನದ ಒಳಗೆ ಹೋಗಿದ್ದೆ

    ಕುರುಬರ ಸ್ವಾಮೀಜಿ ಒಳಗೆ ಬಂದ್ರು ಅಂತ ದೇವಸ್ಥಾನ ತೊಳೆದಿದ್ದಾರೆ

    ‘ನಾವು ಎಲ್ಲಾ ದೇವಸ್ಥಾನಕ್ಕೂ ಹೋದ್ರೆ ದೇವಸ್ಥಾನ ಸ್ವಚ್ಛ ಆಗುತ್ತೆ’

ಚಿತ್ರದುರ್ಗ: ಚನ್ನಕೇಶವ ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸಿದ್ದಕ್ಕೆ ಇಡೀ ದೇವಸ್ಥಾನವನ್ನೇ ಅವತ್ತು ತೊಳೆದು ಬಿಟ್ರು ಎಂದು ಕುರುಬ ಸಮಾಜದ ಈಶ್ವರಾನಂದಪುರಿ ಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ.

ಸಾಣೆಹಳ್ಳಿ ಮಠದಲ್ಲಿ ಅಂತರ ಜಿಲ್ಲಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಭಾಷಣ ಮಾಡಿದ ಈಶ್ವರಾನಂದಪುರಿ ಶ್ರೀಗಳು, ಇತ್ತೀಚೆಗೆ ನಾನು ಹೊಸದುರ್ಗ ತಾಲೂಕಿನ ಬಾಗೂರು ಗ್ರಾಮದ ಚೆನ್ನಕೇಶವ ದೇವಸ್ಥಾನದ ಒಳಗೆ ಹೋಗಿದ್ದೆ. ನಾನು ಹೊರ ಬಂದ ನಂತರ ದೇವಾಲಯವನ್ನೇ ತೊಳೆದರು ಎಂದಿದ್ದಾರೆ.

ನನಗೆ ಗೊತ್ತಿಲ್ಲ ಅದು ಮುಜರಾಯಿ ಇಲಾಖೆ ದೇವಾಲಯ ಅಂತ ಗೊತ್ತಿರಲ್ಲಿಲ್ಲ. ಇಲ್ಲ ಅಂದಿದ್ರೆ ಅವತ್ತೇ ಪ್ರತಿಭಟನೆ ಮಾಡ್ತಾ ಇದ್ದೆ. ಕನಕದಾಸರು ಉಡುಪಿಯಲ್ಲಿ ಪ್ರತಿಭಟನೆ ಮಾಡಿದ ಹಾಗೆ ಮಾಡ್ತಿದ್ವಿ. ಮುಜರಾಯಿ ದೇವಸ್ಥಾನ ಕಣಯ್ಯ, ಸುಮ್ಮನೆ ಒಳಗೆ ಬಿಡು ಅಂತ ಹೇಳುತ್ತಿದ್ದೆವು.

ನಾವು ನಿಂತುಕೊಂಡಿದ್ವಿ, ನಮ್ಮನ್ನ ಮಾತ್ರ ಯಾರೂ ಒಳಗೆ ಬಿಟ್ಟಿಲ್ಲ. ವೈಕುಂಠ ಏಕಾದಶಿ ದಿವಸ, ಅವತ್ತು ನರಕನೇ ತೋರಿಸಿ ಬಿಟ್ಟರು. ಹೆಣ್ಣು ಮಕ್ಕಳೆಲ್ಲಾ ಒಳಗೆ ಹೋಗಿಬಿಟ್ರು. ನಮಗೆ ಪ್ರವೇಶನೇ ಇಲ್ಲ. ನಾವು ಮಠದ ಸ್ವಾಮಿಗಳು ನಮಗ್ಯಾಕೆ ಒಳಗೆ ಪ್ರವೇಶ ಇಲ್ಲ. ಬಾಗೂರಿನಿಂದ ನಾನು ಮಠಕ್ಕೆ ವಾಪಸ್​ ಹೋದ ಮೇಲೆ ಕುರುಬರ ಸ್ವಾಮೀಜಿ ಒಳಗೆ ಬಂದ್ರು ಅಂತ ದೇವಸ್ಥಾನ ತೊಳೆದಿದ್ದಾರೆ. ನಾವು ಎಲ್ಲಾ ದೇವಸ್ಥಾನಕ್ಕೂ ಹೋದ್ರೆ ದೇವಸ್ಥಾನ ಸ್ವಚ್ಛ ಆಗುತ್ತೆ. ದೇವಾಲಯ ಸ್ವಚ್ಛ ಆಗೋದಲ್ಲ, ಮನಸ್ಸು ಸ್ವಚ್ಛ ಮಾಡಿಕೊಳ್ಳಿ. ಮುಂದಿನ ವರ್ಷದಿಂದ ಚನ್ನಕೇಶ ದೇವಸ್ಥಾನಕ್ಕೂ ನಾವು ಹೋಗಲ್ಲ ಎಂದು ಈಶ್ವರಾನಂದಪುರಿ ಶ್ರೀಗಳು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕುರುಬರ ಸ್ವಾಮೀಜಿ ಗರ್ಭಗುಡಿಗೆ ಬಂದ್ರು ಅಂತ ದೇವಸ್ಥಾನ ತೊಳೆದರು’- ಈಶ್ವರಾನಂದಪುರಿ ಶ್ರೀ ಬೇಸರ

https://newsfirstlive.com/wp-content/uploads/2024/02/Kuruba-Swamiji-2.jpg

Load More