newsfirstkannada.com

ಕೆಟ್ಟ ಮೇಲೆ ಬುದ್ಧಿ ಬಂತೇ! ಕೊನೆಗೂ ಕಿಂಗ್ ಕೊಹ್ಲಿ ಕ್ಷಮೆ ಕೇಳಿದ ಶ್ರೀಲಂಕಾ ಸ್ಟಾರ್​ ಕ್ರಿಕೆಟರ್​​

Share :

Published January 20, 2024 at 4:50pm

Update January 20, 2024 at 4:41pm

    ವಿರಾಟ್​​ ಕೊಹ್ಲಿ ಕ್ರೀಡಾ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟಿಗ!

    ಕೊಹ್ಲಿ 49ನೇ ಶತಕದ ಬಗ್ಗೆ ಕೇಳಿದ್ದಕ್ಕೆ ಉರ್ಕೊಂಡಿದ್ದ ಕ್ರಿಕೆಟರ್​​​

    ಕೊನೆಗೂ ವಿರಾಟ್​ ಕೊಹ್ಲಿ ಗೆ ಕ್ಷಮೆ ಕೇಳಿದ ಕುಸಲ್​ ಮೆಂಡೀಸ್​​

ಅಂದು 2023 ನವೆಂಬರ್​​ 5ನೇ ತಾರೀಕು, ನಮ್ಮ ಕಿಂಗ್​ ಕೊಹ್ಲಿ ಬರ್ತ್​​ಡೇ! ಕೋಲ್ಕತ್ತಾದ ಈಡನ್​ ಗಾರ್ಡನ್​​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಸೌತ್​ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದಿದ್ದಕ್ಕಿಂತ ವಿರಾಟ ಕೊಹ್ಲಿಯ ವೀರಾವೇಷವೇ ಸೆನ್ಸೇಷನ್​ ಸೃಷ್ಟಿಸಿತ್ತು. ಎಲ್ಲರೂ ಅಸಾಧ್ಯ ಎಂದಿದ್ದ ದಾಖಲೆಯನ್ನು 35ನೇ ವಸಂತಕ್ಕೆ ಕಾಲಿಟ್ಟ ದಿನವೇ ಕಿಂಗ್​ ಕೊಹ್ಲಿ, ಸರಿಗಟ್ಟಿದ ರೀತಿ ಹಾಗಿತ್ತು. ಕ್ರಿಕೆಟ್​ ಕಾಶಿಯಲ್ಲಿ ಕಿಂಗ್​ ಕೊಹ್ಲಿ ಕಟ್ಟಿದ್ದು ಅಂತಾ ಕ್ಲಾಸಿಕ್​ ಇನ್ನಿಂಗ್ಸ್​.

ರಾಜಗಾಂಭೀರ್ಯದಲ್ಲಿ ಕಣಕ್ಕಿಳಿದ ಕಿಂಗ್​ ಕೊಹ್ಲಿಯ ಎಂಟ್ರಿಯೇ ಹರಿಣಗಳ ಪಡೆಯಲ್ಲಿ ನಡುಕ ಹುಟ್ಟಿಸಿತ್ತು. ಆರಂಭದಲ್ಲೇ ಆರ್ಭಟಿಸಲು ಶುರುವಿಟ್ಟುಕೊಳ್ತಿದ್ದಂತೆ, ಫ್ಯಾನ್ಸ್​ ವಲಯದಲ್ಲಿ ಸೆಂಚುರಿ ಇನ್ನಿಂಗ್ಸ್​ ಪಕ್ಕಾ ಆಗಿತ್ತು. ಅಷ್ಟು ಪರ್ಫೆಕ್ಟ್​ ಆಗಿ ಇನ್ನಿಂಗ್ಸ್​​ ಸ್ಟಾರ್ಟ್​ ಮಾಡಿದ್ರು ವಿರಾಟ್​.

ಸೌತ್​ ಆಫ್ರಿಕಾದ ದಮನಕಾರಿ ಬೌಲಿಂಗ್​ ದಾಳಿಯನ್ನ ದಿಟ್ಟವಾಗಿ ಎದುರಿಸಿದ ಕೊಹ್ಲಿ 205 ನಿಮಿಷಗಳ ಕಾಲ ಕ್ರೀಸ್​ ಕಚ್ಚಿ ನಿಂತಿದ್ರು. 121 ಎಸೆತವನ್ನ ಸಮರ್ಥವಾಗಿ ಎದುರಿಸಿ, 10 ಬೌಂಡರಿ ಸಹಿತ 101 ರನ್​ ಚಚ್ಚಿ ಅಜೇಯರಾಗುಳಿದ್ರು.

ಇನ್ನು, ಕೊಹ್ಲಿ 49ನೇ ಶತಕ ಸಿಡಿಸೋ ಮೂಲಕ ಸಚಿನ್​​ ತೆಂಡೂಲ್ಕರ್​ ದಾಖಲೆ ಸರಿಗಟ್ಟಿದ್ರು. ಈ ಬಗ್ಗೆ ಶ್ರೀಲಂಕಾದ ಕ್ಯಾಪ್ಟನ್​​ ಕುಸಲ್​ ಮೆಂಡೀಸ್​ಗೆ, ಕೊಹ್ಲಿ ವಿಶ್ವದಾಖಲೆ ಶತಕದ ಬಗ್ಗೆ ನೀವೇನು ಹೇಳಲು ಬಯಸುತ್ತೀರಿ? ಎಂದು ಜರ್ನಲಿಸ್ಟ್​ ಒಬ್ಬರು ಪ್ರಶ್ನೆ ಕೇಳಿದ್ರು. ಇದಕ್ಕೆ ನಾನೇಕೆ ವಿಶ್​ ಮಾಡಬೇಕು? ಎಂದು ಕುಸಲ್​ ಮೆಂಡೀಸ್​ ರೀಪ್ಲೆ ಮಾಡಿದ್ರು. ಅದಕ್ಕೀಗ ಕುಸಲ್​ ಮೆಂಡೀಸ್​​ ಮತ್ತೆ ಕ್ಷಮೆ ಕೇಳಿದ್ದಾರೆ.

ಕೊಹ್ಲಿಗೆ ಕ್ಷಮೆ ಕೇಳಿದ ಕುಸಲ್​ ಮೆಂಡೀಸ್​!

ವಿರಾಟ್​​ ಕೊಹ್ಲಿ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟರ್​. ಅಂದು ನಾನು ಹಾಗೇ ಮಾತಾಡಬಾರದಿತ್ತು. ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ 50 ಶತಕ ಸಿಡಿಸಿ ಸಚಿನ್​ ದಾಖಲೆ ಮುರಿದಿದ್ದಾರೆ. ಅವರನ್ನು ನೋಡುತ್ತಾ ಬೆಳೆದಿದ್ದೇನೆ. ಕೊಹ್ಲಿ ನನಗೆ ಎಂದಿಗೂ ಸ್ಫೂರ್ತಿ, ನನ್ನಿಂದ ಯಾರಿಗಾದ್ರೂ ಹರ್ಟ್​ ಆಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಖಾಸಗಿ ಯೂಟ್ಯೂಬ್​ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಟ್ಟ ಮೇಲೆ ಬುದ್ಧಿ ಬಂತೇ! ಕೊನೆಗೂ ಕಿಂಗ್ ಕೊಹ್ಲಿ ಕ್ಷಮೆ ಕೇಳಿದ ಶ್ರೀಲಂಕಾ ಸ್ಟಾರ್​ ಕ್ರಿಕೆಟರ್​​

https://newsfirstlive.com/wp-content/uploads/2024/01/Mendis_Kohli.jpg

Load More