/newsfirstlive-kannada/media/post_attachments/wp-content/uploads/2025/05/KUSHAL-MENDIES.jpg)
ಐಪಿಎಲ್-2025 ನಾಳೆಯಿಂದ ಪುನರ್ ಆರಂಭವಾಗುತ್ತಿದೆ. ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ.
ಐಪಿಎಲ್ನ 2ನೇ ಇನ್ನಿಂಗ್ಸ್ನಲ್ಲಿ ಪ್ಲೇ-ಆಫ್ ಕನಸು ಕಾಣ್ತಿರುವ ಫ್ರಾಂಚೈಸಿಗಳಿಗೆ ವಿದೇಶಿ ಆಟಗಾರರ ಅಲಭ್ಯತೆ ಕಾಡ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಬಿಕ್ಕಟ್ಟು ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಾವಳಿಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಹೀಗಾಗಿ ಫ್ರಾಂಚೈಸಿಗಳು ಸುರಕ್ಷತಾ ದೃಷ್ಟಿಯಿಂದ ಎಲ್ಲಾ ಆಟಗಾರರನ್ನೂ ತವರಿಗೆ ಕಳುಹಿಸಿಕೊಟ್ಟಿದ್ದವು. ದೇಶಕ್ಕೆ ಮರಳಿರುವ ಕೆಲವು ಆಟಗಾರರು ಮತ್ತೆ ವಾಪಸ್ ಐಪಿಎಲ್ ಆಡಲು ಬರುತ್ತಿಲ್ಲ. ಕೆಲವು ಆಟಗಾರರು ದೇಶ ಪರ ನಡೆಯುವ ಮ್ಯಾಚ್ಗಾಗಿ ಐಪಿಎಲ್ಗೆ ಬರಲ್ಲ ಎಂದಿದ್ದಾರೆ. ಅವರಲ್ಲಿ ಗುಜರಾತ್ ಟೈಟನ್ಸ್ನ ಜೋಶ್ ಬಟ್ಲರ್ ಕೂಡ ಒಬ್ಬರು.
ಇದನ್ನೂ ಓದಿ: ಧೋನಿ, ರೋಹಿತ್, ಕೊಹ್ಲಿ ಅಲ್ಲವೇ ಅಲ್ಲ.. IPLನಲ್ಲಿ ಬೆಸ್ಟ್ ಕ್ಯಾಪ್ಟನ್ ಯಾರು..?
ಇದೀಗ ಬಟ್ಲರ್ ಅವರ ಬದಲಿಗೆ ಶ್ರೀಲಂಕಾ ಆಟಗಾರನನ್ನು ಗುಜರಾತ್ ಟೈಟನ್ಸ್ ಬೇಟೆ ಆಡಿದೆ. ಕುಶಾಲ್ ಮೆಂಡಿಸ್ ಅವರನ್ನು ತಂಡಕ್ಕೆ ಸೇರಿಕೊಂಡಿದ್ದು, ಶೀಘ್ರದಲ್ಲೇ ಅವರು GT ಕ್ಯಾಂಪ್ ಕೂಡಿಕೊಳ್ಳಲಿದ್ದಾರೆ. ವಿಶೇಷ ಅಂದರೆ ಕುಶಾಲ್ ಮೆಂಡಿಸ್ ಅವರು ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಾವಳಿಗಳನ್ನು ಆಡುತ್ತಿದ್ದರು. ಆದರೆ PSLಗೆ ಗುಡ್ಬೈ ಹೇಳಿರುವ ಅವರು, ಗುಜರಾತ್ ಟೈಟನ್ಸ್ ತಂಡಕ್ಕೆ ಜಾಯಿನ್ ಆಗಿದ್ದಾರೆ. ಇನ್ನು, ಅವರು ಇನ್ಮುಂದೆ PSL ಆಡದಿರಲು ನಿರ್ಧರಿಸಿದ್ದಾರೆ. ಅದಕ್ಕೆ ಕಾರಣ ಭದ್ರತೆಯ ಆತಂಕ.
ಇದನ್ನೂ ಓದಿ: VIDEO- ಚಿನ್ನಸ್ವಾಮಿ ಪಿಚ್ ಅನ್ನೇ ಸ್ವಿಮ್ಮಿಂಗ್ ಪೂಲ್ ಮಾಡಿಕೊಂಡ ಆರ್ಸಿಬಿ ಸ್ಟಾರ್.. ಫುಲ್ ಎಂಜಾಯ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್