ಕುವೈತ್​ನಲ್ಲಿ ಭಾರೀ ಅಗ್ನಿ ದುರಂತ; ಭಾರತೀಯ ಮೂಲದ 40 ಮಂದಿ ದಾರುಣ ಸಾವು

author-image
Veena Gangani
Updated On
ಕುವೈತ್​ನಲ್ಲಿ ಭಾರೀ ಅಗ್ನಿ ದುರಂತ; ಭಾರತೀಯ ಮೂಲದ 40 ಮಂದಿ ದಾರುಣ ಸಾವು
Advertisment
  • ಸುಮಾರು 160 ಜನರು ವಾಸಿಸುತ್ತಿದ್ದ ಕಟ್ಟಡಕ್ಕೆ ತಗುಲಿದ ಬೆಂಕಿ
  • ಮಂಗಾಫ್ ನಗರದ ಕಾರ್ಮಿಕರ ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ
  • ಗಂಭೀರವಾಗಿ ಗಾಯಗೊಂಡ 50 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಕುವೈತ್: ಕಟ್ಟಡವೊಂದಕ್ಕೆ ಏಕಾಏಕಿ ಬೆಂಕಿ ತಗುಲಿದ ಪರಿಣಾಮ 40 ಭಾರತೀಯರು ಸಜೀವ ದಹನವಾಗಿದ್ದಾರೆ. 50 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕುವೈತ್ ಉಪಪ್ರಧಾನಿ ಅಧಿಕೃತ ಮಾಹಿತಿ ನೀಡಿದ್ದಾರೆ. ಇಂದು ಮುಂಜಾನೆ ಕೆಳ ಮಹಡಿಯಲ್ಲಿನ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಆ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಬೆಂಕಿ ಹೊತ್ತಿಕೊಂಡ ಕಟ್ಟಡದಲ್ಲಿ ಸುಮಾರು 160 ಜನರು ವಾಸಿಸುತ್ತಿದ್ದರಂತೆ.

publive-image

ಇದನ್ನೂ ಓದಿ:ಅಯ್ಯೋ ತಗಡೇ.. ನಟ ದರ್ಶನ್‌ ಅರೆಸ್ಟ್ ಆದ್ಮೇಲೆ ಉಮಾಪತಿ ವಿಡಿಯೋಗಳು ಸಖತ್‌ ವೈರಲ್‌!

ಇನ್ನು, ಬೆಂಕಿಯ ಕೆನಾಲಿಗೆಯಲ್ಲಿ 40 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ದೇಶದ ಉಪ ಪ್ರಧಾನಿ ಶೇಖ್ ಫಹಾದ್ ಯೂಸುಫ್ ಸೌದ್ ಅಲ್-ಸಬಾಹ್ ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ 50 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಟ್ವೀಟ್​​ ಮಾಡಿಕೊಂಡಿದ್ದಾರೆ.


">June 12, 2024

ಈ ಬಗ್ಗೆ ಟ್ವೀಟ್​​ ಮಾಡಿದ ಅವರು, ದಕ್ಷಿಣ ಕುವೈತ್‌ನ ಮಂಗಾಫ್ ನಗರದಲ್ಲಿ ಕಾರ್ಮಿಕರ ವಸತಿ ಕಟ್ಟಡದಲ್ಲಿ ಸಂಭವಿಸಿದ ಬೆಂಕಿಯಲ್ಲಿ 41 ಜನರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಕೇಳಿ ನನಗೆ ತೀವ್ರ ಆಘಾತವಾಗಿದೆ. ಶಿಬಿರಕ್ಕೆ ಭಾರತೀಯ ರಾಯಭಾರಿ ಭೇಟಿ ನೀಡಿದ್ದಾರೆ. ಬೆಂಕಿಯಿಂದ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, 50 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಂತ್ರಸ್ತರಿಗೆ ಸಹಾಯ ಮಾಡಲು ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿವೆ ಅಂತ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment