/newsfirstlive-kannada/media/post_attachments/wp-content/uploads/2025/03/Vijay-jananayagan-kvn-production.jpg)
ಬೆಂಗಳೂರು: ತಮಿಳು ನಟ ದಳಪತಿ ವಿಜಯ್ ಈಗ ಸಿನಿಮಾಗಿಂತಲೂ ರಾಜಕೀಯದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ತಮ್ಮದೇ ಹೊಸ ಪಕ್ಷ ಸ್ಥಾಪಿಸಿಕೊಂಡಿರುವ ವಿಜಯ್, 2026ಕ್ಕೆ ತಮಿಳುನಾಡಿನಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಸಕ್ರಿಯ ರಾಜಕೀಯಕ್ಕೂ ಮುನ್ನ ನಟ ವಿಜಯ್ ನಟಿಸಿರುವ ಕೊನೇ ಸಿನಿಮಾ ಜನ ನಾಯಗನ್ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ.
2026 ಜನವರಿ 15ರಂದು ತಮಿಳುನಾಡಿನಲ್ಲಿ ಪೊಂಗಲ್ ಸಂಭ್ರಮ. ಅದೇ ದಿನ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಹೈ ಬಜೆಟ್‌ನೊಂದಿಗೆ ಸೆಟ್ಟೇರಿರೋ ಸಿನಿಮಾ ಜನ ನಾಯಗನ್ ಬಿಡುಗಡೆ ಆಗುತ್ತಿದೆ. ಈ ಸಿನಿಮಾ ಹಲವು ವಿಶೇಷಗಳಿಗೆ ಕಾರಣವಾಗಿದೆ. ಅದ್ರಲ್ಲಿ ಪ್ರಮುಖವಾದದ್ದು ಇದು ದಳಪತಿ ವಿಜಯ್ ಅಭಿನಯದ 69ನೇ ಮತ್ತು ಸಿನಿ ಬದುಕಿನಿಂದ ನಿವೃತ್ತಿ ಪಡೆದು ಫುಲ್ ಟೈಂ ರಾಜಕಾರಣಿಯಾಗೋಕೆ ಹೊರಟಿರೋ ವಿಜಯ್ ಅವರ ಕೊನೆಯ ಸಿನಿಮಾ.
/newsfirstlive-kannada/media/post_attachments/wp-content/uploads/2025/01/Vijaya-Jananayakan.jpg)
ಕೆವಿಎನ್ ಪ್ರೊಡಕ್ಷನ್ಸ್ ಅಂದ್ರೆನೆ ಹಾಗೆ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಮೈಲಿಗಲ್ಲನ್ನೇ ಸ್ಥಾಪಿಸಿದೆ. ಸ್ಯಾಂಡಲ್‌ವುಡ್ ಸೇರಿದಂತೆ ಬಾಲಿವುಡ್, ಟಾಲಿವುಟ್ ಹಾಗೂ ಕಾಲಿವುಡ್ ಸಿನಿಮಾಗಳನ್ನೇ ನಿರ್ಮಿಸುತ್ತಿದೆ. ಯಾವುದೇ ಸಿನಿಮಾ ಅದ್ಧೂರಿಯಾಗಿ ಮೂಢಿ ಬರಬೇಕು ಅನ್ನೋದು ಕೆವಿಎನ್ ಪ್ರೊಡಕ್ಷನ್ಸ್ ಅವರ ಒನ್ ಲೈನ್ ಅಜೆಂಡಾ.
ಮತ್ತೊಂದು ಪ್ರಮುಖ ಅಂಶ ಏನಂದ್ರೆ ಹಣ ಕೊಟ್ಟು ಸಿನಿಮಾ ನೋಡುವ ಸಿನಿರಸಿಕರಿಗೆ ಮೋಸವಾಗಬಾರದು ಅನ್ನೋದು. ಸಿನಿಮಾ ನೋಡಿ ಎದ್ದು ಹೊರಬರುವ ಪ್ರೇಕ್ಷಕನ ಮನದಲ್ಲಿ ಮತ್ತೊಮ್ಮೆ ಸಿನಿಮಾ ನೋಡಬೇಕು ಎನ್ನುವಷ್ಟರ ಮಟ್ಟಿಗೆ ಸಿನಿಮಾ ಮಾಡುವ ಗುರಿ ಕೆವಿಎನ್ ಪ್ರೊಡಕ್ಷನ್ಸ್ ರದ್ದು.
ಕೆವಿಎನ್ ತಮಿಳು ಚಿತ್ರರಂಗಕ್ಕೆ ಕಾಲಿಡೋ ಮೂಲಕ ಸಿನಿ ಪ್ರಿಯರಿಗೆ ಬಿಗ್ ಸರ್ಪ್ರೈಸ್ ನೀಡಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಮುಖ್ಯಸ್ಥ ವೆಂಕಟ್ ಕೆ. ನಾರಾಯಣ ಎಲ್ಲಾ ಭಾಷೆಗಳಲ್ಲಿ ಬಿಗ್ ಸ್ಟಾರ್ಸ್ ಜೊತೆಗೆ ದೊಡ್ಡ ಪ್ರಮಾಣದ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದೀಗ ತಮಿಳಿನ ಖ್ಯಾತ ನಟ ಇಳಯ ದಳಪತಿ ವಿಜಯ್ 69ನೇ ಚಿತ್ರ ಕೆವಿಎನ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ.
/newsfirstlive-kannada/media/post_attachments/wp-content/uploads/2024/09/Thalapathy69-KVN-Productions.jpg)
ದಳಪತಿ ವಿಜಯ್ 69ನೇ ಚಿತ್ರ ಜನ ನಾಯಗನ್ ಆಗಿದ್ದು, ಹೈ ಬಜೆಟ್‌ನಲ್ಲಿ ಚಿತ್ರ ತಯಾರಾಗುತ್ತಿದೆ. ಈಗಾಗಲೇ ದೊಡ್ಡ ಬಜೆಟ್‌ನಲ್ಲಿ ಕೆವಿಎನ್ ಕೆ ವೆಂಕಟ್ ನಾರಾಯಣ ಅವರು ಬಂಡವಾಳ ಹೂಡಿದ್ದಾರೆ. ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ತಮಿಳುನಾಡಿನ ಹೆಮ್ಮೆಯ ಹಬ್ಬ ಪೊಂಗಲ್ ದಿನ ಈ ಸಿನಿಮಾ ತೆರೆ ಮೇಲೆ ಅಬ್ಬರಿಸಲಿದೆ.
ಇದನ್ನೂ ಓದಿ: ದಳಪತಿ ವಿಜಯ್ ಫ್ಯಾನ್ಸ್‌ಗೆ ಖುಷಿ ಸುದ್ದಿ.. 69ನೇ ಸಿನಿಮಾ ‘ಜನ ನಾಯಗನ್’ ಸ್ಪೆಷಾಲಿಟಿ ಏನು?
ಜನ ನಾಯಗನ್ ಆಗಮನಕ್ಕಾಗಿ ದಳಪತಿ ವಿಜಯ್ ಅಭಿಮಾನಿಗಳಷ್ಟೇ ಇಡೀ ದಕ್ಷಿಣ ಭಾರತ ಕಾಯುತ್ತಿದೆ. ಈ ಸಿನಿಮಾಗೆ ಬಂಡವಾಳ ಹಾಕಿರುವ ಕೆವಿಎನ್ ಪ್ರೊಡಕ್ಷನ್ಸ್ ಯಾವುದಕ್ಕೂ ಕೊರತೆ ಇಲ್ಲದಂತೆ ಚಿತ್ರ ನಿರ್ಮಾಣ ಮಾಡುತ್ತಿದೆ. ಅದು ಕೆವಿಎನ್ ಪ್ರೊಡಕ್ಷನ್ ಸ್ಟೈಲ್ ಕೂಡ ಹೌದು. ಅವರು ಯಾವುದೇ ಸಿನಿಮಾ ಮಾಡಲಿ, ನಿರ್ಮಾಣದಲ್ಲಿ ಸಣ್ಣದೊಂದು ಹುಳುಕು ಹುಡುಕೋದು ಕಷ್ಟ. ಕೆವಿಎನ್ ಮತ್ತು ದಳಪತಿ ಒಂದಾಗಿ ಜನ ನಾಯಗನ್ ಸಿನಿಮಾ ಸಿದ್ಧತೆಯಲ್ಲಿ ತೊಡಗಿದ್ದಾರೆ.
/newsfirstlive-kannada/media/post_attachments/wp-content/uploads/2024/09/Vijay.jpg)
ಜನ ನಾಯಗನ್ ವಿಜಯ್ ಅವರ ವಿದಾಯದ ಸಿನಿಮಾ ಅಂದ್ಮೇಲೆ ಏನೆಲ್ಲ ಇರಬೇಕೋ ಅದೆಲ್ಲವೂ ಇರುತ್ತದೆ ಅಂತ ಹೇಳಲಾಗ್ತಿದೆ. ಈ ಸಿನಿಮಾ ಮೂಲಕ ದಳಪತಿಗೆ ಯೋಗ್ಯವಾದ ವಿದಾಯವೇ ಸಿಗುತ್ತಿದೆ. ಈ ನಿಟ್ಟಿನಲ್ಲಿ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
ಜನ ನಾಯಗನ್‌ಗೆ ಹೆಚ್. ವಿನೋತ್ ನಿರ್ದೇಶಿಸಿ, ಅನಿರುದ್ದ್ ರವಿಚಂದರ್ ಮ್ಯೂಸಿಕ್ ನೀಡಿದ್ದಾರೆ. ಒಂದು ಕಡೆ ಪೊಂಗಲ್ ಹಬ್ಬದ ಸಂಭ್ರಮ ಅವತ್ತು ಮನೆ ಮಾಡಿರುತ್ತೆ.…ಮತ್ತೊಂದು ಕಡೆ ದಳಪತಿ ವಿಜಯ್ ಅದ್ಧೂರಿ ಬೀಳ್ಕೊಡುಗೆ ಈ ಸಿನಿಮಾ ಮೂಲಕ ಸಿಗಲಿದೆ. ಜನ ನಾಯಗನ್ ನೋಡೋದಕ್ಕೆ ಜನ ಕಾತುರದಿಂದ ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us