ಸ್ಮೃತಿ ಇರಾನಿಗೆ ಅಂದು ಸೀರಿಯಲ್​ನಲ್ಲಿ ನಟನೆಗೆ 1,800 ಸಂಭಾವನೆ.. ಆದ್ರೆ ಇಂದು 14 ಲಕ್ಷ ರೂಪಾಯಿ!

author-image
Bheemappa
Updated On
ಸ್ಮೃತಿ ಇರಾನಿಗೆ ಅಂದು ಸೀರಿಯಲ್​ನಲ್ಲಿ ನಟನೆಗೆ 1,800 ಸಂಭಾವನೆ.. ಆದ್ರೆ ಇಂದು 14 ಲಕ್ಷ ರೂಪಾಯಿ!
Advertisment
  • ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯನ್ನ ಸೋಲಿಸಿದ್ದ ಸ್ಮೃತಿ ಇರಾನಿ
  • ಸ್ಮೃತಿ ಇರಾನಿ ಅಭಿನಯ ಮಾಡುತ್ತಿರುವ ಆ ಧಾರಾವಾಹಿ ಹೆಸರು ಏನು?
  • ಪ್ರೋಮೋದಲ್ಲಿ ಮಸ್ತ್​ ಲುಕ್​ನಲ್ಲಿ ಪೋಸ್ ಕೊಟ್ಟಿರುವ ಮಾಜಿ ಸಚಿವೆ

ಕ್ಯೂಂಕಿ ಸಾಸ್ ಬೀ ಕಭೀ ಬಹೂ ಥೀ ಹಿಂದಿ ಧಾರಾವಾಹಿ ಮರುಪ್ರಸಾರಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಧಾರಾವಾಹಿಯಲ್ಲಿ ಮತ್ತೆ ತುಳಸಿ ವೀರಾನಿಯಾಗಿ ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ನಟಿಸುತ್ತಿದ್ದಾರೆ. ಸ್ಮೃತಿ ಇರಾನಿ ಅವರು ನಮ್ಮ ದೇಶದ ಫೈರ್ ಬ್ರಾಂಡ್ ನಾಯಕಿಯರಲ್ಲಿ ಒಬ್ಬರು. ಸಂಸತ್ ಒಳಗೆ, ಹೊರಗೆ ಫೈರ್ ಬ್ರಾಂಡ್ ಮಾತಿನಿಂದಲೇ ವಿರೋಧಿಗಳನ್ನು ಕಟ್ಟಿ ಹಾಕಿದವರು. ಕಾಂಗ್ರೆಸ್ ಪಕ್ಷದ ದಿಗ್ಗಜ ನಾಯಕ ರಾಹುಲ್ ಗಾಂಧಿಗೆ ಅವರದ್ದೇ ಅಮೇಥಿ ಕ್ಷೇತ್ರದಲ್ಲಿ ಸೋಲಿನ ರುಚಿ ತೋರಿಸಿದವರು. ಇಂಥ ದಿಟ್ಟ ನಾಯಕಿ ಈಗ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ.

ಕ್ಯೂಂಕಿ ಸಾಸ್ ಬೀ ಕಭೀ ಬಹೂ ಥೀ ಹಿಂದಿ ಧಾರಾವಾಹಿ, ಹೊಸ ಅವತಾರದಲ್ಲಿ ಪ್ರಸಾರವಾಗಲಿದೆ. ಯಾವಾಗನಿಂದ ಕಿರುತೆರೆಯಲ್ಲಿ ಧಾರಾವಾಹಿ ಪ್ರಸಾರವಾಗಲಿದೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಜುಲೈ 29 ರಿಂದ ಧಾರಾವಾಹಿ ಪ್ರಸಾರ ಆರಂಭವಾಗಲಿದೆ. ಜುಲೈ 29ರ ರಾತ್ರಿ 10.30ಕ್ಕೆ ಸ್ಟಾರ್ ಪ್ಲಸ್​​ನಲ್ಲಿ ಕ್ಯೂಂಕಿ ಸಾಸ್ ಬೀ ಕಭೀ ಬಹೂ ಥೀ ಪ್ರಸಾರವಾಗಲಿದೆ.

publive-image

ಇಂಟರೆಸ್ಟಿಂಗ್ ವಿಷಯ ಅಂದರೇ, 2000ನೇ ಇಸವಿಯಲ್ಲಿ ಈ ಧಾರವಾಹಿಯಲ್ಲಿ ನಟಿಸುವಾಗ ಸ್ಮೃತಿ ಇರಾನಿ ರಾಜಕೀಯವಾಗಿ ಏನೇನೂ ಅಲ್ಲ, ಆದರೇ, ಕಳೆದ 25 ವರ್ಷದಲ್ಲಿ ರಾಜಕೀಯ ರಂಗ ಪ್ರವೇಶಿಸಿ ತಮ್ಮದೇ ಆದ ಹೆಸರು ಗಳಿಸಿದ್ದಾರೆ. ಕೇಂದ್ರದ ಕ್ಯಾಬಿನೆಟ್ ಸಚಿವೆಯಾಗಿ ಕೆಲಸ ಮಾಡಿದ್ದಾರೆ. ದೈತ್ಯ ರಾಜಕೀಯ ನಾಯಕನಿಗೆ ಅವರದ್ದೇ ಸಂಪ್ರದಾಯಿಕ, ಕುಟುಂಬದ ಕ್ಷೇತ್ರದಲ್ಲೇ ಸೋಲಿನ ರುಚಿ ತೋರಿಸಿದ್ದಾರೆ. ರಾಜ್ಯಸಭೆಯನ್ನು ಪ್ರವೇಶಿಸಿದ್ದರು. ಇಂಥ ಸ್ಮೃತಿ ಇರಾನಿ ಈಗ ಕಿರುತೆರೆಗೆ ರೀ ಎಂಟ್ರಿ ಆಗಿರುವುದರಿಂದ ಅವರ ಪೇ ಚೆಕ್​​ನಲ್ಲಿ ಭಾರೀ ಏರಿಕೆಯಾಗಿದೆ. 2000ನೇ ಇಸವಿಯಲ್ಲಿ ಸ್ಮೃತಿ ಇರಾನಿ ಅವರು ಒಂದು ಎಪಿಸೋಡ್ ನಟನೆಗೆ 1,800 ರೂಪಾಯಿ ಪಡೆಯುತ್ತಿದ್ದರು. ಈಗ 2025ರಲ್ಲಿ ಅದೇ ಧಾರಾವಾಹಿಯಲ್ಲಿ ಒಂದು ಎಪಿಸೋಡ್ ನಟನೆಗೆ ಬರೋಬ್ಬರಿ 14 ಲಕ್ಷ ರೂಪಾಯಿ ಹಣವನ್ನು ಸಂಭಾವನೆಯಾಗಿ ಪಡೆಯಲಿದ್ದಾರೆ.

ಸೀರಿಯಲ್ ಪ್ರೋಮೋ ರಿಲೀಸ್

ನಿನ್ನೆಯಷ್ಟೇ ಕ್ಯೂಂಕಿ ಸಾಸ್ ಬೀ ಕಭೀ ಬಹೂ ಥೀ ಧಾರಾವಾಹಿಯಲ್ಲಿ ಸ್ಮೃತಿ ಇರಾನಿ ಅವರ ಪಾತ್ರದ ಮೊದಲ ಲುಕ್ ಬಿಡುಗಡೆಯಾಗಿತ್ತು. ಸ್ಮೃತಿ ಇರಾನಿ ಹಣೆಗೆ ಕೆಂಪು ಬಣ್ಣದ ಬಿಂದಿ ಇಟ್ಟು, ರೇಷ್ಮೆ ಸೀರೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಸ್ಟಾರ್ ಪ್ಲಸ್ ಚಾನಲ್​ನಲ್ಲೂ ಧಾರಾವಾಹಿಯ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಖಂಡಿತವಾಗಿಯೂ ಬರುತ್ತೇನೆ. ಏಕೆಂದರೇ, ಇಷ್ಟು ವರ್ಷಗಳ ಸಂಬಂಧ ಇದೆ. ನಿಮ್ಮನ್ನು ಮತ್ತೆ ಭೇಟಿಯಾಗುವ ಸಮಯ ಬಂದಿದೆ. ನಮ್ಮದು 25 ವರ್ಷಗಳ ಸಂಬಂಧ, ಮತ್ತೆ ಭೇಟಿಯಾಗಲು ಖಂಡಿತ ಬರುತ್ತೇನೆ ಎಂದು ಧಾರಾವಾಹಿಯ ಪ್ರೋಮೋದಲ್ಲಿ ಸ್ಮೃತಿ ಇರಾನಿ ಹೇಳಿದ್ದಾರೆ.

ಈಗ ರಾಜಕೀಯದಿಂದ ಹೆಚ್ಚಿನ ಮಹತ್ವ ಗಳಿಸಿದ ಸ್ಮೃತಿ 

ಮನೆಯ ಆವರಣದ ತುಳಸೀ ಗಿಡಕ್ಕೆ ತುಳಸಿ ವಿರಾನಿ ಆಗಿ ಸ್ಮೃತಿ ಇರಾನಿ ನೀರು ಹಾಕುತ್ತಿರುವ ದೃಶ್ಯ ಈ ಪ್ರೋಮೋದಲ್ಲಿ ಇದೆ. ಈ ಧಾರವಾಹಿಗೆ ತನ್ನದೇ ಆದ ಅಭಿಮಾನಿ, ವೀಕ್ಷಕರ ವರ್ಗ ಇಂದಿಗೂ ಇದೆ. ಸ್ಮೃತಿ ಇರಾನಿ 2000ನೇ ಇಸವಿಯಲ್ಲಿ ಈ ಧಾರಾವಾಹಿಯಲ್ಲಿ ನಟಿಸಿಯೇ ದೇಶದಲ್ಲಿ ಖ್ಯಾತಿ ಗಳಿಸಿ ಮನೆ ಮಾತಾದರು. ಈಗ ರಾಜಕೀಯ ರಂಗದ ಮೂಲಕ ಹೆಚ್ಚಿನ ಖ್ಯಾತಿ ಗಳಿಸಿದ್ದಾರೆ. ಹೀಗಾಗಿ ಧಾರಾವಾಹಿಯ ಟಿಆರ್‌ಪಿ ಏರಿಕೆಯಾಗುವ ಎಲ್ಲ ಸಾಧ್ಯತೆಗಳೂ ಇವೆ.

ಇದನ್ನೂ ಓದಿ: ಚೊಚ್ಚಲ ಟೆಸ್ಟ್​ ಗೆದ್ದ ಖುಷಿ, ಗಿಲ್ ದೊಡ್ಡ ಎಡವಟ್ಟು.. ಕ್ಯಾಪ್ಟನ್​​ನಿಂದ ಒಪ್ಪಂದ ಉಲ್ಲಂಘನೆ​​!

publive-image

ಕ್ಯೂಂಕಿ ಸಾಸ್ ಭಿ ಕಭೀ ಬಹೂ ಥೀ 2000ನೇ ಇಸವಿಯಿಂದ 2008 ರವರೆಗೆ ಪ್ರಸಾರವಾಗಿತ್ತು. 2014 ರಲ್ಲಿ ಮತ್ತೆ ಇದೇ ಧಾರಾವಾಹಿಯಲ್ಲಿ ನಟಿಸಲು ಸ್ಮೃತಿ ಇರಾನಿ ಹಾಗೂ ಏಕ್ತಾ ಕಪೂರ್ ನಡುವೆ ಒಪ್ಪಂದವಾಗಿತ್ತು. ಅಷ್ಟರಲ್ಲೇ ಸ್ಮೃತಿ ಇರಾನಿ ಅವರಿಗೆ ಪ್ರಧಾನಿ ಕಚೇರಿಯಿಂದ ಪೋನ್ ಕಾಲ್ ಬಂದಿತ್ತು. ನೀವು ಕೇಂದ್ರ ಸರ್ಕಾರದಲ್ಲಿ ಸಚಿವರಾಗಲು ದೆಹಲಿಗೆ ಬರಬೇಕೆಂದು ಪ್ರಧಾನಿ ಕಚೇರಿಯಿಂದ ತಿಳಿಸಲಾಗಿತ್ತು.

ಹೀಗಾಗಿ ಸ್ಮೃತಿ ಇರಾನಿ ಸೀರಿಯನ್ ನಟನೆ ಬಿಟ್ಟು ದೆಹಲಿಯ ಪ್ಲೈಟ್ ಹತ್ತಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರೂ, ಕೇಂದ್ರ ಮಂತ್ರಿಯಾಗಿದ್ದರು. 2019 ರಲ್ಲಿ ಅಮೇಥಿ ಕ್ಷೇತ್ರದಲ್ಲೇ ರಾಹುಲ್ ಗಾಂಧಿಯನ್ನು ಸೋಲಿಸುವಲ್ಲಿ ಸ್ಮೃತಿ ಇರಾನಿ ಯಶಸ್ವಿಯಾದರು. ಆದರೇ, 2024 ರಲ್ಲಿ ಲಕ್ ಸ್ಮೃತಿ ಇರಾನಿಗೆ ಕೈ ಕೊಟ್ಟಿತ್ತು. ಹೀಗಾಗಿ ಈಗ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ.

ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment