/newsfirstlive-kannada/media/post_attachments/wp-content/uploads/2024/10/OFFICE-WORKING-1.jpg)
ಚೆನ್ನೈ: ವರ್ಷದ ಆರಂಭದಲ್ಲೇ ಎಲ್ & ಟಿ ಕಂಪನಿಯ ಉದ್ಯೋಗಿಗಳಿಗೆ ಶಾಕ್ ಕೊಡುವ ಸುದ್ದಿ ಇದು. ಐಟಿ ದಿಗ್ಗಜ, ಇನ್ಫೊಸಿಸ್ ನಾರಾಯಣಮೂರ್ತಿ 70 ತಾಸು ಕೆಲಸದ ಹೇಳಿಕೆಗೆ ಮತ್ತೋರ್ವ ದೈತ್ಯ ಕಂಪನಿಯ ಅಧ್ಯಕ್ಷ ಎಸ್.ಎನ್.ಸುಬ್ರಹ್ಮಣ್ಯ ದನಿಗೂಡಿಸಿದ್ದಾರೆ. ಭಾನುವಾರವೂ ಸೇರಿದಂತೆ ವಾರಕ್ಕೆ 90 ಗಂಟೆಗಳು ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ. ಇದೇ ಹೇಳಿಕೆ ಈಗ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
’ಭಾನುವಾರ ಸೇರಿ ವಾರಕ್ಕೆ 90 ಗಂಟೆಗಳು ಕೆಲಸ ಮಾಡಿ’
ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಿ ಅಂತ ಕೆಲ ದಿನಗಳ ಇನ್ಫೊಸಿಸ್ ನಾರಾಯಣಮೂರ್ತಿ ನೀಡಿದ್ದ ಸಲಹೆ ಭಾರಿ ಚರ್ಚೆ, ವಿರೋಧಕ್ಕೆ ಕಾರಣ ಆಗಿತ್ತು. ಇದೀಗ ದೈತ್ಯ ಎಲ್ & ಟಿ ಕಂಪನಿ ಅಧ್ಯಕ್ಷ S.N. ಸುಬ್ರಮಣ್ಯ ಕೂಡ ನಾರಾಯಣಮೂರ್ತಿ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ. ವಿಡಿಯೋ ಕಾನ್ಫ್ರೆನ್ಸ್ನಲ್ಲಿ ಮಾತನಾಡಿರುವ ಎಸ್.ಎನ್.ಸುಬ್ರಹ್ಮಣ್ಯ ಮನೆಯಲ್ಲಿ ಎಷ್ಟು ಹೊತ್ತು ಹೆಂಡತಿ ಮುಖ ನೋಡ್ತಾ ಕೂರ್ತೀರಿ, ಎಷ್ಟು ಗಂಟೆ ಹೆಂಡತಿ, ಗಂಡನ ಮುಖ ನೋಡುತ್ತಾ ಇರ್ತಾರೆ, ಅಫೀಸ್ಗೆ ಬನ್ನಿ, ಕೆಲಸ ಮಾಡಲು ಆರಂಭಿಸಿ ಅಂತ ತಮ್ಮ ಉದ್ಯೋಗಿಗಳಿಗೆ ಸಲಹೆ ನೀಡಿದ್ದಾರೆ.
ಇನ್ನು ಮಾತು ಮುಂದುವರಿಸಿರುವ ಎಸ್.ಎನ್.ಸುಬ್ರಹ್ಮಣ್ಯ ನಿಮ್ಮಿಂದ ಭಾನುವಾರ ಕೆಲಸ ಮಾಡಿಸಲು ಆಗದೇ ಇರೋದಕ್ಕೆ ವಿಷಾದ ಇದೆ. ನಾನು ಭಾನುವಾರವೂ ನಿಮ್ಮನ್ನು ಕೆಲಸ ಮಾಡುವಂತೆ ಮಾಡಿದ್ರೆ, ನನಗೆ ಸಂತೋಷವಾಗುತ್ತೆ. ಚೀನೀಯರು ವಾರಕ್ಕೆ 90 ಗಂಟೆಗಳು ಕೆಲಸ ಮಾಡ್ತಾರೆ. ಆಮೆರಿಕನ್ನರು ವಾರಕ್ಕೆ 50 ಗಂಟೆಗಳು ಕೆಲಸ ಮಾಡ್ತಾರೆ ಅಂತ ಉದಾಹರಣೆ ಸಹಿತ ಸಲಹೆ ನೀಡಿದ್ದಾರೆ.
ನಟಿ ದೀಪಿಕಾ ಅಸಮಾಧಾನ!
ಉನ್ನತ ಹುದ್ದೆಯಲ್ಲಿರುವವರ ಇಂತಹ ಹೇಳಿಕೆ ನೀಡುವುದನ್ನು ನೋಡುವುದು ಶಾಕಿಂಗ್ ಅಂತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿ ಉದ್ಯೋಗಿಗೆ ಮಾನಸಿಕ ಆರೋಗ್ಯವು ಮುಖ್ಯ ಅಂತ ಪೋಸ್ಟ್ ಮೂಲಕ ಟೀಕಿಸಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಅಧ್ಯಕ್ಷ ಎಸ್.ಎನ್ ಸುಬ್ರಹ್ಮಣ್ಯ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಸಮಜಾಯಿಷಿ ನೀಡಿರುವ ಎಲ್ ಅಂಡ್ ಟಿ ಕಂಪನಿ ಅಧ್ಯಕ್ಷರ ಹೇಳಿಕೆ ದೊಡ್ಡ ಆಕಾಂಕ್ಷೆಯನ್ನು ಬಿಂಬಿಸುತ್ತದೆ. ರಾಷ್ಟ್ರ ನಿರ್ಮಾಣವೇ ಎಲ್ & ಟಿಯ ಪ್ರಮುಖ ಗುರಿಯಾಗಿದೆ. ಅಸಾಧಾರಣ ಫಲಿತಾಂಶಗಳಿಗೆ ಅಸಾಧಾರಣ ಪ್ರಯತ್ನದ ಅಗತ್ಯವಿದೆ ಅಂತ ಅವರು ಹೇಳಿದ್ದಾರೆ. ಅಷ್ಟೆ ಅಂತ ಸಮರ್ಥಿಸಿಕೊಂಡಿದೆ. ಒಟ್ಟಾರೆ, ಇಷ್ಟೆಲ್ಲಾ ಟೀಕೆಗಳ ಹೊರತಾಗಿಯೂ ವಾರಕ್ಕೆ 90 ಗಂಟೆಗಳ ಕೆಲಸವನ್ನು ಎಲ್ & ಟಿ ಕಂಪನಿ ಇಂಪ್ಲಿಮೆಂಟ್ ಮಾಡುತ್ತಾ ಅನ್ನೋದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ:ಅರ್ಜುನ್ ಗುರೂಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಬಿಗ್ ಟ್ವಿಸ್ಟ್; ಏನಿದು ಕೇಸ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ