/newsfirstlive-kannada/media/post_attachments/wp-content/uploads/2024/06/LK_ADVANI.jpg)
ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 96 ವರ್ಷ ವಯಸ್ಸಿನ ಅವರನ್ನು ಮಂಗಳವಾರದಂದು ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಅಪೋಲೋ ಆಸ್ಪತ್ರೆಯ ಡಾ ವಿನಿತ್ ಸೂರಿ ಆರೈಕೆ ಮಾಡುತ್ತಿದ್ದಾರೆ. ಸದ್ಯ ಮಾಜಿ ಉಪ ಪ್ರಧಾನಿ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಒಂದೇ ಎಸೆತ! ಫೈನಲ್ಗೇರಿದ ಜಾವೆಲಿನ್ ಮ್ಯಾನ್.. ನೀರಜ್ ಚೋಪ್ರಾಗಿರೋ ಮುಂದಿನ ಸವಾಲುಗಳೇನು ಗೊತ್ತಾ?
ಅಡ್ವಾಣಿಯವರು ಬಿಜೆಪಿ ಪಕ್ಷವನ್ನು ಕಟ್ಟಿ, ಗಟ್ಟಿಗೊಳಿಸಿದವರಲ್ಲಿ ಹಿರಿಯರು. ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಹೌದು. ಅಡ್ವಾಣಿ ಜೊತೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ಬಿಜೆಪಿಯನ್ನು ಪ್ರಬಲ ರಾಷ್ಟ್ರೀಯ ಪಕ್ಷವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಚಳವಳಿಯ ನೇತೃತ್ವವಹಿಸಿದವರಲ್ಲಿ ಅಡ್ವಾಣಿಯವರು ಮೊದಲಿಗರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ