Advertisment

ಉದ್ಯೋಗ ಖಾತ್ರಿ ಕೆಲಸ ಮಾಡುವ ವೇಳೆ ಹೃದಯಾಘಾತ; ಕೂಲಿ ಕಾರ್ಮಿಕ ಸಾವು

author-image
AS Harshith
Updated On
ಉದ್ಯೋಗ ಖಾತ್ರಿ ಕೆಲಸ ಮಾಡುವ ವೇಳೆ ಹೃದಯಾಘಾತ; ಕೂಲಿ ಕಾರ್ಮಿಕ ಸಾವು
Advertisment
  • ಹೃದಯಾಘಾತವಾಗಿ ಸಾವನ್ನಪ್ಪಿದ ಕೂಲಿ ಕಾರ್ಮಿಕ
  • ಉದ್ಯೋಗ ಖಾತ್ರಿ ಕೆಲಸ ಮಾಡುವ ವೇಳೆ ದುರ್ಘಟನೆ
  • ಆಸ್ಪತ್ರೆಗೆ ಸಾಗಿಸಿದರೂ ಬದುಕಲಿಲ್ಲ ಕೂಲಿ ಕಾರ್ಮಿಕ

ರಾಯಚೂರು: ಉದ್ಯೋಗ ಖಾತ್ರಿ ಕೆಲಸ ಮಾಡುವ ವೇಳೆ ಹೃದಯಾಘಾತವಾಗಿ ಕೂಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಲಿಂಗಸೂಗೂರು ತಾ. ನಾಗರಾಳ ಗ್ರಾಮದಲ್ಲಿ ನಡೆದಿದೆ. ಮಹಾಂತೇಶ್ (34) ಸಾವನ್ನಪ್ಪದ ದುರ್ದೈವಿ.

Advertisment

ಉದ್ಯೋಗ ಖಾತ್ರಿ ಕೆಲಸ ಮಾಡುವ ವೇಳೆ ಮಹಾಂತೇಶ್ ಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಕೂಡಲೇ ಆತನನ್ನು ಕಾರಿನಲ್ಲಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಗೆ ಸಾಗಿಸುವಾಗ ಏಕಾಏಕಿ ಕಾರ್ಮಿಕ ಮಹಾಂತೇಶ್ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಬೋರ್​ವೆಲ್ ಕೊರೆಯುವಾಗ ಬಿರುಕು ಬಿಟ್ಟ ಭೂಮಿ.. ಸರ್ಕಾರಿ ಕಾಲೇಜು ಕಟ್ಟಡಕ್ಕೆ ಡ್ಯಾಮೇಜ್ ಆರೋಪ

ಮಾಹಿತಿ ತಿಳಿದ ತಕ್ಷಣವೆ ಸ್ಥಳಕ್ಕೆ ಲಿಂಗಸೂಗೂರು ಇಒ ಅಮರೇಶ್ ಭೇಟಿ ನೀಡಿದ್ದಾರೆ. ಅಧಿಕಾರಿಗಳ ತಂಡ ಮೃತ ಕಾರ್ಮಿಕನ ಕುಟುಂಬಸ್ಥರಿಗೆ ಸ್ವಾಂತನ ಹೇಳಿದ್ದಾರೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment