newsfirstkannada.com

ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ; ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ

Share :

Published June 22, 2023 at 2:23pm

Update June 22, 2023 at 6:16pm

    ಕುಡಿಯೋಕೆ ನೀರಿಲ್ಲ, ಆಟದ ಮೈದಾನವಿಲ್ಲ, ಬಾಗಿಲುಗಳಿಲ್ಲದ ಶೌಚಾಲಯ

    ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆಗೆ ಹೈಕೋರ್ಟ್ ಗರಂ

    ಮಕ್ಕಳಿಗೆ ಮೂಲಸೌಕರ್ಯ ಕಲ್ಪಿಸೋ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ನಿರ್ದೇಶನ

ಬೆಂಗಳೂರು: ಕುಡಿಯೋಕೆ ನೀರಿಲ್ಲ, ಆಟದ ಮೈದಾನವಿಲ್ಲ, ಬಾಗಿಲುಗಳಿಲ್ಲದ ಶೌಚಾಲಯಗಳು. ರಾಜ್ಯದ ವಿವಿಧ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆಗೆ ಹೈಕೋರ್ಟ್ ಇವತ್ತು ಗರಂ ಆಗಿದೆ. ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯದ ಅಪಾರ ಸಂಖ್ಯೆಯ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಇದಕ್ಕೆ ಸ್ವಯಂಪ್ರೇರಿತವಾಗಿ PIL ದಾಖಲಿಸಿರುವ ಹೈಕೋರ್ಟ್, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯದ ವಿವಿಧ ಶಾಲೆಗಳಲ್ಲಿ ಕುಡಿಯುವ ನೀರು, ಆಟದ ಮೈದಾನ, ಬಾಗಿಲುಗಳಿಲ್ಲದ ಶೌಚಾಲಯಗಳ ಕೊರತೆಗೆ ಬೇಸರ ವ್ಯಕ್ತಪಡಿಸಲಾಗಿದೆ.

ಹೈಕೋರ್ಟ್‌ನಲ್ಲಿ ಇವತ್ತು ಶಾಲೆ ಬಿಟ್ಟು ಹೊರಗಿರುವ ಮಕ್ಕಳ ಸುಮೋಟೊ ಪಿಐಎಲ್ ವಿಚಾರಣೆ ನಡೀತು. ಈ ವೇಳೆ ಸಿಜೆ ನೇತೃತ್ವದ ವಿಭಾಗೀಯ ಪೀಠ, ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಬಗ್ಗೆ ಗಮನಹರಿಸದ ರಾಜ್ಯ ಸರ್ಕಾರದ ನಡೆಗೆ ಗರಂ ಆಯ್ತು. ಅರ್ಜಿ ವಿಚಾರಣೆ ನಡೆಸಿದ ಸಿಜೆ ಪಿ.ಬಿ ವರಾಳೆ ನೇತೃತ್ವದ ವಿಭಾಗೀಯ ಪೀಠ, ಶಿಕ್ಷಣ ಹಕ್ಕು ಕಾಯಿದೆ ಅಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಮಕ್ಕಳಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಆಗಬೇಕು. ನಿರ್ದಿಷ್ಟ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಬೇಕು. ಜೊತೆಗೆ ನಿರ್ದಿಷ್ಟ ಕಾಲಮಿತಿಯಲ್ಲಿ ವಿನಿಯೋಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಹೈಕೋರ್ಟ್ ಅಸಮಾಧಾನ ಯಾಕೆ?
ಇನ್ನು ಸರ್ಕಾರದ ಅನುಪಾಲನಾ ವರದಿಯ ಬಗ್ಗೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ನ್ಯಾಯಾಮೂರ್ತಿ ಕಮಲ್‌ ಅವರು ಯಾವ ರೀತಿಯ ಪ್ರಜೆಗಳನ್ನು ರೂಪಿಸುತ್ತಿದ್ದೇವೆ. ಯಾವ ಸಮಾಜವನ್ನು ನಿರ್ಮಿಸುತ್ತಿದ್ದೇವೆ. ಇದಕ್ಕೆ ಯಾರನ್ನು ಹೊಣೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. 2013ರಲ್ಲಿ ಪಿಐಎಲ್‌ ದಾಖಲಾಗಿದೆ. ಮೂರು ಸರ್ಕಾರಗಳು ಬದಲಾಗಿವೆ. ಸಮಸ್ಯೆ ಬಗೆಹರಿಸಲು ಗಂಭೀರ ಪ್ರಯತ್ನ ಮಾಡಿ. ಇನ್ನು ಮುಂದೆ ಇದನ್ನು ಸಮರ್ಥಿಸಲು ಹೋಗಬೇಡಿ. ಅನುಪಾಲನಾ ವರದಿಯನ್ನ ಚಲ್ತಾ ಹೈ ಎಂದು ಒಪ್ಪಿಕೊಳ್ಳಬೇಕೆ? ಎಂದು ನ್ಯಾಯಾಮೂರ್ತಿ ಕಮಲ್ ಅವರು ಮೌಖಿಕವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್ ಅಭಿಪ್ರಾಯವೇನು?
ಮೂಲಸೌಲಭ್ಯಗಳೇ ಇಲ್ಲದ ಇಂಥಾ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಯಾವ ಪೋಷಕರೂ ಒಪ್ಪುವುದಿಲ್ಲ. ನಾಮ್ಕೆವಾಸ್ತೆಗೆ ಸೌಲಭ್ಯ ಎನ್ನುವ ರೀತಿಯಲ್ಲಿ ಪರಿಸ್ಥಿತಿ ಇದೆ. ಸರ್ಕಾರದ ಪ್ರಾಧಿಕಾರಗಳ ಪ್ರಯತ್ನವು ಕಣ್ಣೊರೆಸುವ ತಂತ್ರದಂತಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್ ಆದೇಶವೇನು?
ಸರ್ಕಾರವು ಮೂಲಸೌಕರ್ಯದ ಕುರಿತು ಶಾಲೆಗಳಲ್ಲಿ ಹೊಸದಾಗಿ ಸಮೀಕ್ಷೆ ನೀಡಬೇಕು. ಕೆಎಸ್‌ಎಲ್‌ಎಸ್‌ಎ ತಾಲ್ಲೂಕು ಸದಸ್ಯ ಕಾರ್ಯದರ್ಶಿಯು ಅಂಥಾ ಸರ್ವೇಯಲ್ಲಿ ಭಾಗಿಯಾಗಬೇಕು. 3 ತಿಂಗಳಲ್ಲಿ ಸಮೀಕ್ಷೆ ಮುಗಿಯಬೇಕು. ಸಮೀಕ್ಷಾ ವರದಿಗೆ ಕೆಎಸ್‌ಎಲ್‌ಎಸ್‌ಎ ತಾಲ್ಲೂಕು ಸದಸ್ಯ ಕಾರ್ಯದರ್ಶಿ ಸಹಿ ಮಾಡಬೇಕು. ಸಮೀಕ್ಷೆಯಲ್ಲಿ ಪತ್ತೆಯಾಗುವ ಕುಡಿಯುವ ನೀರಿನ ಸಮಸ್ಯೆ ತುರ್ತಾಗಿ ಪರಿಹರಿಸಬೇಕು. ಈ ಆದೇಶವನ್ನು ಮುಖ್ಯ ಕಾರ್ಯದರ್ಶಿ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಗಮನಕ್ಕೆ ತರಬೇಕು. ಮೂರು ತಿಂಗಳಲ್ಲಿ ವರದಿ ಸಲ್ಲಿಬೇಕು ಎಂದು ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠ ಆದೇಶಿಸಿ ವಿಚಾರಣೆಯನ್ನು ಮುಂದೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ; ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ

https://newsfirstlive.com/wp-content/uploads/2023/06/HIGHCOURT.jpg

Load More