ಫ್ಯಾನ್ ತಿರುಗಿಸುವ ಲಡ್ಡು ಮುತ್ಯಾ ಯಾರು ಗೊತ್ತಾ? ಅನುಕರಣೆಯ ಹೆಸರಲ್ಲಿ ಅಸಲಿ ಪವಾಡ ಪುರಷನಿಗೆ ಅವಮಾನ?

author-image
Gopal Kulkarni
Updated On
VIDEO: ತಿರುಗೋ ಫ್ಯಾನ್ ನಿಲ್ಲಿಸೋ ಪವಾಡ.. ಲಡ್ಡು ಮುತ್ಯಾರನ್ನೇ ಅಣಕಿಸಿದ ಶಿಖರ್ ಧವನ್!
Advertisment
  • ಲಡ್ಡು ಮುತ್ಯಾಗೆ ಮಾಡುತ್ತಿರುವ ಅಪಹಾಸ್ಯ ನಿಜಕ್ಕೂ ಅಪಾಯಕಾರಿಯೇ?
  • ಲಡ್ಡು ಮುತ್ಯಾನನ್ನು ಅವಮಾನ ಮಾಡುತ್ತಿರುವವರಿಗೆ ಕಾದಿದೆಯಾ ಕಂಟಕ?
  • ರೀಲ್ಸ್ ಮಾಡುವವರಿಗೆ ಲಡ್ಡು ಮುತ್ಯಾನ ಭಕ್ತಗಣ ಹೇಳಿದ್ದೇನು ಅಂತ ಗೊತ್ತಾ?

ಅನುಕರಣೆಯ ಹೆಸರಲ್ಲಿ ಲಡ್ಡು ಮುತ್ಯಾನ ಅಪಮಾನ; ಜಸ್ಟ್​​, 30 ಸೆಕೆಂಡ್​ಗಳ ರೀಲ್ ಸದ್ಯಕ್ಕಂತೂ ​ರಾಕಿಭಾಯ್ ರೇಂಜಲ್ಲಿ ರೂಲ್ ಮಾಡ್ತಿದೆ. ಭಾಷೆ ಗೀಷೆ ಅನ್ನೋ ಕ್ಲೀಷೆಗಳ ಗಡಿಯನ್ನೇ ಚಚ್ಚಿ ಬಿಸಾಕ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಚಿಂದಿ ಚಿತ್ರಾನ್ನ ಬೂಂದಿ ಮೊಸರನ್ನ ಹಂಚ್ತಿದೆ. ಪ್ಯಾನ್​ ಇಂಡಿಯಾ, ಅಲ್ಲಲ್ಲಾ, ಫ್ಯಾನ್ ಇಂಡಿಯಾ ಫಿಲ್ಮ್​ಗಳಿಗೆಲ್ಲಾ ಪೈಪೋಟಿ ನೀಡ್ತಿದೆ. ಇಂಥಾ ಹವಾದ ಮಧ್ಯೆಯೇ ಆವಾಜ್ ಹಾಕ್ತಿರೋ ಒಂದೇ ಒಂದು ಪ್ರಶ್ನೆ. ಯಾರೀ ಫ್ಯಾನ್ ಇಂಡಿಯಾ ಮುತ್ಯಾ?
ಮೋದಿ ವಾಯ್ಸ್​​ನಲ್ಲೂ ‘ಫ್ಯಾನ್ ಇಂಡಿಯಾ ಮುತ್ಯಾ’ ಹಾಡು!

publive-image

ವಿಶೇಷ ಚೇತನರಂತೆ ಕಾಣುವ ವ್ಯಕ್ತಿಯೊಬ್ಬರು ಕುರ್ಚಿ ಮೇಲೆ ಕುಳಿತು ಗಿರಗಿರ ತಿರುಗುವ ಫ್ಯಾನನ್ನ ಒಂದೇ ಕೈಯಲ್ಲಿ ನಿಲ್ಲಿಸ್ತಾರೆ. ಬಳಿಕ ಅದ್ರಿಂದ ಕೈಗೆ ಅಂಟಿಕೊಂಡಿದ್ದ ಧೂಳು ಎತ್ತಿ ಹಿಡಿದುಕೊಂಡ ಭಕ್ತರ ಹಣೆಗೆ ತಿಲಕದಂತೆ ಇಡ್ತಾರೆ. ಬ್ಯಾಗ್ರೌಂಡ್​​ನಲ್ಲಿ ಲಡ್ಡು ಮುತ್ಯಾನ ಅವತಾರ ಈಗಿನ ಸಂಚಾರಿ ದೇವರ. ಸಂಚಾರ ಮಾಡುತ್ತಾ ಭಕ್ತರ ಮನೆಯನ್ನ ಬೆಳಕನ್ನ ಮಾಡ್ಯಾರ. ಅವರೇ ಲಡ್ಡು ಮುತ್ಯಾರ ಅನ್ನೋ ಹಾಡು ಪ್ಲೇ ಆಗ್ತಾ ಇರುತ್ತೆ. ಇಂಥಾ 30 ಸೆಕೆಂಡ್​ಗಳ ರೀಲ್​​ ವಿಡಿಯೋ ತೆಲುಗು, ತಮಿಳು, ಹಿಂದಿ ಭಾಷಿಕ ಜನರೂ ವೈರಲ್ ಮಾಡ್ತಿದ್ದಾರೆ. ಇಂಥದ್ದೊಂದು ರೀಲ್ ಎಷ್ಟರಮಟ್ಟಿಗೆ ವೈರಲ್ ಆಗ್ತಿದೆ ಅಂದ್ರೆ ಪ್ಯಾನ್ ಇಂಡಿಯಾ ಫಿಲ್ಮ್​​ ಟೀಸರ್​, ಟ್ರೈಲರ್​ಗಳ ವೀವ್ಸ್​ ದಾಖಲೆಗಳನ್ನ ಪುಡಿಗಟ್ಟಿ ಹೊಸ ದಾಖಲೆ ಬರೀತಿದೆ. ಎಐ ತಂತ್ರಜ್ಞಾನದ ಮೂಲಕ ಪ್ರಧಾನಿ ಮೋದಿ ಧ್ವನಿಯಲ್ಲೂ ಈ ಲಡ್ಡು ಮುತ್ಯಾರ ಹಾಡು ವೈರಲ್ ಆಗ್ತಿದೆ.

publive-image

ಅದೆಷ್ಟೋ ಮಂದಿ ಇದೇ ಲಡ್ಡು ಮತ್ಯಾರ ವೈರಲ್ ರೀಲ್​​​ ಅನ್ನೇ ಅನಿಮೇಷನ್ ವಿಡಿಯೋ ಮಾಡಿದ್ದಾರೆ. ಇನ್ನೊಂದಷ್ಟು ಮಂದಿ ಚಿತ್ರ ವಿಚಿತ್ರವಾಗಿ ಅಭಿನಯಿಸೋ ಮೂಲಕ ಟ್ರೋಲ್ ಮಾಡ್ತಿದ್ದಾರೆ. ಒಂದಷ್ಟು ಮಂದಿಯ ಶ್ರದ್ಧೆ ನಂಬಿಕೆಯನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಅದಕ್ಕಿಂತಲೂ ಮಿಗಿಲಾಗಿ ವಿಶೇಷ ಚೇತನ ವ್ಯಕ್ತಿಯೊಬ್ಬರನ್ನು ಅಕ್ಷರಶಃ ಗೇಲಿ ಮಾಡುತ್ತಿದ್ದಾರೆ. ಇದಕ್ಕಿಂತಲೂ ರಣರೋಚಕ ಸಂಗತಿ ಏನಂದ್ರೆ, ತಿರುಪತಿ ಲಡ್ಡು ವಿವಾದಕ್ಕಿಂತ್ಲೂ ಹೆಚ್ಚು ಚರ್ಚೆ ಆಗ್ತಿರೋ ಮ್ಯಾಟರ್​ ಇದೇ ಲಡ್ಡು ಮುತ್ಯಾ ಹಾಡು ಪಾಡು ಪಜೀತಿ. ಅಸಲಿಗೆ ಫೇಮಸ್​ ಯುಟ್ಯೂಬರ್​ ಮಲ್ಯ ಬಾಗಲಕೋಟೆಯ ಲಡ್ಡು ಮತ್ಯಾರ ಬಗ್ಗೆ ಬೇರೆಯದ್ದೇ ಸಂದೇಶ ನೀಡುತ್ತಿದ್ದಾರೆ.
ರಾಜ್ಯದಾಚೆಗಿನ ಜನರೂ ಸಹ ಸಂಚಾರಿ ದೇವರ ಅನ್ನೋ ಹಾಡಿನಲ್ಲಿ ಲಡ್ಡು ಮುತ್ಯಾರಿಗೆ ಅಪಹಾಸ್ಯ ಮಾಡುತ್ತಿದ್ದಾರೆ. ಫ್ಯಾನ್​​ ತಿರುಗಿಸೋ ಫ್ಯಾನ್ ಇಂಡಿಯಾ ಮುತ್ಯಾ ವಿಚಾರದಲ್ಲೂ ಗೇಲಿ ಮಾಡುತ್ತಿದ್ದಾರೆ. ಇಂಥದ್ದು ಒಳ್ಳೆಯದಲ್ಲ. ಯಾರದ್ರೂ ಇಂಥಾ ರೀಲ್​​ ಮಾಡಿದ್ರೆ ದಯಮಾಡಿ ಡಿಲೀಟ್​ ಮಾಡಿಬಿಡಿ ಅಂತ ವಿನಂತಿಸಿಕೊಳ್ಳುತ್ತಿದ್ದಾರೆ. ಯಾಕಂದ್ರೆ, ಅಸಲಿ ಲಡ್ಡು ಮುತ್ಯಾ ಕಥೆ ಕೇಳಿದ್ರೆ ಅಕ್ಷರಶಃ ನೀವು ಕ್ಷಮೆ ಕೇಳುತ್ತೀರಿ. ಅಂಥಾ ಪವಾಡ ಪುರುಷ ಅಸಲಿ ಲಡ್ಡು ಮುತ್ಯಾ

publive-image

ಅಸಲಿ ಲಡ್ಡು ಮುತ್ಯಾನ ಕಥೆ ಕೇಳಿದ್ರೆ ಕ್ಷಮೆ ಕೇಳೋದು ಫಿಕ್ಸ್!
ಇದೀಗ ಎಲ್ಲಾ ರೀಲ್ಸ್​ಗಳಲ್ಲಿ ವೈರಲ್ ಆಗ್ತಿರೋ ವಿಶೇಷ ಚೇತನ ಲಡ್ಡು ಮುತ್ಯಾ ಅಲ್ಲವೇ ಅಲ್ಲ. ಫ್ಯಾನ್ ಧೂಳನ್ನೇ ಭಕ್ತರ ಹಣೆಗೆ ಹಚ್ಚುವ ಮನುಷ್ಯ ಲಡ್ಡು ಮುತ್ಯಾ ಅಲ್ಲ. ಆತ ಪವಾಡ ಪುರುಷನೋ? ಯಾರೋ? ಅದೂ ಸಹ ಎಷ್ಟೋ ಜನರಿಗೆ ಗೊತ್ತಿಲ್ಲ. ತೀರಾ ಸಣ್ಣ ವಿಚಾರವಾಗಿ ಕಾಣುವ ತಿರುಗೋ ಫ್ಯಾನ್​​ ನಿಲ್ಲಿಸೋ ಸಂಗತಿ ಪವಾಡದಂತೆಯೂ ಕಾಣೋದಿಲ್ಲ. ಹಾಗಾಗಿಯೇ ಭಾಷೆ ಗೊತ್ತಿರದ ಜನ, ಭಾವ ಗೊತ್ತಿರದ ಜನ ಕಾಮಿಡಿ ಐಟಂ ತರಹ ವಿಶೇಷ ಚೇತನ ವ್ಯಕ್ತಿಯ ವಿಡಿಯೋವನ್ನ ವೈರಲ್ ಮಾಡುತ್ತಿದ್ದಾರೆ. ಇದಕ್ಕಿಂತಲೂ ಮಿಗಿಲಾಗಿ ಅಸಲಿ ಲಡ್ಡು ಮುತ್ಯಾನ ಕಥೆ ಕೇಳಿದ್ರೆ ಯಾರಾದ್ರೂ ಸಹ ಕೈ ಎತ್ತಿ ಮುಗಿದು ಕ್ಷಮೆ ಕೇಳುತ್ತಾರೆ. ಯಾಕಂದ್ರೆ ಅಸಲಿ ಲಡ್ಡು ಮುತ್ಯಾ ಅಕ್ಷರಶಃ ಪವಾಡ ಪುರುಷ.

ಅನುಕರಣೆ ಹೆಸರಿನಲ್ಲಿ ಅಸಲಿ ಮುತ್ಯಾನ ಅಪಹಾಸ್ಯ ಎಷ್ಟು ಸರಿ?
ವಿಶೇಷ ಚೇತನ ಲಡ್ಡು‌ಮುತ್ಯಾನ ರೀತಿ ಎತ್ತಿ ಹಿಡಿಯೋದು, ನಂತರ ತಿರುಗುವ ಫ್ಯಾನ್ ನಿಲ್ಲಿಸಿ ಅದರ ಧೂಳನ್ನೆ ಭಸ್ಮದ ರೀತಿ ಲೇಪಿಸುವ ವಿಡಿಯೋಗಳನ್ನು ಯುವಕರು, ಹಿರಿಯರು, ಮಕ್ಕಳು ಅನುಕರಣೆ ಮಾಡುತ್ತಿದ್ದಾರೆ. ಅಚ್ಚರಿಯ ಸಂಗತಿ ಅಂದ್ರೆ ಕರ್ನಾಟಕ ಮಾತ್ರವಲ್ಲದೇ, ಮಹಾರಾಷ್ಟ್ರ, ಆಂದ್ರ ,ತಮಿಳುನಾಡು ದೇಶದಾದ್ಯಂತ, ವಿದೇಶದಲ್ಲೂ ಈ ವೈರಲ್ ರೀಲ್ಸ್ ಅನುಕರಣೆ ಮಾಡುತ್ತಿದ್ದಾರೆ. ಸದ್ಯ, ಅಸಲಿ ಲಡ್ಡು ಮುತ್ಯಾನ ಭಕ್ತರು ಎತ್ತಿರೋ ಪ್ರಶ್ನೆ ಹೊಸ ಚರ್ಚೆ ಹುಟ್ಟು ಹಾಕಿದೆ. ಅನುಕರಣೆ ಹೆಸರಿನಲ್ಲಿ ಲಡ್ಡು ಮುತ್ಯಾನ ಅಪಹಾಸ್ಯ ಎಷ್ಟು ಸರಿ? ಇಂಥದ್ದೊಂದು ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಅಲ್ಲದೇ, ಲಡ್ಡು ಮುತ್ಯಾ ಅವತಾರ ಎನ್ನುತ್ತಿರೋ ವಿಶೇಷ ಚೇತನ ವ್ಯಕ್ತಿ ಬಗ್ಗೆ ಬಹುದೊಡ್ಡ ಆರೋಪವನ್ನೂ ಮಾಡುತ್ತಿದ್ದಾರೆ.

publive-image

"ಫ್ಯಾನ್ ನಿಲ್ಲಿಸ್ತೀನಿ ಅನ್ನೋರು ಖರೇ ಮುತ್ಯಾ ಅಲ್ಲ" ಭಕ್ತರ ಆರೋಪ!
ಫ್ಯಾನ್ ನಿಲ್ಲಿಸಿದ ಮಾತ್ರಕ್ಕೆ ಯಾರೂ ದೇವರಾಗೋದಿಲ್ಲ. ಫ್ಯಾನ್​​ ಮೇಲಿನ ಧೂಳು ಹಣೆಗೆ ಇಟ್ಟುಕೊಂಡರೆ ಕಷ್ಟ ಬಗೆಹರಿಯೋದೂ ಇಲ್ಲ. ಯಾರೋ ಕೆಲವರ ನಂಬಿಕೆ ಕಾರಣಕ್ಕೆ ಬಹುಜನರ ಭಕ್ತಿಯ ಅಸಲಿ ಲಡ್ಡು ಮುತ್ಯಾಗೆ ಇಲ್ಲಿ ಅಪಮಾನವಾಗುತ್ತಿದೆ. ಹೀಗೆ ಫ್ಯಾನ್ ನಿಲ್ಸೋರು ಅಸಲಿ ಲಡ್ಡು ಮುತ್ಯಾ ಅಲ್ಲ. ಲಡ್ಡು ಮುತ್ಯಾ ಹೆಸರಿನಲ್ಲಿ ಭಕ್ತರಿಗೆ ಮೋಸ ಮಾಡ್ತಿದ್ದಾರೆ ಅನ್ನೋ ಗಂಭೀರ ಆರೋಪವನ್ನು ಅಸಲಿ ಲಡ್ಡು ಮುತ್ಯಾನ ಭಕ್ತರು ಮಾಡ್ತಿದ್ದಾರೆ. ಅಷ್ಟೇ ಅಲ್ಲ, ಲಡ್ಡು ಮುತ್ಯಾನ ಹೆಸರಿನಲ್ಲಿ ಮೋಸ ಮಾಡಿದರೇ ಒಳ್ಳೆಯದಾಗೋದಿಲ್ಲ ಅನ್ನೋ ಮುನ್ನೆಚ್ಚರಿಕೆಯನ್ನೂ ನೀಡುತ್ತಿದ್ದಾರೆ.

‘ಫ್ಯಾನ್’​​ ಇಂಡಿಯಾ ಮುತ್ಯಾ ಬಗ್ಗೆ ಶುರುವಾಗಿದೆ ಹಲವು ಅನುಮಾನ!
ಯುಟ್ಯೂಬ್, ಫೇಸ್​​ಬುಕ್, ಇನ್ಸ್ಟಾಗ್ರಾಮ್ ಓಪನ್ ಮಾಡಿದ್ರೆ ಸಾಕು ಹತ್ತಾರು ಲಡ್ಡು ಮುತ್ಯಾನ ರೀಲ್ಸ್​ಗಳು ಸಖತ್​ ಸೌಂಡ್​​ ಮಾಡ್ತಿವೆ. ತಿರುಗುವ ಫ್ಯಾನ್ ನಿಲ್ಲಿಸಿ ಅದರ ಧೂಳನ್ನು ವಿಭೂತಿ ರೀತಿ ಭಕ್ತರ ಹಣೆಗೆ ಹಚ್ಚುವ ರೀಲ್ಸ್​ಗಳು ಅಸಲಿ ಲಡ್ಡು ಮುತ್ಯಾನನ್ನ ಗೇಲಿ ಮಾಡುವಂತಿವೆ. ವಿಶೇಷ ಚೇತನ ವ್ಯಕ್ತಿಯ ವಿಡಿಯೋವನ್ನೇ ಹತ್ತಾರು ಜನ ಅನುಕರಣೆ ಮಾಡಿ ರೀಲ್ಸ್ ಮಾಡ್ತಿದ್ದಾರೆ. ಆದರೆ ಯಾರು ಈ ಲಡ್ಡು ಮುತ್ಯಾ, ಅವರು ಮಾಡಿದ ಪವಾಡವೇನು? ಲಡ್ಡು ಮುತ್ಯಾನ ಹಾಡಿಗೆ ರೀಲ್ಸ್ ಮಾಡಿದ ವಿಕಲಚೇತನ ವ್ಯಕ್ತಿ ಪವಾಡ ಪುರುಷನಾ ಎಂಬ ಬಗ್ಗೆ ಹಲವರಿಗೆ ಹಲವು ಅನುಮಾನಗಳು ಮೂಡಿವೆ. ಈ ವಿಶೇಷ ಚೇತನ ವ್ಯಕ್ತಿ ಕೇವಲ ಸಂಚಾರಿ ದೇವರಷ್ಟೇ. ಈತ ಲಡ್ಡು ಮುತ್ಯಾನ ಅವತಾರವಂತೂ ಅಲ್ಲವೇ ಅಲ್ಲ ಅಂತ ಮಾತಾಡ್ತಿದ್ದಾರೆ.

ಲಡ್ಡು ಮುತ್ಯಾನ ಅವತಾರ ಈಗಿನ ಸಂಚಾರಿ ದೇವರ’ ಎಂಬ ಹಾಡಿನ ಮೂಲಕ ಫ್ಯಾನ್ ನಿಲ್ಲಿಸಿ ಭಕ್ತರನ್ನು ಆಶೀರ್ವಾದ ಮಾಡುವ ವಿಶೇಷ ಚೇತನ ವ್ಯಕ್ತಿ ಯಾರು? ಏನು? ಅನ್ನೋ ಚರ್ಚೆ ಜೋರಾಗಿ ನಡೀತಿದೆ. ಇಷ್ಟು ದಿನ ಢೋಂಗಿ ಬಾಬಾ, ಫೇಕ್ ಸ್ವಾಮೀಜಿಗಳ ವಿಡಿಯೋಗಳು ಅಲ್ಲೋಲ ಕಲ್ಲೋಲವನ್ನ ಸೃಷ್ಟಿಸಿದ್ದವು. ಅದೇ ರೀತಿಯಲ್ಲೇ ಫ್ಯಾನ್ ಇಂಡಿಯಾ ಮುತ್ಯಾ ಅಂತ ಹೇಳಿಕೊಳ್ಳುತ್ತಿರುವ ರೀಲ್ ಹಿಂದಿನ ಅಸಲಿಯತ್ತಿನ ಚರ್ಚೆ ಶುರುವಾಗಿದೆ. ಪವಿತ್ರ ವಿಭೂತಿ ಬದಲಿಗೆ ಫ್ಯಾನ್ ಮೇಲಿನ ಧೂಳನ್ನೇ ತಿಲಕವಾಗಿಡುವ ವ್ಯಕ್ತಿ ವಿಚಾರಕ್ಕೆ ಅದೊಂದು ಮಠ ರೊಚ್ಚಿಗೆದ್ದಿದೆ. ಅಲ್ಲಿನ ಭಕ್ತರಂತೂ ನಮ್ಮ ಮುತ್ಯಾನಿಗೆ ಅಪಮಾನ ಮಾಡಬೇಡಿ ಅಂತ ಕೋರುತ್ತಿದೆ. ಇದೇ ಮುಂದುವರಿದರೇ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋ ಸಂದೇಶ ರವಾನಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment