Advertisment

ನಟ ದರ್ಶನ್​​ ಹಿಂದೆ ಪವಿತ್ರಾಗೌಡ ಬಿದ್ದಿದ್ದೇಕೆ? ಸ್ಫೋಟಕ ಸತ್ಯ ಬಿಚ್ಚಿಟ್ಟ ಲೇಡಿ ಡೈರೆಕ್ಟರ್​​!

author-image
Ganesh Nachikethu
Updated On
ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.. ದರ್ಶನ್, ಪವಿತ್ರ ಗೌಡ ಸೇರಿ ಮತ್ತೆ ಮೂವರ ಅರೆಸ್ಟ್; ಮುಂದೇನು?
Advertisment
  • ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರೋ ಆರೋಪಿ ಪವಿತ್ರಾ!
  • ಪವಿತ್ರಗೌಡ ಬಗ್ಗೆ ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಸಿನಿಮಾ ನಿರ್ದೇಶಕಿ
  • ಆಶಿಕಿ ಹೆಸರಿನ ಸಿನಿಮಾಗೆ ಆಯ್ಕೆ ಆಗಿದ್ದ ನಟಿ ಪವಿತ್ರಾಗೌಡ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅಂದರ್ ಆಗಿರುವ ಎ1 ಪವಿತ್ರಾ ಗೌಡ ಅವರ ಖತರ್ನಾಕ್ ರಹಸ್ಯ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಅವರು ದರ್ಶನ್ ಹಿಂದೆ ಬಿದ್ದಿದ್ದು ಯಾಕೆ ಅನ್ನೋ ವಿಚಾರವನ್ನ ಪವಿತ್ರಾಳ ಪ್ರಾರಂಭಿಕ ದಿನಗಳನ್ನು ಕಣ್ಣಾರೆ ಕಂಡಿರುವ ಸಿನಿಮಾ ನಿರ್ದೇಶಕಿ ಸ್ಫೋಟಕ ವಿಚಾರಗಳನ್ನು ಹೊರಹಾಕಿದ್ದಾರೆ.

Advertisment

ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ನಟ ದರ್ಶನ್ ಌಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಸೇರಿದ್ದಾರೆ. ತೀವ್ರವಾಗಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳ ಹತ್ತು ಹಲವು ವಿಚಾರಗಳು ಹೊರಬರ್ತಿವೆ. ಆದ್ರೆ ಈ ಪೈಕಿ ಪ್ರಕರಣದ ಮೊದಲನೇ ಆರೋಪಿ ಕೆಡಿಲೇಡಿ ಪವಿತ್ರಾ ಗೌಡ ಬಗ್ಗೆ ನಿರ್ದೇಶಕರೊಬ್ಬರು ಶಾಕಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾರೆ.

‘ಪವಿತ್ರಾ ಗೌಡಗೆ ನಟಿಯಾಗೋ ಆಸೆಯೇ ಇರಲಿಲ್ಲ’

ಚಾನ್ಸ್‌ಗಾಗಿ ಅಲೆಯುತ್ತಿದ್ದ ಪವಿತ್ರಾ ಗೌಡಗೆ ನಟಿಯಾಗೋ ಆಸೆಯೇ ಇರಲಿಲ್ಲ ಅಂತ ಪವಿತ್ರಾಳನ್ನು ಆಶಿಕಿ ಹೆಸರಿನ ಸಿನಿಮಾಗೆ ಆಯ್ಕೆ ಮಾಡಿದ್ದ ನಿರ್ದೇಶಕಿ ಚಂದ್ರಕಲಾ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ ಮತ್ತು ಪವಿತ್ರಾ ಗೌಡ ಬಗ್ಗೆ ಮಾತನಾಡಿದ ನಿರ್ದೇಶಕಿ ಚಂದ್ರಕಲಾ, ಪವಿತ್ರಾಗೆ ಚಿತ್ರರಂಗದಲ್ಲಿ ಬೆಳೆಯೋ ಬಯಕೆ ಇರಲಿಲ್ಲ. ಎಲ್ಲ ಒಪ್ಪಿಕೊಂಡು ಆಮೇಲೆ ಏಕಾಏಕಿ ಕಿರಿಕ್ ತೆಗೆದಳು. ಅವಳು ಹಿಂದೆ ಸರಿದಿದ್ದೇ ನನಗೆ ಒಳ್ಳೆದಾಯ್ತು ಎಂದಿದ್ದಾರೆ.

publive-image

‘ಪವಿತ್ರಾ ಗೌಡಗೆ ಸೆಟ್ಲ್​ ಆಗೋದಷ್ಟೇ ಬೇಕಿತ್ತು’

ಪವಿತ್ರಾ ಮೊದ್ಲು ತಿಮ್ಮಿ ಥರಾ ಇದ್ಲು. ಈಗ ಬೇರೆ ಲೆವೆಲ್ಲಿಗೆ ಬೆಳೆದಿದ್ದಾಳೆ. ಅವಳು ಹೀರೋಯಿನ್ ಆಗಿ ಬೆಳಿಬೇಕು ಅಂತಾ ಬಂದವಳಲ್ಲ. ಹೀರೋಯಿನ್ ಆಗಬೇಕು ಅನ್ನೋರು ಈ ಥರಾ ಇರಲ್ಲ ಅಂತ ಚಂದ್ರಕಲಾ ಹೇಳಿದ್ದಾರೆ.

Advertisment

ವಿಜಯಲಕ್ಷ್ಮೀ ಬಳಸುವ ವಸ್ತುವೆ ಬೇಕೆನ್ನುತ್ತಿದ್ದ ಪವಿತ್ರಾ!

ಮುಂದುವರೆದು ಮಾತನಾಡಿದ ಚಂದ್ರಕಲಾ, ದರ್ಶನ್​ಗೆ ಪಶ್ಚಾತ್ತಾಪ ಆಗಿರುತ್ತೆ. ಪವಿತ್ರಾಳಿಂದ ದೂರ ಉಳಿದುಕೊಳ್ತಾರೆ. ಪವಿತ್ರಾಗೆ ಬೇಕಿರೋದು ದರ್ಶನ್ ಮಾತ್ರ. ಅಲ್ಲದೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅದೇನ್ ಬಳಸ್ತಾರೋ ಅದೇ ಪವಿತ್ರಾಗೂ ಬೇಕಿತ್ತು ಅನ್ನೋ ವಿಚಾರವನ್ನ ಚಂದ್ರಕಲಾ ಬಹಿರಂಗಗೊಳಿಸಿದ್ದಾರೆ.

ಒಟ್ಟಾರೆ ಪವಿತ್ರಾ ಗೌಡಳ ನೈಜ ಮುಖವನ್ನ ಹಾಗೂ ಆಕೆಯ ಶೋಕಿ ಜೀವನದ ಖಯಾಲಿ ಬಗ್ಗೆ ಚಂದ್ರಕಲಾ ಹಲವು ವಿಚಾರ ಬಾಯ್ಬಿಟ್ಟಿದ್ದಾರೆ. ಇನ್ಮುಂದಾದ್ರೂ ದರ್ಶನ್ ಪವಿತ್ರಾ ಗೌಡಳ ಸಾಂಗತ್ಯ ಬಿಡ್ತಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ:ರೇಣುಕಾಸ್ವಾಮಿ ಫಿಂಗರ್ ಪ್ರಿಂಟ್‌, 200 ಸಾಕ್ಷಿಗಳು; ಕೊಲೆ ಕೇಸ್‌ನಲ್ಲಿ ಪೊಲೀಸರ ಕೈಗೆ ಸ್ಫೋಟಕ ಎವಿಡೆನ್ಸ್‌!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment