/newsfirstlive-kannada/media/post_attachments/wp-content/uploads/2024/10/Gutkha-UP.jpg)
ಗುಟ್ಕಾ ಸೇವನೆಯ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳ ಪ್ರಾರಂಭವಾಗಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಕರ್ವಾ ಚೌತ್ ಆಚರಣೆಯ ಭಾಗವಾಗಿ ದಿನವಿಡೀ ಉಪವಾಸದಲ್ಲಿದ್ದ ಸಾರಿಕಾ ಎಂಬಾಕೆ ಸಂಜೆಯ ವೇಳೆ ಪತಿ ಸುಲಭ್ ನಾಮದೇವ್‌ಗೆ ಪೂಜೆ ಮಾಡಲು ಬಂದಿದ್ದಾಳೆ. ಈ ವೇಳೆಯೂ ಆತ ಗುಟ್ಕಾ ಜಗಿಯುತ್ತಿದನ್ನು ಕಂಡು ಬೇಸರಗೊಂಡಿದ್ದಾಳೆ. ಜೊತೆಗೆ ಈ ವಿಚಾರವಾಗಿ ಜಗಳ ನಡೆದಿದ್ದು, ಬಳಿಕ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ:ಬೆಳಗ್ಗೆ ಪತಿಗಾಗಿ ಕರ್ವಾ ಚೌತ್ ವ್ರತ; ಸಂಜೆ ಅದೇ ಗಂಡನಿಗೆ ಹಬ್ಬದ ಊಟದಲ್ಲಿ ವಿಷ ಹಾಕಿ ಸಾ*ಸಿದ ಪತ್ನಿ
ಸಾರಿಕಾ ಎಂಬ ಮಹಿಳೆ ಕರ್ವಾಚೌತ್ ಅಂಗವಾಗಿ ಪತಿಯ ಶ್ರೇಯಸ್ಸನ್ನು ಬಯಸಿ ಈಡೀ ದಿನ ಉಪವಾಸವಿದ್ದಳು. ಸಂಜೆಯ ವೇಳೆ ಚಂದ್ರ ಮೂಡಿದಾಗ ಪೂಜೆ ಮಾಡಲು ಸಾರಿಕಾ ಸಿದ್ಧಗೊಂಡಿದ್ದಾಳೆ. ಈ ವೇಳೆ ಆಕೆಯ ಪತಿ ನಾಮದೇವ್ ಪೂಜೆಯ ವೇಳೆಯೂ ಗುಟ್ಕಾ ಜಗಿಯುತ್ತಿರುವುದನ್ನು ಕಂಡು ಬೇಸರಗೊಂಡಿದ್ದಾಳೆ. ಇದೇ ವಿಚಾರವಾಗಿ ಪತಿ-ಪತ್ನಿಯರ ನಡವೆ ಒಂದು ದೊಡ್ಡ ಜಗಳವೂ ಕೂಡ ನಡೆದು ಹೋಗಿದೆ.
ಇದರಿಂದ ಬೇಸತ್ತ ಸಾರಿಕಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚೆಂದದ ಸಂಸಾರದಲ್ಲಿ ಪತಿಯ ಗುಟ್ಕಾ ಸೇವನೆ ಚಟ ದೊಡ್ಡ ದುರಂತಕ್ಕೆ ಕಾರಣವಾಗಿದೆ. ಜರಡಿಯಲ್ಲಿ ಚಂದ್ರನನ್ನು ನೋಡಿ ನಂತರ ಪತಿಯನ್ನು ನೋಡಿದ ಬಳಿಕ ಪತಿ ಆಕೆಗೆ ಸಿಹಿ ತಿನಿಸಿ ನೀರು ಕುಡಿಸುವುದರೊಂದಿಗೆ ಈ ವ್ರತವು ಮುಗಿಯುತ್ತದೆ. ಆದ್ರೆ ಇವರ ಬಾಳಿನಲ್ಲಿ ವ್ರತದ ಅಂತ್ಯದಲ್ಲಿ ಒಂದು ಮೃತ್ಯುವೇ ಸಂಭವಿಸಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us