/newsfirstlive-kannada/media/post_attachments/wp-content/uploads/2025/06/Labrador-Retriever.jpg)
ಬೆಂಗಳೂರು: ಮನುಷ್ಯರಿಗೆ ನಡುಕ ಹುಟ್ಟಿಸುತ್ತೆ ಈ ಸ್ಟೋರಿ. ಮಹಿಳೆಯ ಈ ಕೃತ್ಯಕ್ಕೆ ಪ್ರಾಣಿ ಪ್ರಿಯರು ಬೆಚ್ಚಿ ಬಿದ್ದಿದ್ದಾರೆ. ಹೌದು, ಮಹದೇವಪುರದ ಅಪಾರ್ಟ್ಮೆಂಟ್ವೊಂದರಲ್ಲಿ ಮಹಿಳೆಯೊಬ್ಬಳು ತಾನು ಸಾಕಿದ್ದ ಲ್ಯಾಬ್ರಡಾರ್ ರಿಟ್ರೈವರ್ ನಾಯಿಗೆ ಚಿತ್ರ ಹಿಂಸೆ ಕೊಟ್ಟು ಸಾಯಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಜೀವ ಬಿಟ್ಟಿರೋ ನಾಯಿ ಮೃತದೇಹದ ಜೊತೆ ವಾಸ ಮಾಡಿರುವ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಗುಡ್ನ್ಯೂಸ್; KRS ಡ್ಯಾಂ ಐತಿಹಾಸಿಕ ದಾಖಲೆಗೆ ಕೇವಲ ಒಂದೇ 1 ಅಡಿ ಮಾತ್ರ ಬಾಕಿ
AKME ballet apartment ಅಸೋಸಿಯೇಷನ್ 404 ಫ್ಲ್ಯಾಟ್ನಲ್ಲಿ ಮಾಲಕಿ ತ್ರಿಪರ್ಣಾ ಎಂಬಾಕೆ ನಾಯಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿದ್ದು, ಮನೆಯಲ್ಲಿ ಮೃತದೇಹದ ಗುಬ್ಬು ವಾಸನೆ ಮಧ್ಯೆಯೇ ವಾಸ ಮಾಡಿದ್ದಾಳೆ. ವಾಸನೆಯಿಂದ ಕಂಗೆಟ್ಟ ಸ್ಥಳೀಯರು ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ದೌಡಾಯಿಸಿದ್ದಾರೆ.
ಆಗ ಬಿಬಿಎಂಪಿ ಅನಿಮಲ್ ಹಸ್ಬೇಂಡ್ರಿ ಸಹಾಯಕ ನಿರ್ದೇಶಕರು ಮತ್ತು ಪ್ರಾಣಿ ಪ್ರಿಯರು ಮನೆ ಒಳಗಡೆ ಹೋಗುತ್ತಿದ್ದಂತೆ ಶಾಕ್ ಆಗಿದ್ದಾರೆ. ಮನೆಯಲ್ಲಿ ಊಟ ಇಲ್ಲದೇ 2 ಶ್ವಾನಗಳು ಬಳಲಿದ್ರೆ, ಮತ್ತೊಂದು ಶ್ವಾನ ಜೀವಬಿಟ್ಟು ಗೊಬ್ಬು ನಾರುತ್ತಿತ್ತು. ಆ ಮಹಿಳೆ ದುರುದ್ದೇಶಕ್ಕೆ ನಾಯಿಯನ್ನು ಬಳಕೆ ಮಾಡ್ತಾ ಇದ್ಲಾ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಮಹಿಳೆಯ ವಿರುದ್ಧ FIR ದಾಖಲಾಗಿದೆ.
ನಾಯಿಯನ್ನು ಕೊಂದು ಬ್ಲ್ಯಾಕ್ ಮ್ಯಾಜಿಕ್ ಬಳಕೆ ಉದ್ದೇಶ ಇತ್ತಾ?
ಇನ್ನೂ, ಈ ಬಗ್ಗೆ ಮಾತಾಡಿದ ಪ್ರಾಣಿ ಪ್ರಿಯೆ ಸಾಧನಾ ಹೆಗ್ಡೆ ಅವರು, ಘಟನೆ ನಡೆದು 2 ದಿನ ಆಗಿದೆ. ಪೋಸ್ಟ್ ಮಾರ್ಟಮ್ ರಿಪೋರ್ಟ್ ಸಬ್ಮಿಟ್ ಮಾಡಿದ್ದೇವೆ. ಬ್ಲ್ಯಾಕ್ ಮ್ಯಾಜಿಕ್ ಬಳಕೆ ಬಗ್ಗೆ ಶಂಕೆ ಇದೆ. ಪೊಲೀಸರು ಇನ್ನು ಯಾಕೆ ತ್ರಿಪರ್ಣಾ ವಶಕ್ಕೆ ಪಡೆದಿಲ್ಲ ಅನ್ನೋ ಪ್ರಶ್ನೆ ಎದುರಾಗಿದೆ. ಪೊಲೀಸರ ತನಿಖೆ ಮುಂದುವರಿಯುತ್ತಿಲ್ಲ. ಬೆಂಗಳೂರು ಪೊಲೀಸರು ಅನಿಮಲ್ ಕೇಸ್ ಯಾವಾಗ ಗಂಭೀರವಾಗಿ ಪರಿಗಣಿಸುತ್ತಾರೆ ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ