/newsfirstlive-kannada/media/post_attachments/wp-content/uploads/2025/03/Rajasthan-lady-police-video-2.jpg)
ಇವರ ಹೆಸರು ಶಿಮ್ಲಾ ಜಾಟ್. ರಿಯಲ್ ಲೇಡಿ ಸಿಂಗಂ.. ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಟ್ರಕ್ ಚಾಲಕನ ಜೀವ ಉಳಿಸಿದ ಸಿಂಹಿಣಿ. ರಾಜಸ್ಥಾನದ ಜೋಧಪುರದಲ್ಲಿ ಚಲಿಸುತ್ತಿದ್ದ ಟ್ರಕ್ ಒಂದಕ್ಕೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಲೇಡಿ ಪೊಲೀಸ್ ಕಾರ್ಯಾಚರಣೆಗಿಳಿದ ಈ ವಿಡಿಯೋ ನೋಡುಗರ ಜುಮ್ಮೆನ್ನಿಸುವಂತೆ ಮಾಡಿದೆ.
ರಸ್ತೆಯಲ್ಲಿ ಟ್ರಕ್ ಒಂದಕ್ಕೆ ಬೆಂಕಿ ಬಿದ್ದಾಗ ಜೋಧಪುರನ ಈ ಲೇಡಿ ಸಿಂಗಂ ಎಂಟ್ರಿ ಕೊಟ್ಟಿದ್ರು. ಪೊಲೀಸ್ ಆಫೀಸರ್ ಮೊದಲು ಆ ಟ್ರಕ್ನ್ನು ಸಿಟಿಯಿಂದ ಆಚೆ ಕರ್ಕೊಂಡು ಹೋಗಿದ್ರು. ಆ ಟೈಮ್ನಲ್ಲಿ ಟ್ರಕ್ ಅಕ್ಷರಶಃ ಧಗ ಧಗಿಸ್ತಿತ್ತು. ಸಮಯ ಪ್ರಜ್ಞೆ ಮೆರೆದ ಲೇಡಿ ಪೊಲೀಸ್ ಹೊತ್ತಿ ಉರಿಯುತ್ತಿದ್ದ ಟ್ರಕ್ನ್ನ ಸೀದಾ ಅಗ್ನಿಶಾಮಕದ ಬಳಿ ಕರ್ಕೊಂಡು ಬಂದಿದ್ರು. ಈ ಟೈಮ್ನಲ್ಲಿ ಟ್ರಕ್ ಡ್ರೈವರ್ ಸಾಹಸ ಕೂಡ ಮೆಚ್ಚಲೇಬೇಕು. ಉರಿಯುತ್ತಿದ್ದ ಟ್ರಕ್ನ್ನ ಚಲಾಯಿಸಿಕೊಂಡು ಬಂದಿದ್ದ.
15 ಕಿಲೋ ಮೀಟರ್ ತನಕ ಉರಿಯುತ್ತಿದ್ದ ಟ್ರಕ್ ಅನ್ನು ಬೆನ್ನಟ್ಟಿ ಬಂದ ಲೇಡಿ ಪೊಲೀಸ್ ಚಾಲಕನ ಜೀವ ಉಳಿಸಿದ್ದಾರೆ. ಈ ಲೇಡಿ ಪೊಲೀಸ್ ಜಾಗದಲ್ಲಿ ಬೇರೆ ಯಾರಿದ್ರೂ ಬಹುಶಃ ಈ ಗಟ್ಟಿತನ ತೋರಿಸುತ್ತಾ ಇರಲಿಲ್ಲ. ಆದ್ರೆ ಎಸ್ಐ ಶಿಮ್ಲಾ ಜಾಟ್ ಮಾತ್ರ ಪ್ರಾಣದ ಹಂಗು ಬಿಟ್ಟು ಚಾಲಕ ಜೀವ ಉಳಿಸಿದ್ದಾರೆ.
ಇದನ್ನೂ ಓದಿ: ಟ್ರಾಫಿಕ್ ಸಿಗ್ನಲ್ನಲ್ಲಿ ಹೆಂಡತಿ ಮಾಡಿದ ರೀಲ್ಸ್ನಿಂದ ಪೊಲೀಸಪ್ಪನ ಉದ್ಯೋಗವೇ ಹೋಯಿತು!
जाबांज मैडम pic.twitter.com/x7C0VcHUQF
— नरेश दाधीच (@NDadhica)
जाबांज मैडम pic.twitter.com/x7C0VcHUQF
— नरेश दाधीच (@NDadhica) March 25, 2025
">March 25, 2025
ಬರೋಬ್ಬರಿ 15 ಕಿಲೋ ಮೀಟರ್ ತನಕ ಉರಿಯುತ್ತಿದ್ದ ಟ್ರಕ್ನ್ನ ಫಾಲೋವ್ ಮಾಡಿ ಸರ್ವೀಸ್ ಸ್ಟೇಷನ್ ಬಳಿ ತಂದಿದ್ದಾರೆ. ಬಳಿಕ ತಾವೇ ಟ್ರಕ್ ಹತ್ತಿ ಬೆಂಕಿ ನಂದಿಸೋ ಕೆಲಸ ಮಾಡಿದ್ದಾರೆ. ಈ ಮಹಿಳಾ ಪೊಲೀಸ್ ಹೋರಾಟಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ