16 ವರ್ಷದ ಹುಡುಗನ ಮೇಲೆ ಲೇಡಿ ಶಿಕ್ಷಕಿಯಿಂದ ನಿರಂತರ ಲೈಂಗಿಕ ದೌರ್ಜನ್ಯ.. ಈಗ ಏನಾಗಿದೆ..?

author-image
Ganesh
Updated On
‘ಮಗ ಕ್ಲಾಸ್​ಗೆ ಬರಲ್ಲ, ಬುದ್ಧಿ ಹೇಳಿ’ ಅಂದಿದ್ದೇ ತಪ್ಪಾಯ್ತು.. ಕ್ಲಾಸ್​ ರೂಮ್​​ಗೆ ಲಾಂಗ್ ಹಿಡಿದು ಬಂದ ಪುಂಡ ವಿದ್ಯಾರ್ಥಿ..!
Advertisment
  • ಎಲ್ಲೋ ವಿದೇಶದಲ್ಲಿ ನಡೆದಿರೋ ಸ್ಟೋರಿ ಅಲ್ಲವೇ ಅಲ್ಲ..!
  • ಗೆಳತಿಗೆ ಸಹಾಯ ಮಾಡಲು ಹೋಗಿ ಲಾಕ್ ಆದ ಶಿಕ್ಷಕಿಯ ಫ್ರೆಂಡ್
  • ಮಗನಲ್ಲಿ ಹಠಾತ್ ಬದಲಾವಣೆ, ಗಾಬರಿಯಾದ ಪೋಷಕರು

ವಿದೇಶದಲ್ಲಿ ಸಾಮಾನ್ಯವಾಗಿದ್ದ ಲೈಂಗಿಕ ದೌರ್ಜನ್ಯ ಮುಂಬೈನಲ್ಲಿ ಬೆಳಕಿಗೆ ಬಂದಿದೆ. 40 ವರ್ಷದ ಲೇಡಿ ಶಿಕ್ಷಕಿಯಿಂದ 16 ವರ್ಷದ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಬೆಳಕಿಗೆ ಬಂದಿದೆ.

ಮುಂಬೈನ ಪ್ರತಿಷ್ಠಿತ ಶಾಲೆಯ ಇಂಗ್ಲಿಷ್ ಶಿಕ್ಷಕಿ ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬಾರಿ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾಳೆ. ಮದುವೆಯಾಗಿ ಮಕ್ಕಳಿರುವ ಶಿಕ್ಷಕಿಯಿಂದ ವಿದ್ಯಾರ್ಥಿಯ ಮೇಲೆ ದೌರ್ಜನ್ಯ ನಡೆದಿದೆ. ಶಿಕ್ಷಕಿಯ ವಿರುದ್ಧ ಪೋಕ್ಸೋ, ಜ್ಯುವೆನಲ್ ಜಸ್ಚೀಸ್ ಆ್ಯಕ್ಟ್ ನಡಿ ಕೇಸ್ ದಾಖಲಾಗಿದೆ. ವಿದ್ಯಾರ್ಥಿ 11ನೇ ತರಗತಿಯಲ್ಲಿದ್ದಾಗ ದೌರ್ಜನ್ಯ ನಡೆಸಿದ ಆರೋಪದಡಿ ಕೇಸ್ ದಾಖಲಾಗಿದೆ. ಶಿಕ್ಷಕಿಯು ಪದೇ ಪದೆ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾಳೆ. ಇದರಿಂದ ಬೇಸತ್ತು ಶಿಕ್ಷಕಿಯನ್ನು ಭೇಟಿಯಾಗುವುದನ್ನು ಹುಡುಗ ಅವೈಡ್ ಮಾಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: 2ನೇ ಟೆಸ್ಟ್​ನಲ್ಲಿ ಸಾಯಿ ಸುದರ್ಶನ್​​ಗೆ ಕೊಕ್.. ಸ್ಟಾರ್​ ಆಲ್​ರೌಂಡರ್​ ತಂಡಕ್ಕೆ ಕಂಬ್ಯಾಕ್..!

ಬಳಿಕ ಶಿಕ್ಷಕಿಯ ಸ್ನೇಹಿತರೊಬ್ಬರು ಮಧ್ಯಪ್ರವೇಶಿಸಿ ಹುಡುಗನ ಜೊತೆ ಮಾತುಕತೆ ನಡೆಸಿದ್ದಾರೆ. ವಯಸ್ಸಾದ ಮಹಿಳೆ-ಟೀನೇಜ್ ಹುಡುಗರ ನಡುವಿನ ಸಂಬಂಧ ಈಗಿನ ಕಾಲದಲ್ಲಿ ಸಾಮಾನ್ಯ ಎಂದು ಶಿಕ್ಷಕಿಯ ಸ್ನೇಹಿತೆ ಹುಡುಗನಿಗೆ ಹೇಳಿದ್ದಾರೆ. ಶಿಕ್ಷಕಿಯ ಜೊತೆಗಿನ ಲೈಂಗಿಕ ಸಂಬಂಧ ಮುಂದುವರಿಸುವಂತೆ ಹೇಳಿದ್ದಾರೆ. ಹುಡುಗ- ಶಿಕ್ಷಕಿ ಮೇಡ್ ಫಾರ್ ಈಚ್ ಅದರ್ ಎಂದು ಶಿಕ್ಷಕಿಯ ಸ್ನೇಹಿತೆ ಹುಡುಗನಿಗೆ ಹೇಳಿದ್ದಾರೆ. ಹೀಗೆ ಹೇಳಿದ ಮೇಲೆ ಹುಡುಗ, ಶಿಕ್ಷಕಿಯನ್ನು ಭೇಟಿಯಾಗಿದ್ದ. ಆ ವೇಳೆ ಕಾರಿನಲ್ಲಿ ಹುಡುಗನ ನಿರ್ಜನ ಪ್ರದೇಶಕ್ಕೆ ಶಿಕ್ಷಕಿ ಕರೆದೊಯ್ದು ಹುಡುಗನ ಬಟ್ಟೆ ಬಿಚ್ಚಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾಗಿದ್ದ ಹುಡುಗ, ಯಾರ ಜೊತೆಯೂ ಹೆಚ್ಚು ಮಾತನಾಡ್ತಿರಲಿಲ್ಲ. ಆಗ ಹುಡುಗನಿಗೆ ಆ್ಯಂಟಿ ಆಕ್ಸೈಟಿ ಮಾತ್ರೆಯನ್ನು ಶಿಕ್ಷಕಿ ನೀಡಿದ್ದಾಳೆ. ಬಳಿಕ ಏರ್​ಪೋರ್ಟ್ ಬಳಿಯ ಫೈವ್ ಸ್ಟಾರ್ ಹೋಟೆಲ್​ಗೆ ಕರೆದೊಯ್ದು ಬಲವಂತದಿಂದ ಲೈಂಗಿಕ ಕೃತ್ಯವನ್ನು ಶಿಕ್ಷಕಿ ನಡೆಸಿದ್ದಾರೆ. ಇವೆಲ್ಲವೂ 16 ವರ್ಷದ ಹುಡುಗ ಶಾಲೆಯಲ್ಲಿದ್ದಾಗ ನಡೆದಿದೆ ಎಂದು ವರದಿಯಾಗಿದೆ.

ಪಿಯುಸಿಯಲ್ಲಿ ಓದುವಾಗ ಹುಡುಗನ ಬದಲಾದ ವರ್ತನೆಯಿಂದ ಅನುಮಾನಗೊಂಡ ಆತನ ತಂದೆ- ತಾಯಿ ಪ್ರಶ್ನಿಸಿದ್ದಾರೆ. ಈ ವೇಳೆ ಹುಡುಗ, ತನ್ನ ಮೇಲೆ ತನ್ನ ಶಿಕ್ಷಕಿಯೇ ನಡೆಸಿದ ಲೈಂಗಿಕ ದೌರ್ಜನ್ಯವನ್ನು ತಿಳಿಸಿದ್ದಾನೆ. ತಕ್ಷಣವೇ ಶಿಕ್ಷಕಿಯ ವಿರುದ್ಧ ದೂರು ನೀಡಿದರೆ ಹುಡುಗನ ಶಿಕ್ಷಣಕ್ಕೆ ತೊಂದರೆಯಾಗಬಹುದು, ಶಾಲೆಯಿಂದ ಬಿಟ್ಟು ಹೋಗುವಂತೆ ಶಾಲೆಯವರು ಹೇಳಬಹುದು ಎಂಬ ಆತಂಕದಿಂದ ಪೋಷಕರು ತಕ್ಷಣ ಪೊಲೀಸರಿಗೆ ದೂರು ನೀಡಿಲ್ಲ. 12ನೇ ತರಗತಿ ವಿದ್ಯಾಭ್ಯಾಸ ಮುಗಿದ ಬಳಿಕ ಆ ಶಿಕ್ಷಕಿ, ಹುಡುಗನ ಸಹವಾಸಕ್ಕೆ ಬರಲ್ಲ, ಹುಡುಗನನ್ನು ಪದವಿ ವ್ಯಾಸಂಗಕ್ಕೆ ಬೇರೆ ಕಾಲೇಜಿಗೆ ಸೇರಿಸಬಹುದು ಎಂದು ಯೋಚಿಸಿ ಸುಮ್ಮನಾಗಿದ್ದಾರೆ.

ಇದನ್ನೂ ಓದಿ: ಭಾರೀ ಸಂಚಲನ ಮೂಡಿಸಿದ ಲಾಕಪ್ ಡೆತ್​ ಕೇಸ್​.. ದೇಹದ ಮೇಲೆ 44 ಗಾಯ, ಕಾರದ ಪುಡಿ ಎರಚಿ ಚಿತ್ರಹಿಂಸೆ..!

ಸಂತ್ರಸ್ತ ಹುಡುಗ ಆ ಶಾಲೆಯನ್ನು ಬಿಟ್ಟ ಬಳಿಕವೂ ಹುಡುಗನನ್ನು ಹುಡುಗನ ಮನೆಗೆಲಸದವರ ಮೂಲಕ ಸಂಪರ್ಕಿಸಿದ್ದಾಳೆ. ಸಂತ್ರಸ್ತ ಹುಡುಗನನ್ನು ಶಿಕ್ಷಕಿ ಬಿಡಲ್ಲ ಎಂಬುದು ದೃಢಪಟ್ಟ ಬಳಿಕ ಹುಡುಗನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧಾರ ಮಾಡಿದ್ದಾರೆ. ಈಗ ಶಿಕ್ಷಕಿಯ ವಿರುದ್ದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿ ಬಂಧಿಸಲಾಗಿದೆ. ಲೈಂಗಿಕ ದೌರ್ಜನ್ಯ ಕೃತ್ಯಕ್ಕೆ ಬಳಸಿದ ಕಾರನ್ನು ಜಫ್ತಿ ಮಾಡಲಾಗಿದೆ. ಶಿಕ್ಷಕಿಯ ಸ್ನೇಹಿತೆ ವಿರುದ್ಧವೂ ಕೇಸ್ ದಾಖಲಾಗಿದೆ. ಈ ಕೇಸ್ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಶಾಲೆ ಮೌನಕ್ಕೆ ಶರಣಾಗಿದೆ. ಅಪ್ರಾಪ್ತ ಹುಡುಗ ತನ್ನ ಲೈಂಗಿಕ ದಾಹ ತೀರಿಸಿಕೊಳ್ಳಲು ಬಳಸಿಕೊಂಡ ಶಿಕ್ಷಕಿ ಈಗ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದಾಳೆ.

2023ರ ಡಿಸೆಂಬರ್​​ನಲ್ಲಿ ಶಾಲೆಯ ಡ್ಯಾನ್ಸ್ ಪ್ರೋಗ್ರಾಂಗೆ ಡ್ಯಾನ್ಸ್ ಟೀಮ್ ಕಟ್ಟುವಾಗ ಹುಡುಗನೆಡೆಗೆ ಆಕರ್ಷಿತಳಾಗಿದ್ದಾಗಿ ಶಿಕ್ಷಕಿ ಪೊಲೀಸರ ಎದುರು ಹೇಳಿಕೆ ನೀಡಿದ್ದಾಳೆ. 2024ರ ಜನವರಿಯಲ್ಲಿ ಲೈಂಗಿಕತೆಯ ಸನ್ನೆ ಮಾಡಿದ್ದಾಗಿ ಶಿಕ್ಷಕಿ ಹೇಳಿದ್ದಾಳೆ. ಪ್ರಾರಂಭದಲ್ಲಿ ಹುಡುಗ, ಶಿಕ್ಷಕಿಯ ಹತ್ತಿರ ಹೋಗಿಲ್ಲ. ಈ ವೇಳೆ ಶಾಲೆಯ ಹೊರಗಿನ ತನ್ನ ಸ್ನೇಹಿತೆಯ ಮೂಲಕ ಹುಡುಗನ ಮನವೊಲಿಸಿಕೊಳ್ಳುವ ಕೆಲಸವನ್ನು ಶಿಕ್ಷಕಿ ಮಾಡಿದ್ದಾಳೆ. ಶಿಕ್ಷಕಿಯ ಪರವಾಗಿ ಹುಡುಗನ ಮನವೊಲಿಸಿದ ಆಕೆಯ ಸ್ನೇಹಿತೆಯು ಈಗ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಶಿಕ್ಷಕಿಯ ಸ್ನೇಹಿತೆಯ ವಿರುದ್ಧವೂ ಕೇಸ್ ದಾಖಲಾಗಿದೆ.

ಇದನ್ನೂ ಓದಿ: 18 ತಿಂಗಳಿಂದ ನೋವಲ್ಲೇ ನರಳಾಟ.. ತಂಡಕ್ಕಾಗಿ ಜೀವ ಸವೆಸಿದ ಬೂಮ್ರಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment