Advertisment

VIDEO: 'ಆ ಗರ್ಭಿಣಿ ತಾಯಿಗೆ ಹೇಗೆ ಸಮಾಧಾನ ಮಾಡ್ಬೇಕು'- ದರ್ಶನ್ ಅರೆಸ್ಟ್ ಬಗ್ಗೆ ಲಹರಿ ವೇಲು ಹೇಳಿದ್ದೇನು?

author-image
Veena Gangani
Updated On
VIDEO: 'ಆ ಗರ್ಭಿಣಿ ತಾಯಿಗೆ ಹೇಗೆ ಸಮಾಧಾನ ಮಾಡ್ಬೇಕು'- ದರ್ಶನ್ ಅರೆಸ್ಟ್ ಬಗ್ಗೆ ಲಹರಿ ವೇಲು ಹೇಳಿದ್ದೇನು?
Advertisment
  • ರೇಣುಕಾಸ್ವಾಮಿ ಕೊಲೆ ಸುದ್ದಿ ಕೇಳಿ ಬೆಚ್ಚಿ ಬಿದ್ದಿದ್ದ ಸ್ಯಾಂಡಲ್​ವುಡ್​ ಸ್ಟಾರ್ಸ್ಸ್
  • ಇಂತಹ ಘಟನೆಯಿಂದ ಸಮಾಜದಲ್ಲಿ‌ ವಾಸಿಸುವ ಹಿರಿಯರ ಗತಿ ಏನು?
  • ಹುಟ್ಟುತ್ತಲೇ ಸ್ಟಾರ್​ಗಳಾಗಿ ಹುಟ್ಟುವುದಿಲ್ಲ ನಾವು ಸಮಾಜಕ್ಕೆ ಮಾದರಿ ಆಗಬೇಕು

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ​​ ನಟ ದರ್ಶನ್​​ ಅವರು ಪೊಲೀಸರ ಕಸ್ಟಡಿಯಲ್ಲಿ ಇದ್ದಾರೆ. ಈ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಯಾವಾಗ ಕೇಳಿ ಬಂತೋ ಕನ್ನಡದ ಇಡೀ ಸಿನಿಮಾ ಇಂಡಸ್ಟ್ರಿ ಶಾಕ್​ಗೆ ಒಳಗಾಗಿತ್ತು. ನಟಿ ರಮ್ಯಾ, ಕಿಚ್ಚ ಸುದೀಪ್, ನಟ ಉಪೇಂದ್ರ ಸೇರಿ ಹಲವರು ಈ ಕೊಲೆ ಕೇಸ್​ ಬಗ್ಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

Advertisment

publive-image

ಇದನ್ನೂ ಓದಿ:HDK ವಿರುದ್ಧ ನಾಲಿಗೆ ಹರಿಬಿಟ್ಟ ದರ್ಶನ್ ಮಹಿಳಾ ಅಭಿಮಾನಿಗೆ ಸಂಕಷ್ಟ; ಆಗಿದ್ದೇನು?

ಲಹರಿ ಆಡಿಯೋ ಮುಖ್ಯಸ್ಥ ಲಹರಿ ವೇಲು ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅರೆಸ್ಟ್​ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲೂ ಕೊಲೆಯಾದ ರೇಣುಕಾಸ್ವಾಮಿ ಪತ್ನಿ ಬಗ್ಗೆ ಭಾವುಕರಾಗಿ ಮಾತಾಡಿದ್ದಾರೆ. ನ್ಯೂಸ್​ಫಸ್ಟ್​ನೊಂದಿಗೆ ಮಾತಾಡಿದ ಲಹರಿ ವೇಲು ಅವರು, ರೇಣುಕಾಸ್ವಾಮಿ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಆ ಗರ್ಭಿಣಿ ತಾಯಿಗೆ ಹೇಗೆ ಸಮಾಧಾನ ಮಾಡುವುದು ಸರ್? ದೇವರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ. ನಾನು ಜೀವನದಲ್ಲಿ ಕನಸು ಕೂಡ ಕಂಡಿರಲಿಲ್ಲ. ಇಷ್ಟೊಂದು‌ ಕ್ರೂರತೆ ಬೇಡ ಸರ್. ಈ ವಿಚಾರ ಕೇಳುವುದಕ್ಕೆ ಬೇಸರವಾಗುತ್ತದೆ. ಯಾವ ಮನೆಯಲ್ಲೂ ಕೂಡ ಇಂತಹ ಘಟನೆ ನಡೆಯಬಾರದು. ಇಂತಹ ಘಟನೆಯಿಂದ ಸಮಾಜದಲ್ಲಿ‌ ವಾಸಿಸುವ ಹಿರಿಯರ ಗತಿ ಏನು? ದುಡ್ಡು, ಕೀರ್ತಿ ಎಲ್ಲವೂ ಬರಬಹುದು ಆದರೆ ಯಾವುದು ಕೂಡ ಶಾಶ್ವತ ಅಲ್ಲ. ಸತ್ತ ಮೇಲೆ ಜನ ಬರ್ತಾರಲ್ಲ ಅದೇ ಆಸ್ತಿ. ಬ್ಯಾಂಕ್ ಬ್ಯಾಲೆನ್ಸ್, ಐಷಾರಾಮಿ‌ ಕಾರಲ್ಲ, ಯಾರದ್ದೋ ತಲೆ ಹೊಡೆದು ಸಂಪಾದಿಸಿದ ಆಸ್ತಿಯಲ್ಲ. ನಮ್ಮ ಸಾವಿನಲ್ಲಿ ಯಾರಿದ್ದಾರೆ ಅನ್ನೋದು ಬಹಳ ಮುಖ್ಯ ಎಂದಿದ್ದಾರೆ.

ಯಾರೂ ಹುಟ್ಟತ್ತಲೇ ಸ್ಟಾರ್​ಗಳಾಗಿ ಹುಟ್ಟುವುದಿಲ್ಲ!

ಚಪ್ಪಾಳೆಗೂ, ಚಪ್ಪಲಿಗೂ ವ್ಯತ್ಯಾಸವಿದೆ. ಯಾರೂ ಹುಟ್ಟುತ್ತಲೇ ಸ್ಟಾರ್​ಗಳಾಗಿ ಹುಟ್ಟುವುದಿಲ್ಲ. ನಾವು ಸಮಾಜಕ್ಕೆ ಮಾದರಿಯಾಗಬೇಕು. ರೇಣುಕಾಸ್ವಾಮಿ ಸಾವಿನಿಂದ ಸಾಕಷ್ಟು ಡಿಸ್ಟರ್ಬ್ ಆಗಿದ್ದೇನೆ. ನನಗೆ ಕೆಲವರು ಈ ವಿಚಾರ ಹೇಳಿದಾಗ ಮಾತನಾಡಬೇಡಿ ಎಂದಿದ್ದೆ. ಮರ್ಡರ್ ಪದವನ್ನೇ ನಾವು ಉಪಯೋಗಿಸುತ್ತಿರಲಿಲ್ಲ. ಸಾವಿನ ಪದ‌ ಕೇಳಿದರೆ ಬೇಸರವಾಗುತ್ತದೆ. ಎಲ್ಲರಿಗೂ ಗ್ರಹಣ ಹಿಡಿಯುತ್ತದೆ. ಗ್ರಹಣ ಸರಿಸಿ ಬದುಕು ಕಟ್ಟಿಕೊಳ್ಳಬೇಕಾಗುತ್ತದೆ. ನಟನನ್ನ ಬ್ಯಾನ್ ಮಾಡುವ ವಿಚಾರ ಫಿಲ್ಮಂ ಚೇಂಬರ್ ವಿಚಾರಕ್ಕೆ ಬಿಟ್ಟಿದ್ದು. ಆತ್ಮಸಾಕ್ಷಿ ಇದೆಯಲ್ಲ. ಅದನ್ನ ಕೇಳಿಕೊಂಡು‌ ಕೆಲಸ ಮಾಡಬೇಕು. ಸಮಾಜದಲ್ಲಿ‌ ಏನೇ ಹೆಸರು ಮಾಡಿದ್ದರೂ ಸಮಾಜಕ್ಕೆ ಬದುಕಬೇಕು ಎಂದು ಲಹರಿ ವೇಲು ಅವರು ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment