/newsfirstlive-kannada/media/post_attachments/wp-content/uploads/2025/02/KOTTURESHWAR-JATRE-2.jpg)
ಮೂಲ ನಕ್ಷತ್ರ ಅಂದ್ರೆ ಅನಿಷ್ಠ ಅಂತಾರೆ. ಆದ್ರೆ, ಇಲ್ಲಿ ರಥೋತ್ಸವ ಮಾತ್ರ ಮೂಲ ನಕ್ಷತ್ರದಲ್ಲೆ ನಡೆಯುತ್ತೆ. ಆ ರಥೋತ್ಸವ ನೋಡಲು ಲಕ್ಷಾಂತರ ಜನರು ಆಗಮಿಸ್ತಾರೆ. ಅದರಲ್ಲೂ ಕೊಟ್ಟೂರೇಶ್ವರನಿಗಾಗಿ ಸಾವಿರಾರು ಭಕ್ತರು ಬರಿಗಾಲಿನಲ್ಲೆ ಪಾದಯಾತ್ರೆ ಮಾಡುತ್ತಾರೆ. ಈ ವರ್ಷವೂ ಗುರು ಕೊಟ್ಟೂರೇಶ್ವರನ ಜಾತ್ರೆ ಅದ್ಧೂರಿಯಿಂದ ಜರುಗಿದೆ.
ಎಲ್ಲಿ ನೋಡಿದ್ರು ಜನವೋ ಜನ. ಎತ್ತ ನೋಡಿದ್ರು ಅತ್ತ ಜನಸಾಗರ. ತೇರು ಬೀದಿಯಲ್ಲಿ ಸಾಗರೋಪಾದಿಯಲ್ಲಿ ಸೇರಿದ ಭಕ್ತ ಸಮೂಹ. ಕೊಟ್ಟೂರಿನ ಗುರುಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಲಕ್ಷಾಂತರ ಜನರು.
ವಿಜಯನಗರ ಜಿಲ್ಲೆ ಕೊಟ್ಟೂರಿನ ಗುರಬಸವೇಶ್ವರ ಜಾತ್ರೆ ಅಂದ್ರೆ ಮಧ್ಯ ಕರ್ನಾಟಕದಲ್ಲೆ ಅತಿ ದೊಡ್ಡ ಜಾತ್ರೆ. ಪ್ರತಿ ವರ್ಷ ಅದ್ದೂರಿಯಾಗಿ ಜರುಗುವ ಈ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಕೊಟ್ಟೂರೇಶ್ವರನ ಜಾತ್ರೆ ಜರುಗಿದೆ. ನಾಡಿನ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಕೊಟ್ಟೂರಿಗೆ ಪಾದಯಾತ್ರೆ ಮೂಲಕ ಆಗಮಿಸಿ ಕೊಟ್ಟೂರೇಶ್ವರನ ಕೃಪೆಗೆ ಪಾತ್ರರಾಗಿದ್ದಾರೆ. ಸಂಭ್ರಮ ಸಡಗರದಿಂದ ರಥವನ್ನ ಎಳೆದು ಕೊಟ್ಟೂರು ಗುರುಬಸವೇಶ್ವರನ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ:ಕನ್ನಡ ಮಾತಾಡಿದ್ದಕ್ಕೆ ಹಲ್ಲೆ ಕೇಸ್ಗೆ ಬಿಗ್ ಟ್ವಿಸ್ಟ್.. ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್; ಇದು ನ್ಯಾಯನಾ?
ಪ್ರತಿ ವರ್ಷ ಪಾದಯಾತ್ರೆ ಮೂಲಕ ಕೊಟ್ಟೂರು ಜಾತ್ರೆಗೆ ಆಗಮಿಸುತ್ತಿದ್ದ ಭಕ್ತರಿಗೆ ಈ ಬಾರಿ ಅವಕಾಶ ನಿರಾಕರಿಸಲಾಗಿತ್ತು. ಇಷ್ಟಾದ್ರೂ ಎರಡೂವರೆ ಲಕ್ಷಕ್ಕೂ ಅಧಿಕ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ. ಕೂಟ್ಟೂರಿನ ಗುರುಬಸವೇಶ್ವರ ಜಾತ್ರೆಯ ವೇಳೆ ಏನೇ ಹರಕೆ ಹೊತ್ತರೂ ಇಷ್ಟಾರ್ಥ ಸಿದ್ದಿಯಾಗುತ್ತೆ ಅನ್ನೋ ನಂಬಿಕೆ ಲಕ್ಷಾಂತರ ಭಕ್ತರಲ್ಲಿದೆ. ಹೀಗೆ ನಾವು ಕೊಟ್ರಯ್ಯನಿಗೆ ನಡೆದುಕೊಂಡ 12 ವರ್ಷದ ನಂತರ ನಮಗೆ ಅವಳಿ ಜವಳಿ ಮಕ್ಕಳಾಗಿವೆ ಅಂತ ರಥೋತ್ಸವಕ್ಕೆ ಬಂದ ಭಕ್ತರೊಬ್ಬರು ಸಂತಸ ಹಂಚಿಕೊಂಡಿದ್ದಾರೆ.
ಮೂಲ ನಕ್ಷತ್ರ ಕೆಟ್ಟದ್ದು ಎಂದು ಸಾಕಷ್ಟು ಜನರು ಮೂಗು ಮುರಿಯುತ್ತಾರೆ. ಹಿಂದುಗಳು ಅಶುಭವೆಂದು ಪರಿಗಣಿಸುತ್ತಾರೆ. ಆದ್ರೆ ಇದೇ ಮೂಲ ನಕ್ಷತ್ರದಲ್ಲೆ ಗುರು ಕೊಟ್ಟೂರೇಶ್ವರರ ರಥೋತ್ಸವ ಜರುಗುವುದು ವಿಶೇಷ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ