ಅನಂತ್ ಅಂಬಾನಿ ಮದುವೆಯಲ್ಲಿ 120 ಬಗೆಯ ಚಹಾ ರೆಡಿ ಮಾಡಿದ್ದ ಈ ಲಕ್ಷ್ಮಣ ಯಾರು?

author-image
Gopal Kulkarni
Updated On
ಅನಂತ್ ಅಂಬಾನಿ ಮದುವೆಯಲ್ಲಿ 120 ಬಗೆಯ ಚಹಾ ರೆಡಿ ಮಾಡಿದ್ದ ಈ ಲಕ್ಷ್ಮಣ ಯಾರು?
Advertisment
  • ಮಧ್ಯಪ್ರದೇಶದಲ್ಲಿ ಒಬ್ಬ ಸ್ಪೇಷಲ್ ಟೀ ಮಾಡುವ ಮಹಾ ಮೋಡಿಗಾರ
  • 120 ಬಗೆಯ ಚಹಾ ಮಾಡುವುದರಲ್ಲಿ ಈ ವ್ಯಕ್ತಿ ಎಷ್ಟು ನಿಸ್ಸೀಮ ಗೊತ್ತಾ?
  • ಅನಂತ ಅಂಬಾನಿ ಮದುವೆಯಲ್ಲಿಯೂ ಘಮಿಸಿದ್ದವು ಈತನ 120 ಟೀ!

ಮುಖೇಶ್ ಅಂಬಾನಿ ಕುಟುಂಬ ಅವರ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆಯಿಂದಾಗಿ ಇಡೀ ವಿಶ್ವದಲ್ಲಿಯೇ ಹೆಡ್​ಲೈನ್ ಆಗಿ ಹೋಗಿತ್ತು. ಆ ಒಂದು ಮದುವೆಯನ್ನು ಯಾರು ತಾನೆ ಮರೆಯಲು ಸಾಧ್ಯ. ಇಂದ್ರಲೋಕವನ್ನೆ ಧರೆಗೆ ಇಳಿಸಿದಂತೆ ಆ ಒಂದು ವೈಭೋಗ ಕಾಣಿಸಿಕೊಂಡಿತ್ತು, ಅಂತಹದೊಂದು ಐಷಾರಾಮಿ ಮದುವೆಯ ಕಾರ್ಯಕ್ರಮಕ್ಕೆ ವಿಶ್ವ ವಿಖ್ಯಾತರೆಲ್ಲಾ ಸಾಕ್ಷಿಯಾಗಿದ್ದರು. ಅದರಲ್ಲೂ ಮದುವೆಯಲ್ಲಿ ತಯಾರಾದ ವಿವಿಧ ಬಗೆಯ ರುಚಿಕರ ಊಟ ದೊಡ್ಡದಾಗಿ ಸುದ್ದಿ ಮಾಡಿತ್ತು.

ನೀತಾ ಅಂಬಾನಿಯವರೆ ವೈಯಕ್ತಿಕವಾಗಿ ಜವಾಬ್ದಾರಿಯನ್ನು ಹೊತ್ತು ದೇಶದ ಅತ್ಯಂತ ಜನಪ್ರಿಯ ಖಾದ್ಯಗಳನ್ನು ಒಂದೇ ಛತ್ರದಡಿ ತಂದಿಡಿಸಿದ್ದರು. ಆದರಲ್ಲಿ ಲಕ್ಷ್ಮಣ ಓಝಾ ಎಂಬ ವ್ಯಕ್ತಿಯ ಚಹಾ ಕೂಡ ಇತ್ತು. ಬರೀ ಚಹಾ ಅಂದರೆ ತಪ್ಪಾದೀತು. ಬರೊಬ್ಬರಿ 120 ಬಗೆಯ ಚಹಾ ಲಕ್ಷ್ಮಣ್ ಓಝಾರಿಂದ ಅಲ್ಲಿ ತಯಾರಿ ಆಗಿದ್ದವು. ಈ ಲಕ್ಷ್ಮಣ್ ಓಝಾ ಯಾರು ಎಂಬ ಕುತೂಹಲವೊಂದು ಅಂದಿನಿಂದ ಮೂಡಿತ್ತು.

ಯಾರು ಈ ಲಕ್ಷ್ಮಣ್ ಓಝಾ?
ಲಕ್ಷ್ಮಣ್ ಓಝಾ ಭಾರತದ ಹೃದಯ ಭಾಗ ಎಂದೇ ಕರೆಸಿಕೊಳ್ಳುವ ಮಧ್ಯಪ್ರದೇಶದವರು. ಇವರು 120 ಬಗೆಯ ಚಹಾ ಮಾಡುವುದರಲ್ಲಿ ನಿಸ್ಸೀಮರು. ಇವರನ್ನು ಲಚ್ಚು ಎಂದೇ ಜನರು ಪ್ರೀತಿಯಿಂದ ಕರೆಯುತ್ತಾರೆ. ಇವರು ಪ್ರಮುಖವಾಗಿ ಕೇಸರಿ ಮಸಾಲ ಚಹಾದಿಂದ ಫೇಮಸ್ ಆದವರು. ಇವರು ಸಿನಿಮಾ ನಟ ಅಶುತೋಶ್ ರಾಣಾ ಅವರ ಒಂದು ಕಾರ್ಯಕ್ರಮದಲ್ಲಿ ಮೊದಲ ಬಾರಿ ಚಹಾ ಸೇವೆ ನೀಡಿದರು. ಬಳಿಕ ಅನೇಕ ಶಾಸಕರು ಹಾಗೂ ಮಂತ್ರಿಗಳ ಮನೆಯ ಕಾರ್ಯಕ್ರಮದಲ್ಲಿಯೂ ಇವರ ಚಹಾದ ಘಮ ಹರಡಿತ್ತು.

ಇದನ್ನೂ ಓದಿ:60 ದಿನಕ್ಕೆ 48 ಲಕ್ಷ ವಿವಾಹ.. ಈ ಅದ್ಧೂರಿ ಮದುವೆಗಳಿಂದ ದೇಶಕ್ಕೆ ಬರುವ ಆದಾಯ ಎಷ್ಟು ಲಕ್ಷ ಕೋಟಿ ಗೊತ್ತಾ?

ಹದಿನೈದು ವರ್ಷಗಳಿಂದ ಚಹಾ ವ್ಯಾಪಾರ ಮಾಡುತ್ತಿರುವ ಲಕ್ಷ್ಮಣ್
ಹೀಗೆ ಜನಪ್ರಿಯಗೊಂಡ ಲಕ್ಷ್ಮಣ್ ಓಝಾ ಅನಂತ ಅಂಬಾನಿಯವರ ಮದುವೆಯಲ್ಲಿ 120 ಬಗೆಯ ಟೀ ಮಾಡುವ ಮೂಲಕ ಪತ್ರಿಕೆಗಳ ತಲೆಬರಹದಲ್ಲಿ ಕಾಣಿಸಿಕೊಂಡರು. ಮಧ್ಯಪ್ರದೇಶದ ಸ್ಥಳೀಯ ವಾಹಿನಿಯೊಂದರ ಸಂದರ್ಶನದಲ್ಲಿ ಓಝಾ ನಾನು ತುಂಬಾ ಕಠಿಣ ಪರಿಶ್ರಮದಿಂದ ಈ ಸ್ಥಾನಕ್ಕೆ ಬಂದು ತಲುಪಿದ್ದೇನೆ. ಕಳೆದ ಹದಿನೈದು ವರ್ಷಗಳಿಂದ ನಾನು ಚಹಾ ವ್ಯಾಪಾರದಲ್ಲಿ ತೊಡಗಿಕೊಂಡಿದ್ದೇನೆ. ನಾನು ಅನಂತ್ ಅಂಬಾನಿಯವರ ಮದುವೆಯಲ್ಲೂ ಕೂಡ ಚಹಾ ಸೇವೆಯನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ನಾಳೆ ಅಮೆರಿಕಾ ಚುನಾವಣೆ; ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆ; ನೀವು ಓದಲೇಬೇಕಾದ ಸ್ಟೋರಿ

ಕಳೆದ 15 ವರ್ಷಗಳಿಂದ ಅನೇಕ ಅನುಭವಗಳನ್ನು ತಮ್ಮದಾಗಿಸಿಕೊಂಡ ಹಾಗೂ ಹೊಸ ಬಗೆಯ ಚಹಾ ಕಲಿಕೆಯನ್ನು ಕರಗತ ಮಾಡಿಕೊಂಡಿರುವ ಓಝಾ, ಒಟ್ಟು 120 ರೀತಿಯ ಚಹಾಗಳನ್ನು ಮಾಡಬಲ್ಲರು. ಅದರಲ್ಲೂ ಪ್ರಮುಖವಾಗಿ ಅವರು ಮಾಡುವ ಸ್ಪೇಷಲ್ ಸಫ್ರಾನ್(ಕೇಸರಿ) ಚಹಾ ಹಾಗೂ ಪಾನ್ ಚಹಾ ಎಲ್ಲರ ಮನ ಗೆದ್ದಿವೆ. ಇವುಗಳ ಜೊತೆ ಇನ್ನೂ 118 ಬಗೆಯ ಚಹಾವನ್ನು ಅವರು ಮಾಡುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment