/newsfirstlive-kannada/media/post_attachments/wp-content/uploads/2025/06/harshitha.jpg)
ಲಕ್ಷ್ಮೀ ಬಾರಮ್ಮ ಗಂಗಕ್ಕಾ ಪಾತ್ರ ವೀಕ್ಷಕರ ಫೇವರಿಟ್​. ಸೀರಿಯಲ್​ ಮುಕ್ತಾಯಗೊಂಡರು ವೀಕ್ಷಕರು ಗಂಗಕ್ಕಾ ಪಾತ್ರವನ್ನು ಮರೆತಿಲ್ಲ. ಸದ್ಯ ಲಕ್ಷ್ಮೀ ಬಾರಮ್ಮ ಸೀರಿಯಲ್​ನಲ್ಲಿ ಗಂಗಾ ಪಾತ್ರದಲ್ಲಿ ನಟಿಸಿದ್ದ ನಟಿ ಹರ್ಷಿತಾ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ:ತಮಿಳು Sa Re Ga Ma Pa ವೇದಿಕೆ ಮೇಲೆ ಶಿವಾನಿಗೆ ಬಿಗ್ ಸರ್​ಪ್ರೈಸ್.. ಏನದು?
/newsfirstlive-kannada/media/post_attachments/wp-content/uploads/2025/06/harshitha2.jpg)
ಹೌದು, ಕನ್ನಡ ಕಿರುತೆರೆಯ ನಟಿ ಹರ್ಷಿತಾ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿಯಲ್ಲಿ 6 ತಿಂಗಳ ತುಂಬು ಗರ್ಭಿಣಿಯಾಗಿ ಬೇಬಿ ಬಂಪ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/06/harshitha1.jpg)
ನಟಿ ಹರ್ಷಿತಾ ಮೂಲತಃ ತುಮಕೂರು ಜಿಲ್ಲೆಯ ಮಧುಗಿರಿಯವರು. ಮಜಾ ಭಾರತ ರಿಯಾಲಿಟಿ ಶೋ, ಲಕ್ಷ್ಮೀ ಬಾರಮ್ಮ, ಶ್ರಾವಣಿ ಸುಬ್ರಮಣ್ಯ ಧಾರಾವಾಹಿ, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಂದರಿ, ಜೋಗ್​ 101 ಸಿನಿಮಾ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
View this post on Instagram
ಇನ್ನೂ, ನಟಿ ಹರ್ಷಿತಾ ಅವರ ಪತಿ ಸಂದೀಪ್ ಕೂಡ ಗಿಚ್ಚಿ ಗಿಲಿಗಿಲಿ, ರಾಜಾರಾಣಿ ಸೇರಿದಂತೆ ಹಲವು ರಿಯಾಲಿಟಿ ಶೋಗಳ ಕಾಮಿಡಿ, ಸ್ಕಿಟ್​ಗಳಿಗೆ ಕಥೆ ಬರೆಯುವ ಬರಹಗಾರ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us