/newsfirstlive-kannada/media/post_attachments/wp-content/uploads/2025/03/neha-howda.jpg)
ಕನ್ನಡ ಕಿರುತೆರೆಯಲ್ಲಿ ಗೊಂಬೆ, ಬಿಗ್ಬಾಸ್ ಬೆಡಗಿ ನೇಹಾ ಗೌಡ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕನ್ನಡದ ಸ್ಟಾರ್ ದಂಪತಿ ತಮ್ಮ ಮುದ್ದಾದ ಮಗಳಿಗೆ ನಾಮಕರಣ ಮಾಡಿದ್ದಾರೆ.
ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಕನ್ನಡಿಗರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿರೋ ನೇಹಾ ಗೌಡ ದಂಪತಿ. ಇದೀಗ ತಮ್ಮ ಮಗಳಿಗೆ ಶಾರದ ಎಂದು ಹೆಸರನ್ನಿಟ್ಟಿದ್ದಾರೆ.
ನಟಿ ನೇಹಾ ಗೌಡ ಕುಟುಂಬಸ್ಥರು ಬೆಂಗಳೂರಿನ ಖಾಸಗಿ ಹಾಲ್ವೊಂದರಲ್ಲಿ ನಾಮಕರಣ ಶಾಸ್ತ್ರ ಮಾಡಿದ್ದಾರೆ. ಈ ನಾಮಕರಣ ಶಾಸ್ತ್ರದಲ್ಲಿ ಕಿರುತೆರೆಯ ಕಲಾವಿದರು, ಕುಟುಂಬಸ್ಥರು, ಆತ್ಮೀಯರು ಹಾಗೂ ಸ್ನೇಹಿತರು ಭಾಗವಹಿಸಿದ್ದರು.
ಇದನ್ನೂ ಓದಿ:ಇನ್ನೂ 2 ದಿನ ಭಯಂಕರ ಸೆಕೆ; ಕರ್ನಾಟಕದ ಈ ಭಾಗದಲ್ಲಿ ಭಾರೀ ಬಿಸಿಲು; ಹವಾಮಾನ ಇಲಾಖೆ ಎಚ್ಚರಿಕೆ
ನಾಮಕರಣ ಶಾಸ್ತ್ರಕ್ಕೆ ಬಂದ ಎಲ್ಲರೂ ನೇಹಾ ಅವರ ಮುದ್ದಾದ ಮಗಳಿಗೆ ಆಶೀರ್ವದಿಸಿದ್ದಾರೆ. ನಟಿ ನೇಹಾ ಗೌಡ ಅವರು ಲಕ್ಷ್ಮೀ ಬಾರಮ್ಮ ಸೀರಿಯಲ್‌ನಲ್ಲಿ ಗೊಂಬೆ ಪಾತ್ರದಲ್ಲಿ ಅಭಿನಯಿಸಿದವರು. ಗೊಂಬೆ ಪಾತ್ರದ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು.
ನಟಿ ನೇಹಾ ಗೌಡ ಹಾಗೂ ಚಂದನ್ ಗೌಡ ಫೆಬ್ರವರಿ 18, 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಚಂದನ್ ಗೌಡ ಅವರು ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರೋ ಅಂತರಪಟ ಸೀರಿಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು. ಸದ್ಯ ನೇಹಾ ಗೌಡ ಅವರ ಮತ್ತೊಂದು ಲೈಫ್ ಶುರುವಾಗಿದೆ.
ಅಕ್ಟೋಬರ್ 29ರಂದು ನಟಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ರು. ಚಂದನ್ಗೆ ಮಕ್ಕಳು ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ನೇಹಾಗೂ ಅಷ್ಟೇ ಪ್ರೀತಿ. ಮಗಳು ಬಂದ್ಮೇಲೆ ಅವಳೇ ಪ್ರಪಂಚ ಆಗಿದ್ದಾಳೆ. ದೊಡ್ಡಮ್ಮನಾದ ಖುಷಿಯಲ್ಲೂ ಸೋನು ಗೌಡ ಅವರು ಕ್ಯೂಟ್ ಶಾರದ ಜೊತೆಗೆ ಕಾಲ ಕಳೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ