ಸೀರಿಯಲ್​ ಮುಗಿಯುತ್ತಿದ್ದಂತೆ ಸಖತ್​ ಬ್ಯುಸಿಯಾದ ಲಕ್ಷ್ಮೀ; ನಟಿ ಭೂಮಿಕಾ ರಮೇಶ್ ನೆಕ್ಸ್ಟ್ ಪ್ಲಾನ್​ ಏನು?

author-image
Veena Gangani
Updated On
ಸೀರಿಯಲ್​ ಮುಗಿಯುತ್ತಿದ್ದಂತೆ ಸಖತ್​ ಬ್ಯುಸಿಯಾದ ಲಕ್ಷ್ಮೀ; ನಟಿ ಭೂಮಿಕಾ ರಮೇಶ್ ನೆಕ್ಸ್ಟ್ ಪ್ಲಾನ್​ ಏನು?
Advertisment
  • ಸಂಪೂರ್ಣವಾಗಿ ಮುಕ್ತಾಯಗೊಂಡ ಜನ ಮೆಚ್ಚಿದ ಸೀರಿಯಲ್​
  • 600 ಸಂಚಿಕೆಗಳನ್ನ ಯಶಸ್ಸಿಯಾಗಿ ಪೂರೈಸಿದ ಲಕ್ಷ್ಮೀ ಬಾರಮ್ಮ
  • ಕಾವೇರಿ ಅಟ್ಟಹಾಸಕ್ಕೆ ಗುಂಡಿ ತೋಡೋಕೆ ಸಿದ್ಧವಾದ ಕೀರ್ತಿ

ಲಕ್ಷ್ಮೀ ಬಾರಮ್ಮ 600 ಸಂಚಿಕೆಗಳನ್ನ ಯಶಸ್ಸಿಯಾಗಿ ಪೂರೈಸಿದೆ. ಟಿಆರ್​ಪಿನಲ್ಲಿ ಟಾಪ್​ ಲಿಸ್ಟ್​ನಲ್ಲಿರೋ ಧಾರಾವಾಹಿ ಮುಕ್ತಾಯ ಆಗ್ತಿರೋದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಯಾಕಪ್ಪ.. ಸಾವಿರ ಸಂಚಿಕೆ ಪೂರೈಸಿ ಅಂತಿದ್ದಾರೆ. ಆದರೆ ಪೀಕ್​ನಲ್ಲಿ ಇದ್ದಾಗಲೇ ಮುಕ್ತಾಯ ಮಾಡಿದ್ರೇ ಉತ್ತಮ ಅಂತ ತಂಡ ಈ ನಿರ್ಧಾರಕ್ಕೆ ಬಂದಿದೆ. ಈ ವಾರ ಪೂರ್ತಿ ಕೊನೆಯ ಸಂಚಿಗಗಳು ಸದ್ದು ಮಾಡಲಿವೆ.

ಇದನ್ನೂ ಓದಿ:ಸಖತ್​ ಗ್ರ್ಯಾಂಡ್​ ಆಗಿ ಅಮ್ಮನ ಬರ್ತ್​ ಡೇ ಸೆಲೆಬ್ರೇಟ್ ಮಾಡಿದ ದೀಪಿಕಾ ದಾಸ್​; ಫೋಟೋಸ್​ ಇಲ್ಲಿವೆ!

publive-image

ಕಾವೇರಿ ಅಟ್ಟಹಾಸಕ್ಕೆ ಗುಂಡಿ ತೋಡೋಕೆ ಕೀರ್ತಿ, ಲಕ್ಷ್ಮೀ, ವೈಷ್ಣವ್​ ಮೂವರು ಒಂದಾಗಿದ್ದಾರೆ. ಇನ್ನೇನಿದ್ದರೂ ಸತ್ಯದ ಬಾಂಬ್​ ಬ್ಲಾಸ್ಟ್​ ಆಗೋದು ಒಂದೇ ಬಾಕಿಯಿದೆ. ಈ ನಡುವೆ ದೇವಿ ಎದುರು ಲಕ್ಷ್ಮೀ ಕೀರ್ತಿ ರುದ್ರತಾಂಡವ ಆಡಿದ್ರು. ಆ ನೃತ್ಯ ವೈಭವವನ್ನು ನೋಡಿದ ಅಭಿಮಾನಿಗಳು ಖುಷಿ ಪಟ್ಟಿದ್ದರು. ಮೊದಲೇ ಇಬ್ಬರೂ ಕ್ಲಾಸಿಕಲ್​ ಡ್ಯಾನ್ಸರ್ಸ್​. ಈ ತರಹದ ಅವಕಾಶ ಸಿಕ್ಕಾಗ ಸುಮ್ನಿರ್ತಾರಾ? ಅದ್ಭುತ ಸೃಷ್ಟಿದ್ದರು.

publive-image

ಈಗಾಗಲೇ ಲಕ್ಷ್ಮೀ ಬಾರಮ್ಮ ಶೂಟಿಂಗ್​ ಸಂಪೂರ್ಣ ಮುಕ್ತಾಯವಾಗಿದ್ದು, ಲಕ್ಷ್ಮೀ ಪಾತ್ರಧಾರಿ ಭೂಮಿಕಾ ತೆಲುಗು ಪ್ರಾಜೆಕ್ಟ್​ನಲ್ಲಿ ಬ್ಯುಸಿಯಾಗಿದ್ದಾರೆ. ವೈಷ್ಣವ್​ ಪಾತ್ರಧಾರಿ ಶಮಂತ್​ ಹೊಸ ಮ್ಯೂಜಿಕ್​ ಸ್ಟುಡಿಯೋ ಓಪನ್​ ಮಾಡಿದ್ದಾರೆ ಜೊತೆಗೆ ಮದುವೆ ತಯಾರಿ ಮಾಡಿಕೊಳ್ತಿದ್ದಾರೆ. ಕೀರ್ತಿ ಪಾತ್ರಧಾರಿ ತನ್ವಿ ರಾವ್​ ಮುಂದೆ ಏನ್​ ಮಾಡ್ತಾರೆ ಎಂಬುದರ ಬಗ್ಗೆ ಅಪ್​ಡೇಟ್ ಇಲ್ಲ.. ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ಕೊಡುತ್ತೇವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment