/newsfirstlive-kannada/media/post_attachments/wp-content/uploads/2025/01/Lakshmi-Hebbalkar-Accident.jpg)
ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಆತಂಕಕ್ಕೆ ಕಾರಣವಾಗಿತ್ತು. ಸದ್ಯ ಲಕ್ಷ್ಮೀ ಹೆಬ್ಬಾಳ್ಕರ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಸಹೋದರ, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಅವರು ಕೂಡ ಇದ್ದರು.
ಇದನ್ನೂ ಓದಿ: ಭೀಕರ ಕಾರು ಅಪಘಾತದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಗಂಭೀರ ಗಾಯ; ಈ ಬಗ್ಗೆ ಏನಂದ್ರು ವೈದ್ಯರು?
ಕಾರು ಅಪಘಾತದ ಬಳಿಕ ಚನ್ನರಾಜ್ ಹಟ್ಟಿಹೊಳಿ ಅವರು ಬೆಳಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದರು. ಮನೆಯಿಂದ ಮತ್ತೆ ಆಸ್ಪತ್ರೆಗೆ ಬಂದಿರುವ ಚನ್ನರಾಜ್ ಅಕ್ಕನ ಆರೋಗ್ಯ ವಿಚಾರಿಸಿದ್ದಾರೆ.
ಇದೇ ವೇಳೆ ಚನ್ನರಾಜ್ ಹಟ್ಟಿಹೊಳಿ ಅವರು ಕಾರು ಅಪಘಾತದ ಘಟನೆ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಮ್ಮಿಂದಲೇ ಅಚಾತುರ್ಯ ಜರುಗಿದೆ. ಇದು ಆಗಬಾರದು ಇತ್ತು. ನಾವು ಎಚ್ಚರಿಕೆ ವಹಿಸದೇ ನಿರ್ಲಕ್ಷ್ಯ ಮಾಡಿದ್ವಿ. ಕಾರು ಚಾಲಕನ ತಪ್ಪು ಏನು ಇಲ್ಲ. ನಾಯಿ ಅಡ್ಡ ಬಂದಿದ್ದರಿಂದ ತಪ್ಪಿಸಲು ಹೋಗಿ ಅಪಘಾತ ನಡೆದಿದೆ. ನಮ್ಮ ಜೊತೆಗೆ ಯಾವುದೇ ಬೆಂಗಾವಲು ವಾಹನ ಇರಲಿಲ್ಲ. ತಡವಾಗಿ ನಾವು ಬಿಟ್ಟಿದ್ದರಿಂದ ಬೆಂಗಾವಲು ವಾಹನಕ್ಕೆ ಮಾಹಿತಿ ನೀಡಲಿಲ್ಲ. ಸಂಕ್ರಮಣ ಹಿಂದೆ, ಮುಂದೆ ಎಚ್ಚರಿಕೆಯಿಂದ ಇರುವಂತೆ ಜೋತಿಷಿಗಳು ಸಲಹೆ ನೀಡಿದರು. ಮನೆಯಲ್ಲಿ ದುರ್ಘಟನೆ ನಡೆಯುವ ಸಾಧ್ಯತೆ ಇದೆ ಎಂದು ಭವಿಷ್ಯ ಹೇಳಿದ್ರು ಎಂದಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಲಕ್ಕಿ ಕಾರು!
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಇತ್ತೀಚೆಗಷ್ಟೇ ಈ ಹೊಸ ಕಾರು ಹಂಚಿಕೆಯಾಗಿತ್ತು. ತಮ್ಮ ಲಕ್ಕಿ ಕಲರ್ ಹಾಗೂ ಲಕ್ಕಿ ನಂಬರ್ ಕಾರನ್ನೇ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಲಾಟ್ ಮಾಡಿಸಿಕೊಂಡಿದ್ದರು.
ಕಪ್ಪು ಬಣ್ಣದ ಟೊಯೋಟಾ ಇನೋವಾ ಹೈಕ್ರಾಸ್ ಕಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೆಎ 01 ಜಿಎ 9777 ಸಂಖ್ಯೆಯನ್ನು ಪಡೆದಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸೇರಿದ ಎಲ್ಲಾ ಕಾರುಗಳು ಕಪ್ಪು ಬಣ್ಣದ್ದು ಹಾಗೂ 9777 ಸಂಖ್ಯೆಯ ಕಾರುಗಳು. ಕಳೆದ ವಿಜಯದಶಮಿಯಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಂಗಳೂರಲ್ಲಿ ಕಾರಿಗೆ ವಿಶೇಷ ಪೂಜೆ ನೆರವೇರಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ