newsfirstkannada.com

ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟ ಲಕ್ಷ್ಮೀ ನಿವಾಸ ಸೀರಿಯಲ್​​ ಟೀಮ್​​; ಏನದು..?

Share :

Published March 18, 2024 at 7:50pm

    ಎಲ್ಲ ಅಭಿಮಾನಿಗಳು ಖುಷಿ ಪಡೋ ಸುದ್ದಿ ಕೊಟ್ಟ ಸೀರಿಯಲ್​ ತಂಡ

    ನಂಬರ್​ ಒನ್​ ಧಾರಾವಾಹಿಯಾಗಿ ಹೊರ ಹೊಮ್ಮುತ್ತಿರೋ ಲಕ್ಷ್ಮೀ ನಿವಾಸ

    ಮುಂದಿನ ದಿನಗಳಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ಎರಡು ಭಾಗವಾಗುತ್ತಾ?

ಲಕ್ಷ್ಮೀ ನಿವಾಸ ಮನೆ ಮನೆ ಮನಸ್ಸನ್ನ ಗೆದ್ದಿದೆ. ಕರ್ನಾಟಕದ ನಂಬರ್​ ಒನ್​ ಧಾರಾವಾಹಿಯಾಗಿ ಜನಪ್ರಿಯತೆ ಪಡೆಯುತ್ತಿದೆ. ತುಂಬು ಕುಟುಂಬದ ಕಥೆ ಮತ್ತೊಂದು ಹೊಸ ರೂಪ ಪಡೆಯುತ್ತಿದೆ. ಅಭಿಮಾನಿಗಳ ಆಸೆ ಇನ್ನೇನೂ ಕೆಲವೇ ದಿನಗಳ ಈಡೇರಲಿದೆ. ಹೌದು, ಸೀರಿಯಲ್​ ಸೆಟ್​ನಿಂದ ಇಂತಹದೊಂದು ಸುದ್ದಿ ಹರಿದಾಡ್ತಿದೆ.

ಈಗಾಗಲೇ ಮದುವೆ ಸಂಚಿಕೆಗಳು 1 ಗಂಟೆಯ ಕಾಲ ಪ್ರಸಾರವಾಗಲಿದೆ ಎಂಬ ಮಾಹಿತಿ ಅನೌನ್ಸ್​ ಆಗಿದೆ. ಇದರ ಜೊತೆಗೆ ಮದುವೆ ಮುಗಿದ ನಂತರ ಎರಡು ಹೊಸ ಸ್ಟೋರಿ ಹೊತ್ತು ತರಲಿದೆ ಲಕ್ಷ್ಮೀ ನಿವಾಸ. ಅರ್ಥಾತ್​ ಎರಡು ಧಾರಾವಾಹಿ ಆಗಿ ಸ್ಪ್ಲಿಟ್​ ಆಗಲಿದೆ. ಲಕ್ಷ್ಮೀ ಬಾರಮ್ಮ, ಭಾಗ್ಯಲಕ್ಷ್ಮೀ ಧಾರಾವಾಹಿ ರೀತಿಯಲ್ಲೇ ಅಕ್ಕ-ತಂಗಿಯ ಕಥೆ ಅಕ್ಕಪಕ್ಕ ತರೋ ಪ್ಲ್ಯಾನ್​ ನಡೆತಿದೆಯಂತೆ. ಒಂದು ಕಡೆ ಜಾಹ್ನವಿ-ಜಯಂತ್​ ಮದುವೆ ಸ್ಟೋರಿ. ಮತ್ತೊಂದು ಕಡೆ ಸಿದ್ದೇಗೌಡ್ರು-ಭಾವನಾ ಲವ್​ ಸ್ಟೋರಿ ಶುರುವಾಗಲಿದೆ. ಸಿದ್ದೇಗೌಡ್ರು ಲವ್​​ ಮಾಡೋ ಸ್ಟೈಲ್​ನ ಜನ ಸಿಕ್ಕಾಪಟ್ಟೆ ಇಷ್ಟಪಡುತ್ತಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಭಾವನಾ-ಸಿದ್ದೇಗೌಡರದ್ದೇ ಪ್ರೇಮ ಪುರಾಣ ಹರಿದಾಡ್ತಿದೆ.

ಇದನ್ನು ಓದಿ: ಮಂಡ್ಯ ಇನ್ನೂ ಸಸ್ಪೆನ್ಸ್‌.. ಜೆ.ಪಿ ನಡ್ಡಾ ಭೇಟಿ ಬಳಿಕ ಸುಮಲತಾ ಕೊಟ್ರು ಹೊಸ ಟ್ವಿಸ್ಟ್‌!

ವೀಕ್ಷಕರು ಇಷ್ಟು ಇಷ್ಟ ಪಟ್ಟಮೇಲೆ ಮನರಂಜನೆಯ ರುಚಿ ಮತ್ತಷ್ಟು ಹೆಚ್ಚಿಸಲು ಇವರ ಕಥೆನೇ ಬೇರೆ ರೀತಿ ಹೇಳೋ ಪ್ಲ್ಯಾನ್​ ಮಾಡ್ತಿದ್ದಾರಂತೆ. ಲಕ್ಷ್ಮೀ ನಿವಾಸ ಕುಟುಂಬಕ್ಕೆ ಜಯಂತ್​ ಅನ್ನೋ ಪಾತ್ರ ಎಂಟ್ರಿ ಕೊಟ್ಟಾಗಿನಿಂದ ಕಥೆ ಹೀಗೆ ಆಗಬಹುದಾ? ಹಾಗೇ​ ಆಗಬಹುದಾ..? ಜಯಂತ್​ ಯಾರು? ಯಾಕೆ ಇಷ್ಟು ಒಳ್ಳೆಯವನು? ಅನ್ನೋದ್ರ ಬಗ್ಗೆ ಫ್ಯಾನ್ಸೇ ಲೆಕ್ಕಾಚಾರ ಹಾಕುತ್ತಿದ್ದಾರೆ. ಹೀಗಾಗಿನೇ ಜಾಹ್ನವಿ-ಜಯಂತ್​ ಸ್ಟೋರಿನ ಮತ್ತಷ್ಟು ಇಂಟ್ರಸ್ಟಿಂಗ್​ ಆಗಿ ತೋರಿಸಲು ಇವರಿಗಾಗಿನೇ ಒಂದು ಸ್ಲಾಟ್​ ಫಿಕ್ಸ್​ ಮಾಡೋ ಮಾತು ಕೇಳಿ ಬರ್ತಿವೆ.

ಲಕ್ಷ್ಮೀ ನಿವಾಸ ತಮಿಳಿನ ತಾವರಮೈ ತವರಿಮಿರುಂದು ಸೀರಿಯಲ್​ನ ರಿಮೇಕ್​ ಆಗಿದ್ದು, ಕನ್ನಡದಲ್ಲಿ ಆದರ್ಶ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕೂಡು ಕುಟುಂಬ ಎಂಟರ್​ಟೈನ್ಮೆಂಟ್​ ಧಾರಾವಾಹಿ ಲಕ್ಷ್ಮೀ ನಿವಾಸ ಎರಡು ಭಾಗವಾಗಿ ಎರಡು ವಿಭಿನ್ನ ಕಥೆಯನ್ನ ತೋರಿಸಲು ತಯಾರಿ ಮಾಡಿಕೊಳ್ತಿದೆ ಅನ್ನೋದು ಸದ್ಯದ ಅಪ್​ಡೇಟ್ಸ್​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟ ಲಕ್ಷ್ಮೀ ನಿವಾಸ ಸೀರಿಯಲ್​​ ಟೀಮ್​​; ಏನದು..?

https://newsfirstlive.com/wp-content/uploads/2024/03/serial-15.jpg

Load More