/newsfirstlive-kannada/media/post_attachments/wp-content/uploads/2024/07/laxmi.jpg)
ಕನ್ನಡ ಕಿರುತೆರೆಯಲ್ಲೇ ಲಕ್ಷ್ಮೀ ನಿವಾಸ ಧಾರಾವಾಹಿ ವಿಭಿನ್ನವಾಗಿ ಮೂಡಿ ಬರ್ತಿದೆ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ತೂಕ, ವ್ಯಕ್ತಿತ್ವ ಇದ್ದು, ನಿರ್ದೇಶಕರು ಅದನ್ನು ಅಚ್ಚುಕಟ್ಟಾಗಿ ಪ್ರೆಸೆಂಟ್ ಮಾಡುತ್ತಿದ್ದಾರೆ. ಹೀಗಾಗಿನೇ ಅಪಾರ ವೀಕ್ಷಕರನ್ನ ಸಂಪಾದಿಸಿದೆ ಸೀರಿಯಲ್. ಅದರಲ್ಲೂ ಲಕ್ಷ್ಮೀ ನಿವಾಸ ಸೀರಿಯಲ್ನ ಜಾನ್ವಿ ಹಾಗೂ ಜಯಂತ್ ಪಾತ್ರಕ್ಕೆ ವೀಕ್ಷಕರು ಫಿದಾ ಆಗಿಬಿಟ್ಟಿದ್ದಾರೆ.
ಇದನ್ನೂ ಓದಿ:ಲಕ್ಷ್ಮೀ ನಿವಾಸ ಸೀರಿಯಲ್‌ಗೆ ದೊಡ್ಡ ಟ್ವಿಸ್ಟ್.. ಏಕಾಏಕಿ ಹೊರ ಬಂದ್ರಾ ನಟಿ ಚಂದನಾ?
ಹೌದು, ಜಾನ್ವಿ ನಮ್ಮನೆ ಹುಡುಗಿ. ಆ ಜಯಂತ್ ಆಕೆಗೆ ಎಷ್ಟು ಹಿಂಸೆ ಕೊಡುತ್ತಾರೆ. ಆಕೆಯನ್ನು ತವರು ಮನೆಗೆ ಹೋಗೋದಕ್ಕೂ ಬಿಡೋದಿಲ್ಲ ಏಕೆ ಅಂತ ವೀಕ್ಷಕರು ಕಾಮೆಂಟ್ ಮಾಡುವ ಮೂಲಕ ಅವರ ಅಭಿನಯಕ್ಕೆ ಜೈ ಎನ್ನುತ್ತಿದ್ದಾರೆ. ಅದರಲ್ಲೂ ತನಗೆ ಸಂಬಂಧಪಟ್ಟ ವಸ್ತುವಾಗಲಿ, ವ್ಯಕ್ತಿ ಆಗಲಿ ನನಗೆ ಮಾತ್ರ ಸ್ವಂತ ಅನ್ನೋ ಜಯಂತ್ ಹುಚ್ಚುತನ ವೀಕ್ಷಕರನ್ನ ಕೇರಳಿಸುತ್ತಿದೆ. ಅದರಲ್ಲೂ ಜಾನು ಹಾಗೂ ಜಯಂತ್ ಜೋಡಿಗೆ ವೀಕ್ಷಕರು ಬಹಳ ಇಷ್ಟಪಟ್ಟಿದ್ದಾರೆ.
View this post on Instagram
ಇದೀಗ ಈ ಸೀರಿಯಲ್ ಕ್ಯೂಟ್ ಜೋಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತೆರೆ ಮುಂದೆ ಈ ಇಬ್ಬರು ಕ್ಯೂಟ್ ಕಪಲ್. ಆದರೆ ಅದೇ ತೆರೆ ಹಿಂದೆ ಈ ಇಬ್ಬರು ಬೆಸ್ಟ್ ಫ್ರೆಂಡ್ ಆಗಿದ್ದಾರೆ. ಹೀಗೆ ಬಿಡುವಿನ ಸಮಯದಲ್ಲಿ ಈ ಇಬ್ಬರು ರೀಲ್ಸ್, ಹಾಡು ಹಾಡುತ್ತಾ ಕಾಲ ಕಳೆಯುತ್ತಾ ಇರುತ್ತಾರೆ. ಆದ್ರೆ ಈ ಬಾರಿ ಜಾನ್ವಿ ಪಾತ್ರಕ್ಕೆ ಬಣ್ಣ ಹಚ್ಚಿರೋ ನಟಿ ಚಂದನ, ದೀಪಕ್ ಸುಬ್ರಮಣ್ಯ ಅವರಿಗೆ ಮೇಕಪ್ ಮಾಡಿದ್ದಾರೆ. ಮೇಕಪ್ ಮಾಡುತ್ತಿರೋ ವಿಡಿಯೋ ನೋಡಿದ ಅಭಿಮಾನಿಗಳು ಅಬ್ಬಾ ಜಾನ್ವಿ ಹುಷಾರಮ್ಮ, ಆ ನನ್ನ ಮಗ ಸರಿ ಇಲ್ಲ, ಯಾವಾಗ ಅವನ ತಲೆ ಕೆಡುತ್ತೆ ಅಂತ ಹೇಳೋದಕ್ಕೆ ಆಗಲ್ಲ ಅಂತಾ ಕಾಮೆಂಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ