newsfirstkannada.com

ಯಾಕೋ ಜಾನುಗೆ ಅಷ್ಟು ಹಿಂಸೆ ಕೊಡ್ತೀಯಾ? ನಟ ಜಯಂತ್​ಗೆ ಅಜ್ಜಿ ಖಡಕ್​ ಕ್ಲಾಸ್​

Share :

Published May 29, 2024 at 7:40pm

  ಜಯಂತ್​​ನ​ ಹುಚ್ಚುತನಕ್ಕೆ ಸೀರಿಯಲ್​ ವೀಕ್ಷಕರು ಕೆಂಡಾಮಂಡಲ

  ಜಯಂತ್​ನನ್ನ ಧಾರಾವಾಹಿಯಿಂದ ತೆಗೆಯಿರಿ ಎನ್ನುತ್ತಿರೋ ಫ್ಯಾನ್ಸ್!​

  ಅದ್ಭುತ ನಟನೆ ಮೂಲಕವೇ ವೀಕ್ಷಕರ ಮನದಲ್ಲಿ ಉಳಿದುಕೊಂಡ ನಟ

ಕಾದಂಬರಿ, ಅಗ್ನಿಸಾಕ್ಷಿ, ಲಕ್ಷ್ಮೀ ಬಾರಮ್ಮ, ಅಮೃತವರ್ಷಿಣಿ, ಸಿಲ್ಲಿ ಲಲ್ಲಿ, ಮನೆಗೊಂದು ಮೂರು ಬಾಗಿಲು, ರಂಗೋಲಿ ಹೀಗೆ ಕನ್ನಡದ ಸಾಕಷ್ಟು ಸೀರಿಯಲ್​ಗಳನ್ನು ವೀಕ್ಷಕರು ಇನ್ನೂ ಮರೆತಿಲ್ಲ. ಕಾರಣವೆಂದರೆ ಕಿರುತೆರೆ ನಟ ಹಾಗೂ ನಟಿಯರ ಅದ್ಭುತ ನಟನೆಗೆ ಜನ ಹುಚ್ಚೆದ್ದು ನೋಡುತ್ತಿದ್ದರು. ಅದೇ ಕ್ರೇಜ್​ನಂತೆ ಈಗ ಮತ್ತೊಂದು ಸೀರಿಯಲ್​​ ಅನ್ನು ಜನ ಹುಚ್ಚೆದ್ದು ನೋಡುತ್ತಿದ್ದಾರೆ.

ಅದುವೆ  ಲಕ್ಷ್ಮೀ ನಿವಾಸ ಧಾರಾವಾಹಿ. ಹೌದು, ಲಕ್ಷ್ಮೀ ನಿವಾಸ ಸೀರಿಯಲ್​​​ ವಿಭಿನ್ನವಾಗಿ ಮೂಡಿಬರುತ್ತಿದ್ದು, ಪ್ರತಿ ಪಾತ್ರಗಳು ವಿಶೇಷವಾಗಿವೆ. ದೊಡ್ಡ ತಾರಾಬಳಗ ಇರೋ ಧಾರಾವಾಹಿಯಲ್ಲಿ ನೀನಾ? ನಾನಾ? ಎನ್ನುವಂತೆ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ ಎಲ್ಲಾ ಕಲಾವಿದರು. ಅದರಲ್ಲೂ ಜಯಂತ್​ ಪಾತ್ರ ಎಕ್ಸ್​ಟ್ರಾಡಿನರಿ ಆಗಿದೆ. ತನಗೆ ಸಂಬಂಧಪಟ್ಟ ವಸ್ತುವಾಗಲಿ, ವ್ಯಕ್ತಿ ಆಗಲಿ ನನಗೆ ಮಾತ್ರ ಸ್ವಂತ ಅನ್ನೋ ಜಯಂತ್​ ಹುಚ್ಚುತನ ವೀಕ್ಷಕರನ್ನ ಕೇರಳಿಸುತ್ತಿದೆ. ಅದರಲ್ಲೂ ಜಾನು ಹಾಗೂ ಜಯಂತ್​​ ಜೋಡಿಗೆ ವೀಕ್ಷಕರು ಬಹಳ ಇಷ್ಟಪಟ್ಟಿದ್ದಾರೆ.

View this post on Instagram

A post shared by Zee Kannada (@zeekannada)

ಇದನ್ನೂ ಓದಿ: ಅಂತೆ-ಕಂತೆ ವದಂತಿಗಳ ಮಧ್ಯೆ ಟ್ವೀಟ್ ಮಾಡಿ ನಾಲ್ಕು ಫೋಟೋ ಶೇರ್ ಮಾಡಿದ ಹಾರ್ದಿಕ್ ಪಾಂಡ್ಯ

ಇನ್ನು, ಜಾನು ಜೊತೆಗೆ ವರ್ತಿಸೋ ರೀತಿಗೆ ಸೈಕೋ ಜಯಂತ್​ನನ್ನ ಮೊದಲ ಧಾರಾವಾಹಿಯಿಂದ ತೆಗೆಯಿರಿ. ಏನಪ್ಪ ಈ ಜಯಂತ್​ ನೋಡಿದ್ರೇ ನಮಗೆ ಭಯ ಆಗುತ್ತೆ. ಪಾಪ ಜಾನು ಹೇಗೆ ಸಹಿಸಿಕೊಂಡಿದ್ದಾಳೋ ಅಂತ ವೀಕ್ಷಕರು ಜಯಂತ್​ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಜಯಂತ್​ ಪಾತ್ರ ಇಷ್ಟೊಂದು ಅದ್ಭುತವಾಗಿ ಮೂಡಿಬರೋಕೆ ಕಾರಣ ಜಯಂತ್​ಗೆ ಜೀವ ತುಂಬಿರೋ ಕಲಾವಿದ ದೀಪಕ್​ ಸುಬ್ರಮಣ್ಯ. ಮೊನ್ನೆ ಪಾತ್ರ ಮುಗಿಸಿ ಹೊರಟಿದ್ದ ದೀಪಕ್​ ಅವರಿಗೆ ಅಜ್ಜಿಯೊಬ್ಬರು ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ನೀನು ಮಾಡ್ತಿರೋದು ತಪ್ಪು. ಗ್ಲಾಸ್​ನ ಯಾಕೆ ಒಡೆದೆ. ಬೇಕಂತನೇ ರಕ್ತ ಬರಿಸಿಕೊಂಡೆ ನೀನು ಮಾಡಿದ್ದು ತಪ್ಪು ಎಂದು ಮುಗ್ಧವಾಗಿ ಬೈದಿದ್ದಾರೆ ಅಜ್ಜಿ. ಈ ಮಾತುಗಳನ್ನ ಪ್ರೀತಿಯಿಂದಲೇ ಜಯಂತ್​ ನಗುನಗುತಾ ಮಾತುಗಳನ್ನ ಸ್ವೀಕರಿಸಿದ್ದಾರೆ.
ಒಬ್ಬ ಕಲಾವಿದನಿಗೆ ಇದಕ್ಕಂತ ಇನ್ನೇನೂ ಬೇಕು ಹೇಳಿ. ಮಾಡಿದ ಪಾತ್ರ ಜನರ ಮನಸ್ಸಿಗೆ ಆಳವಾಗಿ ನಾಟಿದೆ ಅಂದ್ರೇ ಅದು ಪಾತ್ರದ ಜೊತೆಗೆ ಕಲಾವಿದನ ಗೆಲುವು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಾಕೋ ಜಾನುಗೆ ಅಷ್ಟು ಹಿಂಸೆ ಕೊಡ್ತೀಯಾ? ನಟ ಜಯಂತ್​ಗೆ ಅಜ್ಜಿ ಖಡಕ್​ ಕ್ಲಾಸ್​

https://newsfirstlive.com/wp-content/uploads/2024/05/jayanth.png

Load More