/newsfirstlive-kannada/media/post_attachments/wp-content/uploads/2024/12/chandana24.jpg)
ಇತ್ತೀಚಿಗಷ್ಟೇ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರದಲ್ಲಿ ಅಭಿನಯಿಸ್ತಿರೋ ಚಂದನಾ ಅನಂತಕೃಷ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಬಳಿಕ ನಟಿ ಚಂದನಾ ಸೀರಿಯಲ್ನಿಂದ ಆಚೆ ಬರ್ತಾರಾ ಅಂತ ವೀಕ್ಷಕರು ಗೊಂದಲದಲ್ಲಿ ಇದ್ದರು.
ಇದನ್ನೂ ಓದಿ:VIDEO: ಭಾವಿ ಪತಿ ಜತೆ ಚಿನ್ನುಮರಿ ಜಬರ್ದಸ್ತ್ ಡ್ಯಾನ್ಸ್; ಚಂದನಾ ಅನಂತಕೃಷ್ಣ ಫ್ಯಾನ್ಸ್ ಫುಲ್ ಖುಷ್
ಆದರೆ ಇದೀಗ ಆ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಹೌದು, ಮದುವೆ ಫಿಕ್ಸ್ ಆದ ಬಳಿಕ ನಟಿ ಸೀರಿಯಲ್ನಿಂದ ಚಂದನಾ ಬ್ರೇಕ್ ತೆಗೆದುಕೊಳ್ಳುತ್ತಾರೆ ಎಂಬೆಲ್ಲಾ ಮಾತುಗಳು ಹೇಳಿ ಬರುತ್ತಿದ್ದವು. ಹೀಗಾಗಿನೇ ಜಯಂತ್ ಹಾಗೂ ಜಾನು ನಡುವೆ ಹೊಸ ತಿರುವುಗಳನ್ನು ತಂದಿದ್ದರು ನಿರ್ದೇಶಕರು.
ಇದೀಗ ನಟಿ ಚಂದನಾ ಅನಂತಕೃಷ್ಣ ಮತ್ತೆ ಶೂಟಿಂಗ್ ಸೆಟ್ಗೆ ಮರಳಿದ್ದಾರೆ. ಕುಟುಂಬಸ್ಥರ ಹಾಗೂ ಗುರು ಹಿರಿಯರ ಸಮ್ಮುಖದಲ್ಲಿ ಉದ್ಯಮಿ ಪ್ರತ್ಯಕ್ಷ್ ಜೊತೆ ನವೆಂಬರ್ 28ರಂದು ಮದುವೆ ನಡೆದಿತ್ತು. ಇದೀಗ ನಟಿ ಚಂದನಾ ಅನಂತಕೃಷ್ಣ ಮದುವೆಯ ಮೆಹೆಂದಿ ಇನ್ನೂ ಗಾಢವಾಗಿರುವಾಗಲೇ ಶೂಟಿಂಗ್ ಸೆಟ್ ಬಂದಿದ್ದಾರೆ. ಸೀರಿಯಲ್‌ನಲ್ಲೂ ಅವರ ಕೈಯ ರಂಗೋಲೆಯನ್ನು ವೀಕ್ಷಕರು ಕಂಡು ಹಿಡಿದಿದ್ದಾರೆ. ಅದೇ ರೀತಿ ಹೊಸ ತಾಳಿ, ಕರಿಮಣಿ ಸರವೂ ಜೊತೆಗೆ ಬಂದಿರುವುದನ್ನು ನೋಡಿದ ಫ್ಯಾನ್ಸ್ ಫುಲ್ ಖೂಷ್ ಆಗಿದ್ದಾರೆ. ಜೊತೆಗೆ ನಟಿಯ ಮುಖದಲ್ಲಿ ಮದುವೆ ಕಳೆ ಇನ್ನೂ ಹಾಗೇ ಉಳಿದಿದೆ.
ಸದ್ಯ ಜಾನು ಗರ್ಭಿಣಿಯಾಗಿದ್ದು, ಜಯಂತ್ ಮುದ್ದಾದ ಹೆಂಡತಿ ಜಾನುಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದಾನೆ. ಇದರ ಮಧ್ಯೆ ಜಯಂತ್ ಮನೆಗೆ ಜಾನು ಪೋಷಕರು ಬರೋದಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ಹಿಂದೆ ಜಯಂತ್ ವೆಂಕಿಗೂ ಪ್ಲ್ಯಾಶ್ ಬ್ಯಾಕ್ ಸ್ಟೋರಿಯಿದ್ದು, ಮುಂದೆ ಕತೆಯಲ್ಲಿ ಹೊಸ ಟ್ವಿಸ್ಟ್ ಎದುರಾಗಲಿದೆ.
ವೆಂಕಿಗೆ ಮಾತು ಬರೋ ಸನ್ನಿವೇಶಗಳಿದ್ದು, ಜಯಂತ್ ಅಸಲಿ ಸತ್ಯ ಹೊರ ಬರಲಿದೆ. ಜಯಂತ್ನ ಬಗೆಗಿನ ಸತ್ಯಗಳು ಒಂದೊಂದಾಗಿ ಹೊರ ಬರ್ತಿರೋದು ವೀಕ್ಷಕರಲ್ಲಿ ಇದೇನಪ್ಪ ಇಷ್ಟು ಬೇಗ ಜಾನುಗೆ ನಿಜ ಗೊತ್ತಾಗೋ ಹಾಗೆ ಮಾಡ್ತಿದ್ದಾರಲ್ಲ. ಅಲ್ಲದೇ ಗರ್ಭಿಣಿ ಅಂತ ಕೂಡ ತೋರಿಸಿದ್ದಾರೆ. ಅಲ್ಲದೇ ತನ್ನ ಜೀವನಲ್ಲಿ ಆದ ಕಥೆಯನ್ನ ಹೇಳಿಕೊಂಡು ದುಃಖಿಸ್ತಿರೋ ಜಯಂತನನ್ನು ಜಾಹ್ನವಿ ಸಮಾಧಾನಿಸ್ತಿದ್ದಾಳೆ. ಆದರೆ ಈಗ ಜಾನು ಸೀರಿಯಲ್ ಬಿಡ್ತಾರಾ ಅನ್ನೋ ಅನುಮಾನ ಹುಟ್ಟುಹಾಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ