/newsfirstlive-kannada/media/post_attachments/wp-content/uploads/2024/11/chandana10.jpg)
ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರದಲ್ಲಿ ಅಭಿನಯಿಸ್ತಿರೋ ಚಂದನಾ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇದು ಪಕ್ಕಾ ಅರೆಂಜ್ಡ್ ಮ್ಯಾರೇಜ್ ಆಗಿದ್ದು, ಕುಟುಂಬಸ್ಥರು ಗುರು ಹಿರಿಯರ ಸಮ್ಮುಖದಲ್ಲಿ ಉದ್ಯಮಿ ಪ್ರತ್ಯಕ್ಷ್ ಜೊತೆ ಇದೇ ನವೆಂಬರ್ 28 ಅಂದರೆ ನಾಳೆ ಬೆಂಗಳೂರಿನಲ್ಲಿ ಚಂದನಾ ಮದುವೆ ಜರುಗಲಿದೆ.
ಇದನ್ನೂ ಓದಿ: ಅಲ್ಲು ಅರ್ಜುನ್ಗೆ ಇಂಡಿಯಾದಲ್ಲೇ ಅತಿ ಹೆಚ್ಚು ಸಂಭಾವನೆ.. ಪುಷ್ಪ-2ಗೆ ಐಕಾನ್ ಸ್ಟಾರ್ ಪಡೆದ ದುಡ್ಡು ಎಷ್ಟು?
ಸದ್ಯ ಮೆಹೆಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದ್ದು, ಕ್ಯೂಟ್ ಜೋಡಿ ಬಾರೇ ಬಾರೇ ಕಲ್ಯಾಣ ಮಂಟಪಕ್ಕೆ ಬಾ ಅಂತ ಹೆಜ್ಜೆ ಹಾಕಿ ಸಂಭ್ರಮಿಸಿದೆ. ಚಂದನಾ ಖುಷಿಯಲ್ಲಿ ಲಕ್ಷ್ಮೀ ನಿವಾಸ ತಂಡ ಕೂಡ ಜೊತೆಯಾಗಿದೆ. ಮಾನಸಾ ದಂಪತಿ, ದಿಶಾ ಮದನ್ ದಂಪತಿ, ನಟ ಮಧು, ಕ್ಲೋಸ್ ಫ್ರೆಂಡ್ ನಯನಾ ದಂಪತಿ ಸೇರಿದಂತೆ ಕಿರುತೆರೆಯ ಕಲಾವಿದರು ಆತ್ಮಿಯರು ಭಾಗಿಯಾಗಿದ್ರು.
ಇನ್ನೂ, ಪ್ರತ್ಯಕ್ಷ ಮೂಲತಃ ಚಿಕ್ಕಮಗಳೂರುನಿವರು. Mtech ವಿದ್ಯಾಭ್ಯಾಸ ಮಾಡಿದ್ದು, ಸದ್ಯ ಬೆಂಗಳೂರಿನಲ್ಲೇ ಸ್ವಂತ ಉದ್ಯಮ ಹೊಂದಿದ್ದಾರೆ. ಸಿನಿಮಾ ಕುಟುಂಬದ ಹಿನ್ನಲೆ ಹೊಂದಿರೋ ಪ್ರತ್ಯಕ್ಷ ತಂದೆ ನಟ ದಿವಂಗತ ಉದಯ್ ಹುತ್ತಿನಗದ್ದೆ ಹಾಗೂ ತಾಯಿ ಲಲಿತಾಂಜಲಿ ಉದಯ್. ಕಿನ್ನರಿ, ಒಲವಿನ ನಿಲ್ದಾಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ ಲಲಿತಾಂಜಲಿ.
ಇದನ್ನೂ ಓದಿ:ಆರ್ಸಿಬಿಗೆ ಕಿಂಗ್ ಆಫ್ ಸ್ವಿಂಗ್ ಎಂಟ್ರಿ.. ಬೆಂಗಳೂರು ತಂಡದ ಬಗ್ಗೆ ಭುವಿ ಮನದಾಳದ ಮಾತು..!
ಪ್ರತ್ಯಕ್ಷ್ ತಂದೆ ಉದಯ್ ಡಾ.ರಾಜ್ ಕುಮಾರ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ದೇವತಾ ಮನುಷ್ಯ ಚಿತ್ರದಲ್ಲಿ ನಟಿಸಿದ್ದ ನಟ ಉದಯ್ ಹುತ್ತಿನಗದ್ದೆ ಅವರು ‘ಆರಂಭ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದರು. ‘ಅಗ್ನಿಪರ್ವ’, ‘ಶುಭ ಮಿಲನ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.
ಚಂದನಾ ಅನಂತಕೃಷ್ಣ ಕೂಡ ಪ್ರತಿಭಾವಂತ ನಟಿಯಾಗಿದ್ದು, ಭರತನಾಟ್ಯ, ಸಂಗೀತ ಸೇರಿದಂತೆ ಸಕಲ ಕಲಾವಲ್ಲಭೆ. ಮದುವೆ ಆಗುತ್ತಿರುವುದು ಕಲಾ ಕುಟುಂಬವನ್ನು. ಇದೇ ನವೆಂಬರ್ 28 ರಂದು ನಾಳೆ ಮದುವೆ ಹಾಗೂ ಆರತಕ್ಷತೆ ಪ್ಯಾಲೆಸ್ ಗ್ರೌಂಡ್ನಲ್ಲಿ ಜರುಗಲಿದೆ.
View this post on Instagram
ಸದ್ಯ ನಟಿಯ ಮನೆಯಲ್ಲಿ ಮದುವೆಯ ಸಂಭ್ರಮ ಶುರುವಾಗಿದೆ. ಈಗಾಗಲೇ ಅರಿಶಿನ ಶಾಸ್ತ್ರಗಳು ಮುಗಿದಿವೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೂ ನಟಿ ತನ್ನ ಇನ್‌ಸ್ಟಾ ಪೇಜ್‌ನಲ್ಲಿ ಯಾವೊಂದು ಫೋಟೋವನ್ನು ಪೋಸ್ಟ್ ಮಾಡಿಲ್ಲ. ಆದರೆ ಅವರ ಸ್ನೇಹಿತರು ಈಗಾಗಲೇ ಅವರ ಮೆಹೆಂದಿ, ಸಂಗೀತ್ ಕಾರ್ಯಕ್ರಮಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ