/newsfirstlive-kannada/media/post_attachments/wp-content/uploads/2025/06/manasa4.jpg)
ನಟಿ ಮಾನಸ ಮನೋಹರ್ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮೀರಾ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದವರು. ಈಗ ಲಕ್ಷ್ಮೀ ನಿವಾಸದಲ್ಲಿ ಖಳನಾಯಕಿಯಾಗಿ ನೀಲು ಪಾತ್ರದ ಮೂಲಕ ರಂಜಿಸ್ತಿದ್ದಾರೆ.
ಇದನ್ನೂ ಓದಿ:ಪತಿ ಜತೆ ನಟಿ ವೈಷ್ಣವಿ ಗೌಡ ಫುಲ್ ಮಸ್ತಿ.. ಹೋಗಿದ್ದು ಎಲ್ಲಿಗೆ ಗೊತ್ತಾ..? PHOTOS
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರೋ ನಟಿ. ಶೂಟಿಂಗ್ ಗ್ಯಾಪ್ನಲ್ಲಿ ಇವ್ರು ಮಾಡೋ ಕಾಮಿಡಿ ರೀಲ್ಸ್ಗಳನ್ನ ಹಾಸ್ಯ ಪ್ರಿಯರು ಇಷ್ಟಪಡ್ತಾರೆ. ರಿಯಲ್ ಲೈಫ್ಗೂ ಇವ್ರು ಮಾಡೋ ಪಾತ್ರಗಳಿಗೆ ಡೆಡ್ ಆಪೋಸಿಟ್.
ನವೆಂಬರ್ನಲ್ಲಿ ಉದ್ಯಮಿ ಪ್ರೀತಂ ಚಂದ್ರ ಎಂಬುವವರನ್ನ ನಟಿ ಅದ್ಧೂರಿಯಾಗಿ ಮದುವೆ ಆಗಿದ್ದರು. ಅಂದ್ಹಾಗೆ, ಮೊದಲ ಮದುವೆಯಿಂದ ನೊಂದಿದ್ದ ಮಾನಸಾ, ಎರಡನೇ ಮದುವೆಯಲ್ಲಿ ಸುಖ ಸಂಸಾರದ ಒಡತಿಯಾಗಿದ್ದಾರೆ. ಇನ್ನೂ ಪತ್ನಿಗಾಗಿ ಕ್ಯೂಟ್ ಆಗಿ ಸರ್ಪ್ರೈಸ್ ಕೊಟ್ಟಿದ್ದರು ಪ್ರೀತಂ ಚಂದ್ರ. ಇದೇ ವೇಳೆ ಪತಿ ಪ್ರೀತಂ ಚಂದ್ರ ಬಗ್ಗೆ ನಟಿ ಮಾನಸ ಅವರು ಭಾವುಕರಾಗಿ ಮಾತಾಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಮದುವೆ ನಂತರ ಮೊದಲ ಹುಟ್ಟುಹಬ್ಬವನ್ನ ಸೆಲೆಬ್ರೆಟ್ ಮಾಡಿರೋ ನಟಿ ಕುಟುಂಬದ ಜೊತೆ ಕಾಲ ಕಳೆದಿದ್ದಾರೆ.
ಸ್ನೇಹಿತರು ಮಾನಸಾಗೆ ಸ್ಪೆಷಲ್ ಸರ್ಪ್ರೈಸ್ ನೀಡಿದ್ರು. ಅಮ್ಮ-ಅಪ್ಪನಕ್ಕಿಂತ ಹೆಚ್ಚಾಗಿ ನೋಡಿಕೊಳ್ಳೋ ಅತ್ತೆ-ಮಾವ, ಪತಿ ಜೊತೆಗೆ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ