newsfirstkannada.com

ಹೊಸ ಸೀರಿಯಲ್​​ನಲ್ಲಿ ಸ್ಟಾರ್​​ ಕಲಾವಿದರು.. ಕನ್ನಡಿಗರ ಮನಸ್ಸು ಗೆಲ್ಲುತ್ತಾ ಲಕ್ಷ್ಮೀ ನಿವಾಸ..?

Share :

Published January 12, 2024 at 6:06am

Update January 12, 2024 at 8:25am

    ಮಿಡಲ್ ಕ್ಲಾಸ್ ಜೀವನದಲ್ಲಿ ಬದುಕುತ್ತಿರೋ ದಂಪತಿಯ ಕತೆ ಇದು

    3-4 ವರ್ಷಗಳಿಂದ ಗಟ್ಟಿಮೇಳ ಟಿಆರ್​​ಪಿ ಟಾಪ್​ 1ರಲ್ಲೇ ಇತ್ತು

    ಮತ್ತೊಂದು ಹೊಸ ಕತೆಯನ್ನ ಬರಮಾಡಿಕೊಳ್ಳೋಕೆ ಸಜ್ಜಾದ ‘ಜೀ’

ಜೀ ವಾಹಿನಿ ಒಂದಿಲ್ಲೊಂದು ವಿಷಯಕ್ಕೆ ಸದ್ದು ಮಾಡ್ತಾನೆ ಇರುತ್ತೆ. ಹೊಸ ಹೊಸ ಕತೆಗಳಿಗೆ ಜೀ ವಾಹಿನಿ ಯಾವಾಗಲೂ ಆದ್ಯತೆ ನೀಡ್ತಾ ಬಂದಿದೆ. ಈಗ ಜೀ ಮತ್ತೊಂದು ಹೊಸ ಕತೆಯನ್ನ ಬರಮಾಡಿಕೊಳ್ಳೋಕೆ ಸಜ್ಜಾಗಿ ನಿಂತಿದೆ. ಅದುವೇ ಮಿಡಲ್ ಕ್ಲಾಸ್ ಜೀವನವನ್ನ ತೋರಿಸೋ ಲಕ್ಷ್ಮೀ ನಿವಾಸ. ಲಕ್ಷ್ಮೀ ನಿವಾಸ ಧಾರಾವಾಹಿ ಒಂದು ಮಿಡಲ್ ಕ್ಲಾಸ್ ಜೀವನದಲ್ಲಿ ಬದುಕುತ್ತಿರೋ ಒಂದು ದಂಪತಿಯ ಕತೆಯಾಗಿದೆ.

ಈ ದಂಪತಿಗೆ ಒಂದು ಅವರದ್ದೆ ಆದ ಸ್ವಂತ ಮನೆ ಮಾಡಬೇಕು. ಇರೋ ಮೂವರು ಹೆಣ್ಣು ಮಕ್ಕಳಲ್ಲಿ ಮೊದಲನೇ ಹೆಣ್ಣು ಮಗಳಿಗೆ ಮದುವೆ ಆಗಿದೆ. ಇನ್ನೂ ಇಬ್ಬರ ಮದುವೆ ಮಾಡಿ ಒಳ್ಳೆ ಮನೆ ಸೇರಿಸಬೇಕು ಅನ್ನೋದು ಈ ಮುದ್ದಾದ ದಂಪತಿಗಳಾದ ಶ್ರೀನಿವಾಸ ಹಾಗೂ ಲಕ್ಷ್ಮೀಯ ಕನಸಾಗಿರುತ್ತೆ. ಕರುನಾಡೇ ಮೆಚ್ಚಿದಂತಹ ಗಟ್ಟಿಮೇಳ ಕಳೆದ ವಾರವಷ್ಟೇ ತನ್ನ ಕತೆಗೆ ವಿದಾಯ ಹೇಳಿದ ಬೆನ್ನಲ್ಲೇ ಈಗ ಅದೇ ಸ್ಲಾಟ್​ಗೆ ಅಂದ್ರೆ ಪ್ರತಿ ದಿನ ರಾತ್ರಿ 8ಗಂಟೆಗೆ ಇನ್ಮುಂದೆ ಹೊಚ್ಚ ಹೊಸ ಧಾರಾವಾಹಿ ಲಕ್ಷ್ಮೀ ನಿವಾಸ ಪ್ರಸಾರವಾಗಲಿದೆ.

ಈ ಧಾರಾವಾಹಿ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡೋದ್ರಲ್ಲಿ ಸಂಶಯವೇ ಇಲ್ಲಾ. ಏಕೆಂದರೆ ಈ ಧಾರಾವಾಹಿಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಶ್ವೇತಾ ಅವರು ಪ್ರಮುಖ ಪಾತ್ರ ಆಗಿರೋ ಲಕ್ಷ್ಮೀ ಪಾತ್ರಕ್ಕೆ ಮೊಟ್ಟ ಮೊದಲನೇ ಬಾರಿಗೆ ಕಿರುತೆರೆಯ ಧಾರಾವಾಹಿಯಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಧಾರಾವಾಹಿಯಲ್ಲಿ ಮೂವರು ಹೆಣ್ಣು ಮಕ್ಕಳಾಗಿ ಕಲರ್ಸ್​ ವಾಹಿನಿಯ ಕುಲವಧು ಧಾರಾವಾಹಿ ವಚನಾ ಪಾತ್ರದ ಖ್ಯಾತಿಯ ದಿಶಾ ಮದನ್ ಬಹು ವರ್ಷಗಳ ನಂತರ ಕಿರುತೆರೆಗೆ ವಾಪಸ್ ಆಗಿದ್ದಾರೆ. ಕಿರುತೆರೆಗೆ ಚಿರಪರಿಚಿತ ನಟಿ ಚಂದನಾ ಅನಂತಕೃಷ್ಣ ಹಾಗೂ ಮತ್ತೋರ್ವ ನಟಿ ಲಕ್ಷ್ಮೀ. ಈ ಮೂವರು ಹೆಣ್ಣು ಮಕ್ಕಳು ಲಕ್ಷ್ಮೀ ನಿವಾಸದ ಹೆಣ್ಣು ಮಕ್ಕಳಾಗಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ಮನೆಯ ಮಗನ ಪಾತ್ರದಲ್ಲಿ ನಟ ಅಜಯ್ ರಾಜ್ ಹಾಗೂ ಇವರ ಹೆಂಡತಿ ಪಾತ್ರದಲ್ಲಿ ದಾಸ ಪುರಂದರ ಧಾರಾವಾಹಿಯ ರುಕ್ಮಿಣಿ ಪಾತ್ರದಲ್ಲಿ ಮಿಂಚಿದ ನಟಿ ದಿವ್ಯಶ್ರೀ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆ ಮನೆಯ ಅಳಿಯನ ಪಾತ್ರದಲ್ಲಿ ನಟ ಮಧಯ ಹೆಗ್ಡೆ ಕೂಡ ಧಾರಾವಾಹಿಗೆ ಕಂಬ್ಯಾಕ್ ಮಾಡಿದ್ದಾರೆ. ಧಾರಾವಾಹಿಯ ಪ್ರೋಮೋಗಳು ಹೊರಬಿದ್ದಿದ್ದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಲರ್ಸ್ ವಾಹಿನಿಯ ಭಾಗ್ಯಲಕ್ಷ್ಮೀ ಧಾರಾವಾಹಿಯ ಹಿಟ್ ನಂತರದಲ್ಲಿ ಲಕ್ಷ್ಮೀ ನಿವಾಸ ಎಂಬ ಧಾರಾವಾಹಿಯನ್ನ ತೆರೆ ಮೇಲೆ ತರಲು ಸಜ್ಜಾಗಿದೆ. ಗಟ್ಟಿಮೇಳ ನಂತರದಲ್ಲಿ ಆ ಸ್ಲಾಟ್​ಗೆ ಲಕ್ಷ್ಮೀ ನಿವಾಸ ಬರ್ತಿದೆ. ಇದಂತೂ ಜೀ ವಾಹಿನಿಯ ಒಂದು ದೊಡ್ಡ ಜವಾಬ್ದಾರಿ ಅಂತಲೇ ಹೇಳಬಹುದು.

ಕಾರಣ ಮೂರ್ನಾಲ್ಕು ವರ್ಷಗಳ ನಂತರದಲ್ಲೂ ಗಟ್ಟಿಮೇಳ ಟಿಆರ್​​ಪಿ ಟಾಪ್​ನಲ್ಲೇ ಇತ್ತು. ಆದ್ರೆ ಈಗ ಅನಿವಾರ್ಯವಾಗಿ ಧಾರಾವಾಹಿ ಮುಕ್ತಾಯವಾಗಿದೆ. ಹೀಗಿರುವಾಗ ಲಕ್ಷ್ಮೀ ನಿವಾಸದ ಕತೆಯ ಮೇಲೆ ಎಲ್ಲರ ಕಣ್ಣಿದೆ. ಗಟ್ಟಿಮೇಳದ ಪ್ರೇಕ್ಷಕರನ್ನ ಕಳೆದುಕೊಳದೇ ಕಾಪಾಡಿಕೊಳ್ಳಬೇಕು ಎಂಬ ಗಟ್ಟಿ ಪ್ರಯತ್ನ ನಡೀತಿದೆ. ಒಟ್ಟಿನಲ್ಲಿ ಮಿಡಲ್ ಕ್ಲಾಸ್ ಜೀವನ ಹೇಗಿರುತ್ತೆ ಅನ್ನೋದನ್ನ ತೋರಿಸೋಕೆ ಲಕ್ಷ್ಮೀ ನಿವಾಸ ಸಜ್ಜಾಗಿ ನಿಂತಿದೆ. ಇದೇ ಜನವರಿ 16ರಿಂದ ಪ್ರತಿ ರಾತ್ರಿ 8 ಗಂಟೆಗೆ ಲಕ್ಷ್ಮೀ ನಿವಾಸದ ಕುಟುಂಬದವ್ರು ನಿಮ್ಮ ಮನೆ ಮನಗಳಿಗೆ ತಲುಪಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಸೀರಿಯಲ್​​ನಲ್ಲಿ ಸ್ಟಾರ್​​ ಕಲಾವಿದರು.. ಕನ್ನಡಿಗರ ಮನಸ್ಸು ಗೆಲ್ಲುತ್ತಾ ಲಕ್ಷ್ಮೀ ನಿವಾಸ..?

https://newsfirstlive.com/wp-content/uploads/2024/01/new-10.jpg

Load More