ಲಕ್ಷ್ಮೀ ನಿವಾಸ ವೀಕ್ಷಕರಿಗೆ ಶಾಕ್​.. ಏಕಾಏಕಿ ಸೀರಿಯಲ್​ನಿಂದ ಆಚೆ ಬಂದ ತನು ಪಾತ್ರಧಾರಿ

author-image
Veena Gangani
Updated On
ಲಕ್ಷ್ಮೀ ನಿವಾಸ ವೀಕ್ಷಕರಿಗೆ ಶಾಕ್​.. ಏಕಾಏಕಿ ಸೀರಿಯಲ್​ನಿಂದ ಆಚೆ ಬಂದ ತನು ಪಾತ್ರಧಾರಿ
Advertisment
  • ಲಕ್ಷ್ಮೀ ನಿವಾಸ ಸೀರಿಯಲ್​ನಿಂದ ಆಚೆ ಬಂದ ನಟಿ ಯುಕ್ತಾ
  • ವೀಕ್ಷಕರ ನೆಚ್ಚಿನ ಸೀರಿಯಲ್​ನಲ್ಲಿ ಒಂದಾಗಿದೆ ಲಕ್ಷ್ಮೀ ನಿವಾಸ
  • ಮುದ್ದಾಗಿ ವಿಶ್ವ.. ವಿಶ್ವ ಅಂತ ಓಡಾಡಿಕೊಂಡಿದ್ದ ಚಲುವೆ ತನು

ಕಿರುತೆರೆಯಲ್ಲಿ ಇತ್ತೀಚೆಗೆ ಲಾಂಚ್ ಆದ ಧಾರಾವಾಹಿಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು. ಬಹುದೊಡ್ಡ ತಾರಗಣ ಹೊಂದಿರೋ ಈ ಧಾರಾವಾಹಿಯ ವೀಕ್ಷಕರ ನೆಚ್ಚಿನ ಸೀರಿಯಲ್​ನಲ್ಲಿ ಒಂದಾಗಿದೆ.

ಇದನ್ನೂ ಓದಿ:ವಿಲನ್​ ಲುಕ್​ನಲ್ಲಿ ಲಕ್ಷ್ಮೀ ನಿವಾಸ ಸಿದ್ದೇಗೌಡ್ರು; ನಟ ಧನಂಜಯ್ ಅವತಾರಕ್ಕೆ ಫ್ಯಾನ್ಸ್ ಶಾಕ್!​

publive-image

ಆದರೆ ಇದೀಗ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ತನು ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಯುಕ್ತಾ ಅವರು ಹೊರಬಂದಿದ್ದಾರೆ. ವೀಕ್ಷಕರಿಗೆ ವಿಶ್ವ ಹಾಗೂ ತನು ಪಾತ್ರ ತುಂಬ ಇಷ್ಟ ಆಗಿತ್ತು. ಮುದ್ದು ಮುದ್ದಾಗಿ ವಿಶ್ವ.. ವಿಶ್ವ ಅಂತ ಓಡಾಡಿಕೊಂಡಿದ್ದ ಚಲುವೆ ತನು ಏಕಾಏಕಿ ಸೀರಿಯಲ್​ನಿಂದ ಆಚೆ ಬಂದು ವೀಕ್ಷಕರಿಗೆ ಶಾಕ್​ ಕೊಟ್ಟಿದ್ದಾರೆ. ನಟಿ ಯುಕ್ತಾ ಅವರು ಧಾರಾವಾಹಿಯಿಂದ ಆಚೆ ಬಂದಿದ್ದೇಕೆ ಅಂತ ಮಾಹಿತಿ ಲಭ್ಯವಾಗಿಲ್ಲ.

publive-image

ಆದ್ರೆ ನಟಿ ತನು ಪಾತ್ರಧಾರಿ ಜಾಗಕ್ಕೆ ಹೊಸ ನಟಿಯ ಆಗಮನವಾಗಿದೆ. ಇದೀಗ ತನು ಪಾತ್ರಕ್ಕೆ ಮಹಾಲಕ್ಷ್ಮೀ ಎಂಬುವವರು ಎಂಟ್ರಿ ಕೊಟ್ಟಿದ್ದಾರೆ. ಈ ಮಹಾಲಕ್ಷ್ಮೀ ಬೇರೆ ಯಾರು ಅಲ್ಲ, ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಸಿದ್ದೇಗೌಡರ ಪಾತ್ರದಲ್ಲಿ ನಟಿಸುತ್ತಿರೋದು ನಟ ಧನಂಜಯ್ ಅವರ ತಂಗಿಯಾಗಿದ್ದಾರೆ.

publive-image

ನಟಿ ಮಹಾಲಕ್ಷ್ಮೀ ಈಗಾಗಲೇ ಕುಬುಸ, ಥಗ್ಸ್‌ ಆಫ್‌ ರಾಮಘಡ, ಸ್ವಪ್ನ ಮಂಟಪ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ಧನಂಜಯ ಅವರ ನಿಜವಾದ ಅಮ್ಮ ಚೆಲುವು ತಾಯಿಯಾಗಿ ನಟಿಸುತ್ತಿದ್ದಾರೆ. ಈಗ ತನು ಜಾಗಕ್ಕೆ ಅವರ ನಿಜವಾದ ತಂಗಿ ಎಂಟ್ರಿ ಕೊಟ್ಟಿದ್ದಾರೆ. ಖುಷಿಯ ವಿಚಾರ ಏನೆಂದರೆ ಒಂದೇ ಧಾರಾವಾಹಿಯಲ್ಲಿ ಅಮ್ಮ-ಮಗ-ಮಗಳು ನಟಿಸುತ್ತಿರೋದು. ಈ ವಿಚಾರ ಸೀರಿಯಲ್ ವೀಕ್ಷಕರಿಗೂ ಖುಷಿ ಕೊಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment