/newsfirstlive-kannada/media/post_attachments/wp-content/uploads/2025/05/lakshmi-nivasa-kannada-serial-actor-3.jpg)
ಬೆಂಗಳೂರು: ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಅಭಿನಯಿಸಿದ್ದ ನಟ ಮಿಥುನ್ ಕುಮಾರ್ ಕೌಟುಂಬಿಕ ಕಲಹ ಬೀದಿಗೆ ಬಂದಿದೆ. ಮಿಥುನ್ ಪತ್ನಿ ಗಂಡನ ಮೇಲೆ ಗಂಭೀರ ಆರೋಪಗಳನ್ನ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ. FIRನಲ್ಲಿ ಮಿಥುನ್ ಕುಮಾರ್ ಪತ್ನಿ ತನ್ನ ಗಂಡನ ಅಕ್ರಮ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದಾರೆ.
ಪತ್ನಿ ಗಂಭೀರ ಆರೋಪ ಏನು?
ಕಿರುತೆರೆ ನಟ ಮಿಥುನ್ ಕುಮಾರ್ ಪತ್ನಿ ತನ್ನ ಗಂಡನ ವಿರುದ್ಧ ವಿಜಯನಗರ ಮಹಿಳಾ ಠಾಣೆಯ ಮೆಟ್ಟಿಲೇರಿದ್ದಾರೆ. ನನ್ನ ಗಂಡ ಬೇರೆ ಯುವತಿ ಜೊತೆ ಬೆಡ್ ಶೇರ್ ಮಾಡಿದ್ದಾನೆ. ನಾನು ಅದನ್ನ ಕಣ್ಣಾರೆ ನೋಡಿದ್ದೇನೆ ಎಂದು ಆರೋಪಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/05/lakshmi-nivasa-kannada-serial-actor-5.jpg)
ಮುಂದುವರಿದು ನನಗೆ ಈ ಹಿಂದೆ ಲವ್ ಬ್ರೇಕಪ್ ಆಗಿತ್ತು. ನಾನೂ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದೆ. ಈ ಸಮಯದಲ್ಲಿ ನನಗೆ ಮಿಥುನ್ ಪರಿಚಯ ಆಯಿತು. ನಮ್ಮದು 5 ವರ್ಷದ ಪ್ರೀತಿ ಮತ್ತು 6 ಆರು ವರ್ಷದ ಪರಿಚಯ.
ಮೊದಲ ಒಂದು ವರ್ಷ ನಾವಿಬ್ಬರು ಫ್ರೆಂಡ್ಸ್ ಆಗಿದ್ವಿ. ನಂತರ ಲವ್ ಮಾಡಿ ಮದುವೆಯಾಗಲು ರೆಡಿಯಾದ್ವಿ. ನಮ್ಮ ಮದುವೆ ಟೈಂನಲ್ಲಿ ಮಿಥುನ್ ಅವರ ಬಳಿ ದುಡ್ಡಿರಿಲಿಲ್ಲ. ಆಗ ನನ್ ದುಡ್ಡಲ್ಲೇ ಮದ್ವೆಯಾಗಿದ್ದೇವೆ.
ತಾಳಿಗೂ ದುಡ್ಡಿಲ್ಲ, ಅರಿಶಿನ ದಾರ ಕಟ್ಟುತ್ತೇನೆ ಎಂದು ಹೇಳಿದ್ದರು. ಆಗ ನಾನೇ ಬೇಡ ಎಂದು ತಾಳಿ ತರಿಸಿಕೊಂಡಿದ್ದೆ. ದೇವಸ್ಥಾನದಲ್ಲಿ ನನ್ನ ಖರ್ಚಿನಲ್ಲಿ ಮದ್ವೆಯಾಗಿದ್ದೇವೆ.
ಇದನ್ನೂ ಓದಿ: ನಾಳೆಯೇ SSLC ಫಲಿತಾಂಶ.. ಎಷ್ಟು ಗಂಟೆಗೆ? ರಿಸಲ್ಟ್ ನೋಡೋದು ಹೇಗೆ? ಕಂಪ್ಲೀಟ್ ಮಾಹಿತಿ ಇಲ್ಲಿದೆ!
ನಟ ಮಿಥುನ್ ಕುಮಾರ್ ಅವರು ಮದುವೆಗೆ ಮುಂಚೆ ಯುವತಿಗೆ ವಂಚಿಸಿರುವ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದರು. ಆ ವಿಚಾರ ಗೊತ್ತಿದ್ರೂ ನಾನೂ ಮದುವೆಯಾದೆ. ಮದುವೆಯಾದ 2 ತಿಂಗಳ ಕಾಲ ಸಂಸಾರ ಚೆನ್ನಾಗಿತ್ತು. ಆಮೇಲೆ ಬೇರೆ, ಬೇರೆ ವಿಚಾರ ನನಗೆ ಗೊತ್ತಾಯಿತು.
/newsfirstlive-kannada/media/post_attachments/wp-content/uploads/2025/05/lakshmi-nivasa-kannada-serial-actor-4.jpg)
ಆ ಯುವತಿ ಜೊತೆ ಮಿಥುನ್ ಕುಮಾರ್ ಬೆಡ್ ಶೇರಿಂಗ್ ಮಾಡಿದ್ರು. ನಾನೇ ಕಣ್ಣಾರೆ ಅದನ್ನ ನೋಡಿದ್ದೇನೆ. ನಾನು ಪೊಲೀಸರ ಜೊತೆ ಹೋಗಿದ್ದೆ. ಇದನ್ನ ಪ್ರಶ್ನೆ ಮಾಡಿದಕ್ಕೆ ನನ್ನ ಮೇಲೆ ಮನೆಯಲ್ಲಿ ಹಲ್ಲೆ ಮಾಡಿದ್ರು. ನನ್ನ ಸಾಯಿಸೋಕೆ ನೋಡಿದ್ದಾರೆ ಎಂದು ಮಿಥುನ್ ವಿರುದ್ಧ ಆರೋಪಿಸಲಾಗಿದೆ.
ಮಿಥುನ್ ಕುಮಾರ್ ಪ್ರತಿಕ್ರಿಯೆ ಏನು?
ಇಷ್ಟೆಲ್ಲಾ ಆರೋಪ, ದೂರಿನ ಬಳಿಕ ನಟ ಮಿಥುನ್ ಕುಮಾರ್ ಅವರು ಕೂಡ ಸ್ಪಷ್ಟನೆ ನೀಡಿದ್ದಾರೆ. ತನ್ನ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿದ ಮಿಥುನ್ ಕುಮಾರ್, ನನ್ನ ಮೇಲಿನ ಆರೋಪಗಳೆಲ್ಲಾ ಸುಳ್ಳು. ನನ್ನ ಮೇಲೆ ತುಂಬಾ ಅನುಮಾನ ಪಡ್ತಿದ್ರು.
/newsfirstlive-kannada/media/post_attachments/wp-content/uploads/2025/05/lakshmi-nivasa-kannada-serial-actor.jpg)
ಆವತ್ತು ನಾನು ಕೆಲಸ ಮುಗಿಸಿ ಲೇಟ್ ಆಗಿ ಬಂದಿದ್ದೆ. ಯಾಕೆ ಲೇಟ್? ಯಾರ್ ಜೊತೆ ಹೋಗಿದ್ದೆ? ಎಲ್ಲೋಗಿದ್ದೆ ಎಂದು ರೇಗಾಡಿದರು. ನಂತರ ನನ್ನ ಖಾಸಗಿ ಭಾಗಕ್ಕೆ ನೋವು ಮಾಡಿದರು. ನಾನೂ ನೋವು ತಡೆಯಲಾಗದೆ ನನ್ನ ಹೆಂಡತಿಯನ್ನ ದೂಡಿದೆ. ಈ ಟೈಂನಲ್ಲಿ ಅವಳ ಬೆನ್ನಿಗೆ ನೋವಾಯಿತು. ನಾನು ಯಾವುದೇ ಹಲ್ಲೆ ಮಾಡಿಲ್ಲ. ಈ ಹಿಂದಿನ ಜೈಲು, ವಂಚನೆ ವಿಚಾರ ಎಲ್ಲಾ ಸುಳ್ಳು ಎಂದು ಮಿಥುನ್ ಸ್ಪಷ್ಟಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us