/newsfirstlive-kannada/media/post_attachments/wp-content/uploads/2024/12/LALITH-MODI.jpg)
IPL ಸೃಷ್ಟಿಕರ್ತ, ಭಾರತದ ಮಾಜಿ ಉದ್ಯಮಿ ಲಲಿತ್ ಮೋದಿ ತಲೆಮರೆಸಿಕೊಂಡಿದ್ದಾರೆ. ವಿದೇಶದಿಂದ ಭಾರತಕ್ಕೆ ಗಡಿಪಾರಾಗುವ ಭೀತಿಯಲ್ಲಿರುವ ಲಲಿತ್ ಮೋದಿ ಅವರು ಅದರಿಂದ ತಪ್ಪಿಸಿಕೊಳ್ಳಲು ಮೆಗಾ ಪ್ಲಾನ್ ಮಾಡಿದ್ದಾರೆ. ಗಡಿಪಾರಿನಿಂದ ತಪ್ಪಿಸಿಕೊಳ್ಳಲು ಅಡ್ಡದಾರಿ ಹಿಡಿದ ಲಲಿತ್ ಮೋದಿ ಅವರು ಕೋಟಿ, ಕೋಟಿ ಖರ್ಚು ಮಾಡಿ ಮತ್ತೊಂದು ದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ.
ಲಲಿತ್ ಮೋದಿ ವಿರುದ್ಧ ಭಾರತದಲ್ಲಿ ಐಪಿಎಲ್ ಟೂರ್ನಿಯ ವೇಳೆ 468 ಕೋಟಿ ರೂಪಾಯಿ ದುರುಪಯೋಗ ಮಾಡಿಕೊಂಡ ಆರೋಪ ಕೇಳಿ ಬಂದಿದೆ. ಲಲಿತ್ ಮೋದಿ ವಿರುದ್ಧ ಜಾರಿ ನಿರ್ದೇಶನಾಲಯ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: ಪಾಕ್ ಟೀಮ್ ವೇತನಕ್ಕಿಂತ ಹಾರ್ದಿಕ್ ಪಾಂಡ್ಯ ವಾಚ್ ದುಬಾರಿ.. ಬೆಲೆ ಕೇಳಿದ್ರೆ, ಶಾಕ್ ಆಗುತ್ತೆ!
ಇ.ಡಿಯಲ್ಲಿ ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಉದ್ಯಮಿ ಲಲಿತ್ ಮೋದಿ ಅವರು ಭಾರತ ಬಿಟ್ಟು ಲಂಡನ್‌ಗೆ ಪರಾರಿಯಾಗಿದ್ದರು. ಅಲ್ಲಿಂದ ಭಾರತಕ್ಕೆ ಗಡಿಪಾರಾಗುವ ಭೀತಿ ಎದುರಾಗಿದ್ದು, ಲಲಿತ್ ಮೋದಿ ಅವರು ದಿಢೀರನೆ ವನೂಟು ಅನ್ನೋ ದೇಶದ ಪೌರತ್ವ ಪಡೆದಿದ್ದಾರೆ.
ವನೂಟು ದೇಶದ ಪೌರತ್ವ ಯಾಕೆ?
ಆರೋಪಿ ಲಲಿತ್ ಮೋದಿ ಅವರು ಭಾರತದ ಪೌರತ್ವ ಬಿಟ್ಟು ವನೂಟು ದೇಶದ ಪೌರತ್ವ ಪಡೆದಿದ್ದಾರೆ. ಕೋಟಿಗಟ್ಟಲೇ ಹಣ ನೀಡಿ ಪೌರತ್ವ, ಗೋಲ್ಡನ್ ವೀಸಾ ಪಡೆದುಕೊಂಡಿದ್ದಾರೆ.
ವನೂಟು ದೇಶದ ಜೊತೆ ಭಾರತ ಅಪರಾಧಿಗಳ ಗಡಿಪಾರು ಒಪ್ಪಂದ ಮಾಡಿಕೊಂಡಿಲ್ಲ. ಇದರಿಂದಾಗಿ ವನೂಟು ದೇಶದ ಪ್ರಜೆಯನ್ನು ಭಾರತಕ್ಕೆ ಗಡಿಪಾರು ಮಾಡಲು ಆಗಲ್ಲ. ಈ ಹಿನ್ನೆಲೆಯಲ್ಲಿ ಲಲಿತ್ ಮೋದಿ ಅವರು ಕೋಟಿಗಟ್ಟಲೇ ಹಣ ನೀಡಿ ವನೂಟು ದೇಶದ ಪೌರತ್ವ ಪಡೆದಿದ್ದಾರೆ.
ವಿಶ್ವದಲ್ಲಿ ಕೆಲ ದೇಶಗಳು ಕೋಟಿಗಟ್ಟಲೇ ಹಣ ನೀಡಿದವರಿಗೆ ತಮ್ಮ ದೇಶದ ಪೌರತ್ವ ನೀಡುತ್ತವೆ. ಅಂತಹ ಕೆಲವು ದೇಶಗಳ ಪೈಕಿ ವನೂಟು ದೇಶವೂ ಒಂದು. ಲಲಿತ್ ಮೋದಿ ಅವರು ಈಗ ಬೇರೆ ದೇಶದ ಪೌರತ್ವ ಪಡೆದಿರುವುದರಿಂದ ಭಾರತದ ಪೌರತ್ವ, ಪಾಸ್‌ಪೋರ್ಟ್ ರದ್ದಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ