newsfirstkannada.com

‘ತಾಯಿ ನಿಧನರಾದಾಗ ಕೇಶ ಮುಂಡನ ಮಾಡಿಸಿಲ್ಲ’ -ಪ್ರಧಾನಿ ಮೋದಿ ವಿರುದ್ಧ ಲಾಲು ಪ್ರಸಾದ್ ವಿವಾದಾತ್ಮಕ ಹೇಳಿಕೆ

Share :

Published March 4, 2024 at 7:11am

    ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದ ಲಾಲು ಪ್ರಸಾದ್

    ಮೋದಿ ನಿಜವಾದ ಹಿಂದೂ ಆಗಿದ್ರೆ ಕೇಶ ಮುಂಡನ ಮಾಡಿಸಬೇಕಿತ್ತು

    ಮೋದಿಯನ್ನ ಟೀಕಿಸೋ ಭರದಲ್ಲಿ ಗಂಭೀರ ಆರೋಪ ಮಾಡಿದ ಲಾಲು

ಬಿಹಾರದ ಮಾಜಿ ಸಿಎಂ, ಆರ್​ಜೆಡಿ ಪಕ್ಷದ ನಾಯಕ ಲಾಲು ಪ್ರಸಾದ್​​​ ಯಾದವ್ ಮತ್ತೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಪ್ರಧಾನಿ ಮೋದಿಯನ್ನು ಟೀಕಿಸೋ ಬರದಲ್ಲಿ ಗಂಭೀರ ಆರೋಪವನ್ನು ಮಾಡಿದ್ದು, ಲಾಲೂ ಪ್ರಸಾದ್​​​ ಹೇಳಿಕೆಗೆ ಭಾರೀ ಆಕ್ರೋಷ ವ್ಯಕ್ತವಾಗಿದೆ..

ಬಿಹಾರದ ಮಾಜಿ ಸಿಎಂ, RJD ಮುಖ್ಯಸ್ಥ ಲಾಲೂ ಪ್ರಸಾದ್​​ ಯಾದವ್​​​​ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಲ್ಲಿರುವ ಇವರು ಈಗ ಮತ್ತೊಂದು ವಿವಾದ ತಲೆ ಮೇಲೆ ಎಳೆದುಕೊಂಡಿದ್ದಾರೆ. ಪ್ರಧಾನಿ ಮೋದಿಯನ್ನು ಟೀಕಿಸುವ ಬರದಲ್ಲಿ ತಾಯಿ ಹೀರಾಬೆನ್ ನಿಧನವನ್ನು ರಾಜಕೀಯಕ್ಕೆ ಎಳೆತಂದು ವಿವಾದ ಎಬ್ಬಿಸಿದ್ದಾರೆ.

ಪ್ರಧಾನಿ ಬಗ್ಗೆ ಲಾಲು ಪ್ರಸಾದ್ ಯಾದವ್ ವಿವಾದ

ಇಂಡಿಯಾ ಮೈತ್ರಿಕೂಟ ಪಾಟ್ನಾದ ಗಾಂಧಿ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಲಾಲು ಪ್ರಸಾದ್ ಯಾದವ್, ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಮೋದಿ ಹಿಂದೂ ಆಗಿದ್ದರೆ, ಅವರ ತಾಯಿ ನಿಧನರಾದಾಗ ಕೇಶ ಮುಂಡನ ಮಾಡಿಸಿಲ್ಲ ಯಾಕೆ ಅಂತ ಲಾಲು ಪ್ರಸಾದ್ ಯಾದವ್ ಪ್ರಶ್ನಿಸಿದ್ದಾರೆ.

ಮೋದಿ ನಿಜವಾದ ಹಿಂದೂ ಅಲ್ಲ, ತಾಯಿ ನಿಧನರಾದಾಗ ಪ್ರತಿ ಹಿಂದೂ ತಲೆ ಬೋಳಿಸುತ್ತಾರೆ. ದಾಡಿ ತೆಗೆಸುತ್ತಾರೆ. ಆದ್ರೆ ಪ್ರಧಾನಿ ಮೋದಿ ಇದನ್ನು ಯಾಕೆ ಮಾಡಿಸಿಲ್ಲಾ?.

ಲಾಲು ಪ್ರಸಾದ್​ ಯಾದವ್​​, ಬಿಹಾರ ಮಾಜಿ ಮುಖ್ಯಮಂತ್ರಿ

ಇನ್ನು ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೋದಿ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಲಾಲು ಪ್ರಸಾದ್​​ ಹೇಳಿಕೆಗೆ ಆಕ್ರೋಷ ವ್ಯಕ್ತಪಡಿಸಿ ಕ್ಷಮೆ ಕೇಳಬೇಕಂದು ಆಗ್ರಹಿಸಿದ್ದಾರೆ.

ಬಿಹಾರದಲ್ಲಿ ಮೈತ್ರಿ ಪಕ್ಷಗಳ ಶಕ್ತಿ ಪ್ರದರ್ಶನ

ಇನ್ನು ಪಾಟ್ನಾದಲ್ಲಿ ನಡೆದ ಜನ ವಿಶ್ವಾಸ್​​ ಯಾತ್ರೆಯಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷದ ನಾಯಕರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಕಾಂಗ್ರೆಸ್​​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ರಾಹುಲ್​​ ಗಾಂಧಿ, ಅಖಿಲೇಶ್​​ ಯಾದವ್​​ ಸೇರಿದಂತೆ ಹಲವು ನಾಯಕರು ಒಂದೇ ವೇದಿಕೆಯನ್ನು ಹಂಚಿಕೊಂಡು ಬಿಜೆಪಿಯನ್ನು ಸೋಲಿಸುವುದಾಗಿ ಶಪಥ ಮಾಡಿದ್ದಾರೆ.

ಹಿರಿಯ ರಾಜಕೀಯ ಮುತ್ಸದಿ ಅಂತಲೇ ಕರೆಸಿಕೊಳ್ಳುವ ಲಾಲು ಪ್ರಸಾದ್​ ಯಾದವ್​​ ಟೀಕಿಸೋ ಬರದಲ್ಲಿ ಪ್ರಧಾನಿ ಮೋದಿ ಅವರನ್ನು ಹಿಂದೂ ಅಲ್ಲ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದಾರೆ. ಲೋಕಸಮರದ ಹೊತ್ತಲ್ಲಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ತಾಯಿ ನಿಧನರಾದಾಗ ಕೇಶ ಮುಂಡನ ಮಾಡಿಸಿಲ್ಲ’ -ಪ್ರಧಾನಿ ಮೋದಿ ವಿರುದ್ಧ ಲಾಲು ಪ್ರಸಾದ್ ವಿವಾದಾತ್ಮಕ ಹೇಳಿಕೆ

https://newsfirstlive.com/wp-content/uploads/2024/03/Lalu_PRASADA_MODI.jpg

Load More