/newsfirstlive-kannada/media/post_attachments/wp-content/uploads/2025/05/tejpratapyadav-1.jpg)
ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ, ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಕುಟುಂಬದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ದಿಢೀರ್ ಬೆಳವಣಿಗೆಯಲ್ಲಿ ಲಾಲು ಪ್ರಸಾದ್ ಯಾದವ್ ಅವರು RJD ಪಕ್ಷದಿಂದ ತಮ್ಮ ಹಿರಿಯ ಮಗನನ್ನು ಉಚ್ಛಾಟನೆ ಮಾಡಿದ್ದಾರೆ.
ಮುಂದಿನ ನವೆಂಬರ್‌ನಲ್ಲಿ ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಎಲೆಕ್ಷನ್‌ಗೂ ಮುನ್ನ ಚುನಾವಣೆಗೆ ಸಿದ್ಧತೆ ನಡೆಸಿರುವ ಲಾಲು ಪ್ರಸಾದ್ ಯಾದವ್ ಪಕ್ಷ ರಾಷ್ಟ್ರೀಯ ಅಧ್ಯಕ್ಷರ ಮಗನಿಗೆ ಪಕ್ಷದಿಂದ ಗೇಟ್‌ಪಾಸ್ ಕೊಟ್ಟು ತಮ್ಮ ಕಾರ್ಯಕರ್ತರಿಗೆ ಹೊಸ ಸಂದೇಶ ನೀಡಿದೆ.
/newsfirstlive-kannada/media/post_attachments/wp-content/uploads/2025/05/Lalu-Prasad-Yadav-Son.jpg)
ಮಗನ ಉಚ್ಛಾಟನೆಗೆ ಕಾರಣವೇನು?
ಲಾಲು ಪ್ರಸಾದ್ ಯಾದವ್ ಅವರು ತಡವಾಗಿಯಾದ್ರು ಈ ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ಹಿರಿಯ ಮಗನ ಅಸಭ್ಯ ವರ್ತನೆಗೆ ರೋಸಿ ಹೋಗಿ ಪಕ್ಷದಿಂದ 6 ವರ್ಷಗಳ ಉಚ್ಛಾಟನೆ ಮಾಡಿದ್ದಾರೆ. ಅಷ್ಟೇ ಅಲ್ಲ ತೇಜ್ ಪ್ರತಾಪ್ ಯಾದವ್ ಅವರನ್ನು ಕೇವಲ ಪಕ್ಷದಿಂದ ಮಾತ್ರವಲ್ಲ ತಮ್ಮ ಮನೆಯಿಂದಲೇ ಹೊರಗೆ ಹಾಕಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ತನ್ನ ಅಭಿಮಾನಿ ಕುಟುಂಬಕ್ಕೆ ಹಣ ನೀಡಿದ ಸಚಿವ ಜಮೀರ್ ಅಹ್ಮದ್.. ಎಷ್ಟು ಲಕ್ಷ?
ಇತ್ತೀಚೆಗೆ ಲಾಲು ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ಅವರ ಫೇಸ್‌ಬುಕ್‌ನಲ್ಲಿ ಪಾರ್ಟನರ್ ಅನ್ನೋ ಶೀರ್ಷಿಕೆಯಲ್ಲಿ ಕೆಲವೊಂದು ಫೋಟೋಗಳನ್ನು ಹಂಚಿಕೊಳ್ಳಲಾಗಿತ್ತು. ತೇಜ್ ಪ್ರತಾಪ್ ಯಾದವ್ ಅವರು ಮದುವೆಯಾಗಿದ್ರು ಬೇರೆ ಯುವತಿ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದು ಸಾಕಷ್ಟು ವೈರಲ್ ಆಗಿತ್ತು.
/newsfirstlive-kannada/media/post_attachments/wp-content/uploads/2025/05/Tej-pratap-Yadav.jpg)
ತಮ್ಮ ಹಿರಿಯ ಮಗನ ಈ ಅಸಭ್ಯ ವರ್ತನೆ ಲಾಲು ಪ್ರಸಾದ್ ಯಾದವ್ ಹಾಗೂ ಆರ್‌ಜೆಡಿ ಪಕ್ಷದ ನಾಯಕರಿಗೆ ಮುಜುಗರವನ್ನು ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಲಾಲು ಪ್ರಸಾದ್ ಯಾದವ್ ಅವರು ಚುನಾವಣೆಯ ದೃಷ್ಟಿಕೋನದಲ್ಲಿ ಮಗನನ್ನೇ ಪಕ್ಷದಿಂದ ಉಚ್ಛಾಟಿಸಿ, ಮಗನಿಗಿಂತ ಪಕ್ಷದಲ್ಲಿ ಶಿಸ್ತು ಮುಖ್ಯ ಅನ್ನೋ ಸಂದೇಶ ಸಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us