ಹೊತ್ತಿ ಉರಿದ ಲ್ಯಾಂಬೋರ್ಗಿನಿ ಕಾರು.. ಐಷಾರಾಮಿ ಕಾರಿನ ಕಥೆಯೇ ಹೀಗಾದ್ರೆ ಹೆಂಗೆ ಗುರು? VIDEO

author-image
admin
Updated On
ಹೊತ್ತಿ ಉರಿದ ಲ್ಯಾಂಬೋರ್ಗಿನಿ ಕಾರು.. ಐಷಾರಾಮಿ ಕಾರಿನ ಕಥೆಯೇ ಹೀಗಾದ್ರೆ ಹೆಂಗೆ ಗುರು? VIDEO
Advertisment
  • ಬೆಲೆ, ಪ್ರತಿಷ್ಠೆಯ ಕಾರಣದಿಂದ ಲ್ಯಾಂಬೋರ್ಗಿನಿ ಕಾರು ಖರೀದಿಸುತ್ತಾರೆ
  • ಜನರು ಸುರಕ್ಷತೆಯನ್ನು ನಿರೀಕ್ಷಿಸುತ್ತಾರೆಯೇ ಹೊರೆತು ತೊಂದರೆಯನ್ನಲ್ಲ
  • ಲ್ಯಾಂಬೋರ್ಗಿನಿ ಕಾರು ಇತರೆ ಕಾರುಗಳಂತೆ ಅವಘಡಕ್ಕೆ ತುತ್ತಾಗುತ್ತಾ?

ಜಗತ್ತಿನ ಐಷಾರಾಮಿ ಕಾರು ಅಂದ್ರೆ ಮೊದಲ ಹೆಸರು ಕೇಳಿ ಬರೋದೇ ಲ್ಯಾಂಬೋರ್ಗಿನಿ,  ಲ್ಯಾಂಬೋರ್ಗಿನಿ ಇದ್ದವನೇ ಕೋಟ್ಯಾಧಿಪತಿ. ಸ್ಯಾಂಡಲ್‌ವುಡ್ ಸ್ಟಾರ್‌ಗಳು ತಮ್ಮ ಮನೆಯಲ್ಲಿ ಲ್ಯಾಂಬೋರ್ಗಿನಿ ಕಾರುಗಳನ್ನ ಇಟ್ಟುಕೊಂಡಿದ್ದಾರೆ. ಇಂತಹ ಲ್ಯಾಂಬೋರ್ಗಿನಿ ಕಾರಿಗೆ ಸಾಕಷ್ಟು ಸೇಫ್ಟಿ ಇದೆ ಅನ್ನೋ ಮಾತಿತ್ತು. ಆದರೀಗ ಲ್ಯಾಂಬೋರ್ಗಿನಿ ಕಾರು ಇತರೆ ಕಾರುಗಳಂತೆ ಅವಘಡಕ್ಕೆ ತುತ್ತಾಗಿದೆ.

ಸದ್ಯ ಮುಂಬೈನ ಬ್ರಿಚ್ ಕ್ಯಾಂಡಿ ರಸ್ತೆಯಲ್ಲಿ ನಡೆದಿರೋ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಲ್ಯಾಂಬೋರ್ಗೀನಿ ಕಾರಿಗೆ ಬೆಂಕಿ ಆಕಸ್ಮಿಕ ಆಗಿರೋದು ಒಂದು ಕಡೆಯಾದ್ರೆ ಕೋಟಿಗಟ್ಟಲೇ ಬೆಲೆಬಾಳುವ ಕಾರಿನಲ್ಲೂ ಸುರಕ್ಷತೆ ಅನ್ನೋದು ಇಲ್ವಾ ಅನ್ನೋ ಪ್ರಶ್ನೆ ಎತ್ತಿದೆ.

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ.. ಹೊಸ ವರ್ಷಕ್ಕೆ ಇನ್ನಷ್ಟು ಹೆಚ್ಚಳವಾಗುತ್ತಾ ಸಿಲ್ವರ್, ಹಳದಿ ಲೋಹ​? 

ಡಿಸೆಂಬರ್ 25ರ ರಾತ್ರಿ 10.20ಕ್ಕೆ ಮುಂಬೈನ ಬೀಚ್‌ ರೋಡ್‌ನ ನಡುರಸ್ತೆಯಲ್ಲಿ ಈ ಘಟನೆ ನಡೆದಿದೆ. ಲ್ಯಾಂಬೋರ್ಗಿನಿ ಕಾರು ಚಲಾಯಿಸುತ್ತಿದ್ದ ಚಾಲಕನಿಗೆ ಹೊಗೆ ಕಾಣಿಸಿಕೊಂಡಿದೆ. ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ 45 ನಿಮಿಷದ ಬಳಿಕ ಸ್ಥಳಕ್ಕೆ ಬಂದು ಬೆಂಕಿಯನ್ನು ಆರಿಸಲಾಗಿದೆ. ಕಾರಿನಲ್ಲಿದ್ದವರು ಕೂಡಲೇ ದೂರ ಬಂದಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.


">December 25, 2024

ಲಾಂಬೋರ್ಗಿನಿ ಕಾರಿನ ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ರೇಮಂಡ್ ಕಂಪನಿಯ ಮಾಲೀಕ ಗೌತಮ್ ಸಿಂಘಾನಿಯಾ ಅವರು ಈ ಬಗ್ಗೆ ವಿಡಿಯೋ ಸಹಿತ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ. ಬೆಲೆ, ಪ್ರತಿಷ್ಠೆಯ ಕಾರಣದಿಂದ ಜನರು ಸುರಕ್ಷತೆಯನ್ನು ನಿರೀಕ್ಷಿಸುತ್ತಾರೆಯೇ ಹೊರೆತು ತೊಂದರೆಯನ್ನಲ್ಲ. ಲಾಂಬೋರ್ಗೀನಿ ಕಾರಿನ ಸುರಕ್ಷತೆಯ ಬಗ್ಗೆ ಈಗ ಪ್ರಶ್ನೆಗಳು ಉದ್ಭವಿಸಿವೆ ಎಂದು ಗೌತಮ್ ಸಿಂಘಾನಿಯಾ ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment