/newsfirstlive-kannada/media/post_attachments/wp-content/uploads/2025/03/HD-KUMARASWAMY-4.jpg)
ಕುಮಾರಸ್ವಾಮಿ ಹಾಗೂ ಕುಟುಂಬಸ್ಥರ ವಿರುದ್ಧ ಭೂ ಒತ್ತುವರಿ ಕೇಸ್ ಬಗ್ಗೆ ಹೈಕೋರ್ಟ್ ತರಾಟೆ ತೆಗೆದುಕೊಳ್ತಿದ್ದಂತೆ ಅಧಿಕಾರಿಗಳ ಕಾರ್ಯಾಚರಣೆ ಜೋರಾಗಿದೆ. ಬಿಡದಿಯ ಕೇತಗಾನಹಳ್ಳಿಯ ಸರ್ವೇ ನಂ.7,8,9,10,16,17 ಹಾಗೂ 79ರಲ್ಲಿ ಸರ್ಕಾರಿ ಜಾಗದ ಒತ್ತುವರಿ ಆಗಿರುವ ಆರೋಪ ಕೇಳಿಬಂದಿತ್ತು. ಈ ಹಿಂದೆ ಮಾರ್ಕಿಂಗ್ ಮಾಡಿದ್ದ ಕಂದಾಯ ಇಲಾಖೆ ಅಧಿಕಾರಿಗಳು ನಿನ್ನೆ ಕೂಡಾ ಹೆಚ್ಡಿಕೆ ತೋಟದ ಮನೆ ಹೊರತು ಪಡಿಸಿ ಇನ್ನುಳಿದ ಒತ್ತುವರಿ ಜಾಗಗಳಲ್ಲಿ ಮಾರ್ಕಿಂಗ್ ಕಾರ್ಯ ಮಾಡಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿಗೆ ಒತ್ತುವರಿ ಬಿಗ್ ಶಾಕ್.. ಬಿಡದಿ ತೋಟದ ಮನೆಗೆ ನುಗ್ಗಿದ JCB; ತೆರವು ಕಾರ್ಯ ಹೇಗಿದೆ?
ಹೆಚ್‌ಡಿಕೆಗೆ ನೋಟಿಸ್.. 7 ದಿನಗಳ ಡೆಡ್‌ಲೈನ್!
ಕೇತಗಾನಹಳ್ಳಿ ಬಳಿ ಒತ್ತುವರಿಯಾದ ಸರ್ಕಾರಿ ಜಾಗದಲ್ಲಿ ಗೋಮಾಳ, ಸ್ಮಶಾನ, ನೀರಿನ ಮೂಲಗಳು ಸೇರಿ ಇತರ ಜಾಗಗಳಲ್ಲಿ ಸರ್ವೇ ನಡೆಸಿದ ಕಂದಾಯ ಇಲಾಖೆ ಅಧಿಕಾರಿಗಳು ರೆಡ್ ಫ್ಲಾಗ್ ಅಳವಡಿಕೆ ಮಾಡಿದ್ದಾರೆ. ಮಾರ್ಕಿಂಗ್ ಕಾರ್ಯ ಮುಗಿದ ಬಳಿಕ ಕುಮಾರಸ್ವಾಮಿ ಸೇರಿ ಇತರ ಒತ್ತುವರಿದಾರರಿಗೆ ಜಿಲ್ಲಾಡಳಿತ ನೋಟೀಸ್ ಜಾರಿ ಮಾಡಿದೆ.
ಇದನ್ನೂ ಓದಿ:ಮನೆಯಿಂದ ಹೊರಬರೋ ಮುನ್ನ ಹುಷಾರ್.. ಬಿಸಿಲಿನಿಂದ ಆರೋಗ್ಯದ ಮೇಲೆ ಆಗೋ ಪರಿಣಾಮವೇನು?
ಕೇತಗಾನಹಳ್ಳಿ ಬಳಿ ಒಟ್ಟು 14 ಎಕರೆಗೂ ಅಧಿಕ ಸರ್ಕಾರಿ ಭೂಮಿ ಒತ್ತುವರಿ ಆಗಿದೆ ಎಂಬ ಆರೋಪ ಇದೆ. ಸದರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏನಾದರೂ ದಾಖಲೆಗಳು ಅಥವಾ ತಕರಾರು ಇದ್ದರೇ ಅಕ್ಷೇಪಣೆ ಸಲ್ಲಿಸುವಂತೆ ಜಿಲ್ಲಾಡಳಿತ ನೋಟೀಸ್ ಜಾರಿ ಮಾಡಿದೆ. ಒತ್ತುವರಿ ಜಾಗ ಬಿಟ್ಟುಕೊಡಲು ಒತ್ತುವರಿ ಮಾಡಿಕೊಂಡಿರುವವರಿಗೆ ಏಳು ದಿನಗಳ ಅವಕಾಶ ಕೊಟ್ಟಿರೋ ಜಿಲ್ಲಾಡಳಿತ, 7 ದಿನದ ಒಳಗೆ ಜಾಗ ಬಿಟ್ಟುಕೊಟ್ಟು ನೋಟಿಸ್‌ಗೆ ಉತ್ತರ ನೀಡದಿದ್ದರೆ, ಕಾಂಪೌಂಡ್‌ಗಳ ಡೆಮಾಲಿಷನ್ ಮಾಡಿ ಸರ್ಕಾರಿ ಜಮೀನನ್ನ ವಶಕ್ಕೆ ಪಡೆಯಲು ನಿರ್ಧರಿಸಿದೆ.
ಒಟ್ಟಾರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಹೆಚ್.ಡಿ. ಕುಮಾರಸ್ವಾಮಿ ಸೇರಿ ಒತ್ತುವರಿದಾರರಿಗೆ ಜಿಲ್ಲಾಡಳಿತ ಡೆಡ್‌ಲೈನ್ ನೀಡಿದೆ. ಅಷ್ಟರಲ್ಲಿ ನೋಟಿಸ್‌ಗೆ ಉತ್ತರ ನೀಡದಿದ್ದಲ್ಲಿ ಒತ್ತುವರಿ ಜಾಗದಲ್ಲಿ ಜೆಸಿಬಿ ಯಂತ್ರಗಳು ಘರ್ಜಿಸೋದು ನಿಶ್ಚಿತ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಒಂದು ಮನವಿ, 2 ರಿಪೋರ್ಟ್ ಸಲ್ಲಿಕೆ.. ಕುತೂಹಲ ಮೂಡಿಸಿದ ಡಿಕೆಶಿ ದಿಢೀರ್ ಭೇಟಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ