ಬೆಳ್ಳಂಬೆಳಗ್ಗೆ ಪ್ರಸಿದ್ಧ ರಾಮತೀರ್ಥ ದೇಗುಲದ ಬಳಿ ಭೀಕರ ಗುಡ್ಡ ಕುಸಿತ.. ಹೆಚ್ಚಿದ ಆತಂಕ

author-image
Ganesh
Updated On
ಬೆಳ್ಳಂಬೆಳಗ್ಗೆ ಪ್ರಸಿದ್ಧ ರಾಮತೀರ್ಥ ದೇಗುಲದ ಬಳಿ ಭೀಕರ ಗುಡ್ಡ ಕುಸಿತ.. ಹೆಚ್ಚಿದ ಆತಂಕ
Advertisment
  • ಇಂದು ಬೆಳ್ಳಂಬೆಳಗ್ಗೆ ರಾಮತೀರ್ಥದಲ್ಲಿ ಗುಡ್ಡ ಕುಸಿತ
  • ನಿನ್ನೆ ಶಿರೂರಲ್ಲಿ ಗುಡ್ಡ ಕುಸಿದು ಸಾವು ನೋವು ಸಂಭವಿಸಿದೆ
  • ಗುಡ್ಡ ಕುಸಿತದಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ಯ ಮಳೆಯ ಅಬ್ಬರ ಕೊಂಚ ತಗ್ಗಿದೆ. ಆದರೆ ಮಳೆಯ ಅಬ್ಬರ ತಗ್ಗಿದ್ದರೂ ಗುಡ್ಡ ಕುಸಿತ ಮಾತ್ರ ಇನ್ನೂ ನಿಂತಿಲ್ಲ. ಗುಡ್ಡ ಕುಸಿತದಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿದ್ದು, ಬೆಳ್ಳಂಬೆಳಗ್ಗೆ ಗೋಕರ್ಣದಲ್ಲಿ ಗುಡ್ಡ ಕುಸಿತ ಸಂಭವಿಸಿದೆ.

ಗೋಕರ್ಣ ಬಳಿಯ ರಾಮತೀರ್ಥ ದೇವಸ್ಥಾನದ ಹಿಂಬಾಗದ ಬಳಿ ಗುಡ್ಡ ಕುಸಿತ ಸಂಭವಿಸಿದೆ. ಬೆಳಗಿನ ಜಾವ ಗುಡ್ಡ ಕುಸಿದಿದ್ದರಿಂದ ಭಾರೀ ಅನಾಹುತ ಒಂದು ತಪ್ಪಿದೆ. ಅದೃಷ್ಟವಶಾತ್ ದೇವಸ್ಥಾನದಲ್ಲಿ ಯಾರೂ ಇಲ್ಲದ ಹಿನ್ನೆಲೆ ಅನಾಹುತ ತಪ್ಪಿದೆ. ನಿನ್ನೆ ಗುಡ್ಡ ಕುಸಿತದಿಂದ 7ಕ್ಕೂ ಹೆಚ್ಚು ಜನರ ಸಾವನ್ನಪ್ಪಿದ್ದಾರೆ. ಇಂತಹ ಸಂದರ್ಭದಲ್ಲಿ ಗುಡ್ಡ ಕುಸಿತ ಮುಂದುವರೆದ ಹಿನ್ನೆಲೆ ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ:ಇನ್ನೂ ಎಷ್ಟು ದಿನ ಭಯಂಕರ ಮಳೆ ಸುರಿಯಲಿದೆ? ಕರಾವಳಿ ಜನರ ಆತಂಕ ಹೆಚ್ಚಿಸಿದ ಹವಾಮಾನ ವರದಿ

publive-image

ನಿನ್ನೆ ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಹೆದ್ದಾರಿಯಲ್ಲಿ ಗುಡ್ಡು ಕುಸಿತ ಸಂಭವಿಸಿತ್ತು. ಪರಿಣಾಮ ಹೆದ್ದಾರಿ ಪಕ್ಕದಲ್ಲಿ ಅಂಗಡಿ ನಿರ್ಮಿಸಿಕೊಂಡಿದ್ದ ಒಂದು ಕುಟುಂಬದ 6 ಸದಸ್ಯರು ಸೇರಿ ಹಲವರು ಮಣ್ಣಿನಡಿ ಸಿಲುಕಿದ್ದರು. ಇಲ್ಲಿಯವರೆಗೆ 7 ಮಂದಿ ಸಾವನ್ನಪ್ಪಿರುವ ಬಗ್ಗೆ ಅಧಿಕೃತ ಮಾಹಿತಿ ಇದೆ. ಸಾವು ನೋವಿನ ಸಂಖ್ಯೆ 12ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ:ಶಿರೂರು ಗುಡ್ಡ ಕುಸಿತದಲ್ಲಿ ತುಂಬಾ ಸಾವು, ನೋವು.. ಮೃತರ ಸಂಖ್ಯೆ 12ಕ್ಕೆ ಏರಿಕೆ ಸಾಧ್ಯತೆ.. ಆಗಿದ್ದೇನು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment