Advertisment

ಮತ್ತೊಂದು ಗುಡ್ಡ ಕುಸಿತ.. ತಾಯಿ, ಮಗಳು ಮಣ್ಣಿನಡಿ ಸಿಲುಕಿ ಸಾವು

author-image
Ganesh
Updated On
ಮತ್ತೊಂದು ಗುಡ್ಡ ಕುಸಿತ.. ತಾಯಿ, ಮಗಳು ಮಣ್ಣಿನಡಿ ಸಿಲುಕಿ ಸಾವು
Advertisment
  • ಭಾರೀ ಮಳೆಯಿಂದಾಗಿ ತೆಹ್ರಿಯಲ್ಲಿ ಭೂಕುಸಿತ ಸಂಭವಿಸಿದೆ
  • ಅಂಗಡಿ, ಮನೆ, ರಸ್ತೆ ಸೇರಿ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ
  • ಎಲ್ಲರೂ ಎಚ್ಚರಿಕೆಯಿಂದ ಇರುವಂತೆ ಸರ್ಕಾರದಿಂದ ಸೂಚನೆ

ಭಾರೀ ಮಳೆಯಿಂದ ಆಗುತ್ತಿರುವ ದುರಂತಗಳು ಒಂದಲ್ಲ, ಎರಡಲ್ಲ. ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ನಡೆದ ಗುಡ್ಡ ಕುಸಿತದಿಂದ ಆಗಿರುವ ಅನಾಹುತ ಕಣ್ಮುಂದೆಯೇ ಇದೆ. ಇದೀಗ ಅದೇ ಮಾದರಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ.

Advertisment

ಉತ್ತರಾಖಂಡ್​​ನ ತೆಹ್ರಿ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಭಾರೀ ಭೂಕುಸಿತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಹಲವು ಮನೆಗಳು, ಅಂಗಡಿಗಳು ಮಣ್ಣಿನಡಿ ಸಿಲುಕಿವೆ. ಮಾತ್ರವಲ್ಲ, 42 ವರ್ಷದ ಮಹಿಳೆ ಹಾಗೂ ಆಕೆಯ ಮಗಳು ಮಣ್ಣಿನಡಿ ಸಮಾಧಿ ಆಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ರೀಚಾರ್ಜ್ ಬೆಲೆ ಏರಿಸಿದ್ದ ಕಂಪನಿಗಳಿಗೆ TRAI ಗುನ್ನಾ.. ಮತ್ತೆ ಕಡಿಮೆ ಬೆಲೆಗೆ ಹೊಸ ಪ್ಲಾನ್..!

42 ವರ್ಷದ ಸರಿತಾ ದೇವಿ, 15 ವರ್ಷದ ಅಂಕಿತಾ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಟೊಲಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿದೆ. ಮನೆಯ ಗೋಡೆ ಇವರ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಮಯೂರ್ ದಿಕ್ಷಿತ್ ಹೇಳಿದ್ದಾರೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, ಅಧಿಕಾರಿಗಳಿಗೆ ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದವರನ್ನು ಕೂಡಲೇ ರಕ್ಷಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisment

ಇದನ್ನೂ ಓದಿ:12 ದಿನ ಕಳೆದರೂ ಪತ್ತೆ ಆಗಲೇ ಇಲ್ಲ.. ಪ್ರಯತ್ನ ಕೈಬಿಡುವ ಮಾತಾಡಿದ ಅಧಿಕಾರಿಗಳು..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment