/newsfirstlive-kannada/media/post_attachments/wp-content/uploads/2025/06/Kedarnath.jpg)
ಚಂಡೀಗಢ: ಬಂಡೆಗಳು ಉರುಳಿ ಬಿದ್ದು, ಇಬ್ಬರು ಜೀವ ಕಳೆದುಕೊಂಡಿದ್ದು, ಮೂವರು ಯಾತ್ರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಯಾತ್ರಾ ಮಾರ್ಗದ ಜಂಗಲ್‌ಚಟ್ಟಿ ಘಾಟ್ ಬಳಿ ಈ ಘಟನೆ ನಡೆದಿದೆ.
ಜಂಗಲ್‌ಚಟ್ಟಿ ಘಾಟ್ ಬಳಿ ಬೆಳಗ್ಗೆ 11:30ರ ಸುಮಾರಿಗೆ ಗುಡ್ಡ ಕುಸಿತ ಸಂಭವಿಸಿದೆ. ಈ ವೇಳೆ ಮೇಲಿನಿಂದ ಕಲ್ಲು ಬಂಡೆಗಳು ಉರುಳಿ ಇಬ್ಬರು ಯಾತ್ರಿಕರ ಮೇಲೆ ಬಿದ್ದಿವೆ. ಇದರಿಂದ ಸ್ಥಳದಲ್ಲೇ ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಇನ್ನು ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಡಿಡಿಆರ್‌ಎಫ್ ತಂಡಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬೈಕ್ ಸವಾರನ ಮೇಲೆ ಮರಬಿದ್ದು ಮೆದುಳು ನಿಷ್ಕ್ರಿಯ.. ಆಸ್ಪತ್ರೆಯ ಬಿಲ್ ಪಾವತಿ ಮಾಡಿದ BBMP
ಗುಡ್ಡದ ಮೇಲಿನಿಂದ ಉರುಳಿ ಬಿದ್ದ ಬಂಡೆಗಳ ರಭಸಕ್ಕೆ ಇಬ್ಬರು ಕಂದಕಕ್ಕೆ ಬಿದ್ದಿದ್ದರು. ಡಿಡಿಆರ್‌ಎಫ್ ತಂಡದಿಂದ ಕೆಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಯಿತು. ನಂತರ ಹಗ್ಗಗಳ ಸಹಾಯದಿಂದ ಮೃತರನ್ನು ಕಮರಿಯಿಂದ ಡಿಡಿಆರ್​​ಎಫ್​ ಸಿಬ್ಬಂದಿ ಹೊರತೆಗೆದಿದ್ದಾರೆ. ಯಾತ್ರೆ ಕೈಗೊಳ್ಳುವ ಮಾರ್ಗದಲ್ಲಿ ಯಾತ್ರಿಕರು ಎಚ್ಚರಿಕೆಯಿಂದ ಇರುವಂತೆ ಮಾರ್ಗ ಸೂಚನೆ ನೀಡಲಾಗಿದೆ. ಆದರೂ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.
ಗಾಯಾಳುಗಳನ್ನು ಗೌರಿಕುಂಡದ ಆಸ್ಪತ್ರೆ ಒಂದಕ್ಕೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರುದ್ರಪ್ರಯಾಗ ಹಾಗೂ ಕೇದಾರನಾಥ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಕೆಲ ದಿನಗಳಿಂದ ಭಾರೀ ಮಟ್ಟದಲ್ಲಿ ಮಳೆ ಸುರಿಯುತ್ತಿದೆ. ಇದರಿಂದ ಗುಡ್ಡಗಳ ಮೇಲಿನಿಂದ ಬೀಳುವ ನೀರಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಗುಡ್ಡ ಕುಸಿತ ಸಂಭವಿಸಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ