/newsfirstlive-kannada/media/post_attachments/wp-content/uploads/2025/05/Saifullah-Khalid.jpg)
2006ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಕೇಂದ್ರ ಕಚೇರಿ ಮೇಲಿನ ದಾಳಿಯ ಸಂಚುಕೋರ, ಲಷ್ಕರ್ ಸಂಘಟನೆಯ ಪ್ರಮುಖ ಭಯೋತ್ಪಾದಕ ಸೈಫುಲ್ಲಾ ಖಾಲಿದ್ ಪಾಕಿಸ್ತಾನದಲ್ಲಿ ಹತ್ಯೆ ಆಗಿದ್ದಾನೆ. ಮಾಹಿತಿಯ ಪ್ರಕಾರ, ಅಪರಿಚಿತರು ಗುಂಡಿಕ್ಕಿ ಪರಾರಿ ಆಗಿದ್ದಾರೆ ಎನ್ನಲಾಗಿದೆ.
ಸೈಫುಲ್ಲಾ ನೇಪಾಳದಲ್ಲಿದ್ದುಕೊಂಡು ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ಮಾಡ್ತಿದ್ದ. ಆತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆಗೂ ಸಂಬಂಧ ಹೊಂದಿದ್ದ. ಭಾರತೀಯ ಭದ್ರತಾ ಸಂಸ್ಥೆಗಳ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಈತ ಸೇರಿದ್ದ.
ಇದನ್ನೂ ಓದಿ: ಯೂಟ್ಯೂಬರ್ ಆಗುವ ಮೊದಲು ಜ್ಯೋತಿ ಮಲ್ಹೋತ್ರ ಹೇಗಿದ್ದಳು..? ಈಕೆ ಭಲೇ ಕಿಡಿಗೇಡಿ ಲೇಡಿ..!
ಭಾರತದ ಮೇಲಿನ 3 ದಾಳಿಯ ಸಂಚುಕೋರ
2006 ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದು ಇವನೇ. 2001ರಲ್ಲಿ ರಾಂಪುರದಲ್ಲಿರುವ ಸಿಆರ್‌ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿದ್ದ. 2005ರಲ್ಲಿ ಬೆಂಗಳೂರಿನಲ್ಲೂ ಒಂದು ದಾಳಿ ಆಗಿತ್ತು. ಅದರ ಹಿಂದಿನ ಮಾಸ್ಟರ್ ಮೈಂಡ್ ಇವನೇ ಅನ್ನೋದು ಸಾಬೀತಾಗಿತ್ತು.
2005ರ ಡಿಸೆಂಬರ್ 28, ಬುಧವಾರದಂದು IISC ಮೇಲೆ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಮೇಲೆ ಉಗ್ರರ ದಾಳಿ ಆಗಿತ್ತು. ಅಪರಿಚಿತ ಬಂದೂಕುಧಾರಿಗಳು ಪುರಿ ಮತ್ತು ಇತರರ ಮೇಲೆ ಗುಂಡು ಹಾರಿಸಿದ್ದರು. ಈ ದಾಳಿಯಲ್ಲಿ ಐಐಟಿ ದೆಹಲಿಯ ಪ್ರೊ. ಮುನೀಶ್ ಚಂದ್ರ ಪುರಿ ಜೀವ ಕಳೆದುಕೊಂಡು ನಾಲ್ವರು ಗಾಯಗೊಂಡಿದ್ದರು.
ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ಸ್ಟ್ರಾಂಗ್ ಕಂಬ್ಯಾಕ್.. ಯುವ ಆಟಗಾರನಿಗಾಗಿ ಸ್ಥಾನ ತ್ಯಾಗ ಮಾಡಿದ ಸಂಜು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ