ನ್ಯೂಸ್ಫಸ್ಟ್ ನೇತೃತ್ವದಲ್ಲಿ ಪಾತ್ ಟು ಪೇರೆಂಟ್ಹುಡ್ ಸಮಾವೇಶ
ಕಾರ್ಯಕ್ರಮಕ್ಕೆ ಕೊನೆಯ ದಿನ, ಸಂತಾನ ಭಾಗ್ಯಕ್ಕೆ ಇಲ್ಲಿವೆ ಸಲಹೆಗಳು
ಅರಮನೆ ಮೈದಾನದ ಗ್ರ್ಯಾಂಡ್ ಕ್ಯಾಸಲ್ನಲ್ಲಿ ನಡೆಯುತ್ತಿದೆ ಸಮಾವೇಶ
ಬದಲಾಗುತ್ತಿರೋ ಲೈಫ್ಸ್ಟೈಲ್, ಒತ್ತಡ, ಗುಣಮಟ್ಟವಿಲ್ಲದ ಆಹಾರ. ಹೀಗೆ ಹಲವು ಸಮಸ್ಯೆಗಳಿಂದಾಗಿ ಇತ್ತೀಚಿನ ದಂಪತಿಗಳಿಗೆ ಮಕ್ಕಳ ಭಾಗ್ಯದ ಕೊರತೆ ಹೆಚ್ಚಾಗಿ ಕಾಡುತ್ತಿದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಂಭ್ರದ ದಾರಿಗೆ ನ್ಯೂಸ್ಫಸ್ಟ್ ಮುಂದಾಗಿದೆ. ಇದರ ಭಾಗವಾಗಿ ಪಾತ್ಟು ಪೇರೆಂಟ್ಹುಡ್ ಎಂಬ ವಿಶೇಷ ಸಮಾವೇಶವನ್ನು ಆಯೋಜಿಸಿದೆ. ಮೊದಲ ದಿನದ ಸಮಾವೇಶಕ್ಕೆ ಅತ್ಯುತ್ತಮ ಸ್ಪಂದನೆ ಸಿಕ್ಕಿದ್ದು, ಇಂದು ಸಮಾವೇಶದ ಕೊನೆಯದಿನವಾಗಿದೆ.
ಒಂದು ಕುಟುಂಬ ಪರಿಪೂರ್ಣವಾಗಬೇಕು ಅಂದ್ರೆ ಆ ಕುಟುಂಬದಲ್ಲಿ ನಗು ಮೂಡಬೇಕು. ಅಂದ್ರೆ, ಅಲ್ಲಿ ಮಗು ಇರಬೇಕು. ಮಗು ಕೇವಲ ನಗುವಷ್ಟೇ ತರೋಲ್ಲಾ ತಂದೆ ತಾಯಿ ಅಜ್ಜಿ ತಾತ ಅತ್ತೆ ಮಾವ ಹೀಗೆ ಇಡೀ ಕುಟುಂಬ ಬಾಂಧವ್ಯ ಹೆಚ್ಚಿಸುತ್ತೆ. ಆದರೆ, ಸಂತಾನ ಹೀನತೆ ಸಮಸ್ಯೆ ಎದುರಿಸುತ್ತಿರುವ ದಂಪತಿಗಳ ಸಮಸ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಬಂಜೆತನ ಒಂದು ರೀತಿಯ ಸಾಮಾಜಿಕ ಪಿಡುಗು ಎನ್ನುವಂತೆ ರೂಪುಗೊಳ್ಳುತ್ತಿದೆ. ಈ ಸಮಸ್ಯೆ ನಿವಾರಿಸಿ ಮಕ್ಕಳ ಭಾಗ್ಯ ಪಡೆಯಲು ಇರುವ ಹಲವು ಮಾರ್ಗಗಳನ್ನ ಕಂಡುಕೊಳ್ಳಲು ಪಾತ್ಟು ಪೇರೆಂಟ್ಹುಡ್ ಅನ್ನೋ ವಿಶೇಷ ಸಮಾವೇಶವನ್ನ ನ್ಯೂಸ್ಫಸ್ಟ್ ಆಯೋಜಿದೆ. ಬೆಂಗಳೂರಿನ ಅರಮನೆ ಮೈದಾನದ ಗ್ರ್ಯಾಂಡ್ ಕ್ಯಾಸಲ್ ನಲ್ಲಿ ನಡೆಯುತ್ತಿರುವ ಸಮಾವೇಷದ ಮೊದಲ ದಿನವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.
ಇದನ್ನೂ ಓದಿ: Path to Parenthood: ನಾಳೆಯೇ ಕೊನೆಯ ದಿನ.. ಮಿಸ್ ಮಾಡದೇ ಬನ್ನಿ; ಸಂತಾನಹೀನತೆಗೆ ಮಾಹಿತಿ ಪಡೆಯಿರಿ
ಈ ವೇಳೆ ಮಾತನಾಡಿದ ಅವರು ನ್ಯೂಸ್ಫಸ್ಟ್ನ ಈ ವಿನೂತನ ಕಾರ್ಯಕ್ರಮದ ಮಹತ್ವ ಏನು ಎಂದು ತಿಳಿಸಿದರು.
ಫರ್ಟಿಲಿಟಿ ಕ್ಷೇತ್ರದಲ್ಲಿ ಸರ್ಕಾರ ಕೈಗೊಂಡಿರುವ ಯೋಜನೆಗಳು, ಆಧುನಿಕ ವೈದ್ಯ ಪದ್ದತಿಯಲ್ಲಿರುವ ಚಿಕಿತ್ಸಾ ವಿಧಾನದಗಳು, ಆಯುರ್ವೇದದಲ್ಲಿರುವ ಚಿಕಿತ್ಸಾ ವಿಧಾನಗಳು ಹಾಗೂ ಅಲೋಪತಿ ಹಾಗೂ ಆಯುರ್ವೇದ ಎರಡನ್ನೂ ಒಳಗೊಂಡು ಚಿಕಿತ್ಸಾ ವಿಧಾನಗಳ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೆ ಸಂತಾನ ಹೀನತೆ ಅನುಭವಿಸುತ್ತಿರುವವರಿಗೆ ಹಲವು ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಇದನ್ನೂ ಓದಿ: ಬೆಂಗಳೂರಲ್ಲಿ ಸಿಲ್ಲಿ ರೀಸನ್‌ಗೆ ಜೀವ ಕಳೆದುಕೊಂಡ BBA ವಿದ್ಯಾರ್ಥಿನಿ; ಕಾರಣವೇನು?
ಇದೇ ಸಮಾವೇಷದಲ್ಲಿ ಫರ್ಟಿಲಿಟಿ, ಐವಿಎಫ್, ಆಯುರ್ವೇದ ಸೇರಿದಂತೆ ಫರ್ಟಿಲಿಟಿಗೆ ಪೂರಕವಾಗಿರುವ ಉತ್ಪನಗಳ ಹಲವು ಮಳಿಗೆಗಳು ಇದ್ದು, ಇಲ್ಲಿಗೆ ಭೇಟಿ ನೀಡುವ ಜನರಿಗೆ ಉಪಯುಕ್ತ ಮಾಹಿತಿ ನೀಡುತ್ತಿವೆ. ಇಂದು ಈ ಸಮಾವೇಶದ ಕೊನೆಯ ದಿನವಾಗಿದ್ದು, ಮಕ್ಕಳ ಭಾಗ್ಯ ಪಡೆಯಲು ಬೇಕಾದ ಹಲವು ಉಪಯುಕ್ತ ಮಾಹಿತಿಯನ್ನು ತಜ್ಞರು ನೀಡಲಿದ್ದಾರೆ. ಇದಲ್ಲದೇ ಮಕ್ಕಳನ್ನು ದತ್ತು ಪಡೆಯಲು ಬೇಕಾಗಿರುವ ಅಗತ್ಯ ಮಾಹಿತಿ ಅದಕ್ಕಿರುವ ಕಾನೂನು, ಅರ್ಹತೆ ಮುಂತಾದ ವಿಚಾರಗಳನ್ನೂ ಸಹ ತಜ್ಞರು ತಿಳಿಸಿಕೊಡಲಿದ್ದಾರೆ. ಈ ವಿಚಾರಗಳ ಅಗತ್ಯ ಇರುವ ನಿಮ್ಮ ಸ್ನೇಹಿತರು, ಆತ್ಮೀಯರು ಹಾಗೂ ಪರಿಚಯಸ್ಥ ಕುಟುಂಬಗಳಿಗೆ ತಿಳಿಸಿ ಅಂತಹ ಕುಟುಂಬಗಳಿಗೆ ಭರವಸೆ ನೀಡಿ ಎಂದು ನ್ಯೂಸ್ಫಸ್ಟ್ ಆತ್ಮೀಯ ವೀಕ್ಷಕರಲ್ಲಿ ಕೇಳಿಕೊಳ್ಳುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ