/newsfirstlive-kannada/media/post_attachments/wp-content/uploads/2025/06/Ahmedabad-plane-crash-4.jpg)
ನೆನಪುಗಳ ಕಂತೆಯನ್ನ ಬಚ್ಚಿಟ್ಕೊಂಡು ಹೋಗ್ತಿದ್ದವರು ಕೆಲವರು.. ವಿದೇಶಿ ಉದ್ಯೋಗಕ್ಕಾಗಿ ಪ್ರವಾಸ ಮಾಡುತ್ತಿದ್ದವರು ಹಲವರು. ಸುಖಕರ ಪ್ರಯಾಣದ ನಿರೀಕ್ಷೆಯಲ್ಲಿದ್ದವರಿಗೆಲ್ಲ ಬೋಯಿಂಗ್-787 ವಿಮಾನ ಚಿರನಿದ್ರೆಯನ್ನು ತಂದಿಟ್ಟಿದೆ..
ಹೌದು, ಅಹಮದಾಬಾದ್ನಿಂದ ಲಂಡನ್ನತ್ತ ಜಿಗಿದು ಮೇಘಗಳ ಮೇಲೆ ಹಾರಬೇಕಿದ್ದ ವಿಮಾನ ಮೇಘನಿನಗರದಲ್ಲಿ ಕುಸಿದು ಮತ್ತೊಂದು ಕರಾಳ ದುರಂತಕ್ಕೆ ಸಾಕ್ಷಿಯಾಗಿದೆ. ನೂರಾರು ನೋವಿನ ಕತೆಗಳನ್ನ ಈ ದುರಂತ ಹೇಳ್ತಿದೆ. ದುರ್ಘಟನೆ ಬೆನ್ನಲ್ಲೇ ಪ್ರವಾಸಿಗರು ಹಂಚಿಕೊಂಡಿದ್ದ ಕೆಲ ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿವೆ..
ಇದನ್ನೂ ಓದಿ:ವಿಜಯ್ ರೂಪಾನಿ ದುರಂತ ಅಂತ್ಯ.. ಶೋಕದಲ್ಲಿ ಮುಳುಗಿದ ಗುಜರಾತ್..
ಈ ಘಟನೆಯ ಹಿಂದಿನ ದಿನ, ಅಂದರೆ ಬುಧವಾರ ಭಾರತದಲ್ಲಿ ಅನೇಕ ಮ್ಯಾಜಿಕಲ್ ಮೂಮೆಂಟ್ಸ್ ಬಗ್ಗೆ ಮಾತನಾಡಿ, ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿಸ್ ಹಾಕಿದ್ದ ವಿದೇಶಿಗರಿಬ್ಬರ ವಿಡೀಯೋ ವೈರಲ್ ಆಗ್ತಿದೆ. ಜೇಮೀ ಮೀಕ್ ಮತ್ತು ಫಿಯೊಂಗಲ್ ಗ್ರೀನ್ಲಾ ಎಂಬ ಇಬ್ಬರು ಬ್ರಿಟನ್ ಯುವಕರು, ಭಾರತ ಪ್ರವಾಸದ ಬಗ್ಗೆ ಕೆಲವು ವಿಷಯಗಳನ್ನ ಹಂಚಿಕೊಂಡು ಫ್ಲೈಟ್ ಹತ್ತಿದ್ದರು.
ಇದನ್ನೂ ಓದಿ: ವಿಮಾನ ದುರಂತದಲ್ಲಿ ಒಂದು ಪವಾಡ.. ಓರ್ವ ಬದುಕಿರುವ ಬಗ್ಗೆ ಕಮಿಷನರ್ ಮಾಹಿತಿ..
ಇದು ಭಾರತದಲ್ಲಿ ನಮ್ಮ ಕೊನೆಯ ರಾತ್ರಿ.. ನಾವು ಭಾರತದಲ್ಲಿ ತುಂಬಾ ಮ್ಯೂಜಿಕಲ್ ಅನುಭವಗಳನ್ನ ಅನುಭವಿಸಿದ್ದೇವೆ. ಇಲ್ಲಿ ಕೆಲವು ಶಾಂತವಾದ, ಮನಸ್ಸಿಗೆ ಮುದ ಕೊಡುವಂಥ ಘಟನೆಗಳು ನಡೆದಿವೆ. ನಾವು ಇದನ್ನೆಲ್ಲಾ ಒಟ್ಟುಗೂಡಿಸಿ ಒಂದು ವ್ಲಾಗ್ ಮಾಡಲಿದ್ದೇವೆ. ಇದು ನಮ್ಮ ಮೊದಲ ವ್ಲಾಗ್ ಆಗುತ್ತೆ. ಎಂದು ಈ ಇಬ್ಬರು ಫ್ಲೈಟ್ ಹತ್ತುವ ಮುನ್ನ ಒಂದು ವಿಡಿಯೋ ಮಾಡಿದ್ದರು.
ಗುಜರಾತ್ನಲ್ಲಿ ತಿಂದ ಥಾಲಿಯ ರುಚಿ ಬಗ್ಗೆ, ಉತ್ತರ ಭಾರತದಲ್ಲಿ ತಮ್ಮ ಪ್ರವಾಸದ ಬಗ್ಗೆ ಹೇಳುತ್ತ ಸಂತಸ ವ್ಯಕ್ತಪಡಿಸಿದ್ದರು. ಇನ್ನೇನು ಕೆಲವು ಗಂಟೆಗಳ ನಂತರ, ಇಬ್ಬರೂ ವಿಮಾನ ನಿಲ್ದಾಣಕ್ಕೆ ಬಂದು, ವಿಮಾನ ಹತ್ತಲು ಕಾಯುತ್ತಿದ್ದಾಗಲೂ ವಿಡಿಯೋ ಮಾಡಿ ಇಬ್ಬರು ಸಂಭಾಷಣೆ ನಡೆಸಿದ್ದರು. ನಾವೀಗ ವಿಮಾನ ನಿಲ್ದಾಣದಲ್ಲಿದ್ದೇವೆ.. ‘ಗುಡ್ ಬೈ ಇಂಡಿಯಾ’ ಎಂದು ಹೇಳಿ ಆ ಇಬ್ಬರು ಬ್ರಿಟನ್ ಯುವಕರು ಫ್ಲೈಟ್ ಹತ್ತಿದ್ದರು.
ಇದನ್ನೂ ಓದಿ: ಭಾರತವನ್ನ ಬೆಚ್ಚಿಬೀಳಿಸಿದ 10 ಘೋರ ವಿಮಾನ ದುರಂತಗಳು.. ಒಂದಕ್ಕಿಂತ ಒಂದು ಕರಾಳ ಅಪಘಾತಗಳು..
10 ಗಂಟೆಗಳ ವಿಮಾನ ಪ್ರಯಾಣ ನಡೆದ ಮೇಲೆ ನಮ್ಮ ದೇಶದಲ್ಲಿರ್ತೀವಿ. ಇಲ್ಲಿಂದ ಸಾಕಷ್ಟು ನೆನಪುಗಳನ್ನ ಹೊತ್ತೊಯ್ಯುತ್ತಿದ್ದೇವೆ. ಸಂತೋಷವಾಗಿ ದೇಶ ಸೇರಿದರೆ ಸಾಕು ಎಂದೆಲ್ಲಾ ಮಾತುಕತೆ ನಡೆಸಿದ್ದ ಆ ಇಬ್ಬರು ಯುವಕರು ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಹೀಗೆ ಒಬ್ಬರಲ್ಲ ಇಬ್ಬರಲ್ಲ, ಫ್ಲೈಟ್ ಹತ್ತಿದ್ದ ಪ್ರತಿಯೊಬ್ಬರೂ ಇದೇ ರೀತಿ ಕನಸುಗಳನ್ನ ಹಿಡಿದು ಹೊರಟಿದ್ದವರೇ, ವಿಧಿಯಾಟದ ಮುಂದೆ ಎಲ್ಲವೂ ನಶ್ವರ ಆಗಿವೆ..
Life is deeply unpredictable.
Just moments before the Air India Boeing crash, two UK nationals recorded a video, smiling—unaware of what lay ahead.
A haunting reminder: every moment counts. #planecrashpic.twitter.com/rObL1kZ6Aj— BALA (@erbmjha) June 12, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ