ಕರೀಷ್ಮಾ ಕಪೂರ್ ಮಾಜಿ ಪತಿಯ ಕೊನೆಯ ಕ್ಷಣದ ವಿಡಿಯೋ.. ಜೀವ ತೆಗೆದಿದ್ದು ಒಂದು ಜೇನು ಹುಳ..!

author-image
Veena Gangani
Updated On
ಕರೀಷ್ಮಾ ಕಪೂರ್ ಮಾಜಿ ಪತಿಯ ಕೊನೆಯ ಕ್ಷಣದ ವಿಡಿಯೋ.. ಜೀವ ತೆಗೆದಿದ್ದು ಒಂದು ಜೇನು ಹುಳ..!
Advertisment
  • ಇಂಗ್ಲೆಂಡ್‌ನ ವೈದಾನದಲ್ಲಿ ಹಠಾತ್ತನೆ ಕುಸಿದ ಬಿದ್ದ ಸಂಜಯ್
  • ಪ್ರಸಿದ್ಧ ಉದ್ಯಮಿಯಾಗಿದ್ದ ಸಂಜಯ್ ಕಪೂರ್ ನಿಧನ
  • ಸಂಜಯ್ ಕಪೂರ್ ಕೊನೆಯ ಕ್ಷಣಗಳ ವಿಡಿಯೋ ವೈರಲ್

ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ ಜೂನ್ 12ರಂದು ನಿಧನರಾಗಿದ್ದರು. ಪ್ರಸಿದ್ಧ ಉದ್ಯಮಿಯಾಗಿದ್ದ ಸಂಜಯ್ ಕಪೂರ್ (53) ಇಂಗ್ಲೆಂಡ್‌ನಲ್ಲಿ ಹಠಾತ್ತನೆ ನಿಧನರಾದರು.

ಇದನ್ನೂ ಓದಿ: ರೆಸ್ಟೋರೆಂಟ್‌ನಲ್ಲಿ ವೇಟರ್ ಆಗಿದ್ದ.. ಈಗ 2500 ಕೋಟಿ ಒಡೆಯ.. ಯಾರು ಈ ಸ್ಟಾರ್​ ಹೀರೋ?

publive-image

ವರದಿಗಳ ಪ್ರಕಾರ, ಸಂಜಯ್ ಪೋಲೋ (Polo) ಆಡುತ್ತಿದ್ದಾಗ, ಆಕಸ್ಮಿಕವಾಗಿ ಜೇನುನೊಣವೊಂದು ಅವರ ಬಾಯಿಗೆ ಹೋಗಿದ್ದರಿಂದ ಅದು ಹೃದಯಾಘಾತಕ್ಕೆ ಕಾರಣವಾಯಿತ್ತಂತೆ. ಇದೀಗ ಅವರ ಕೊನೆಯ ಕ್ಷಣಗಳ ವಿಡಿಯೋವೊಂದು ವೈರಲ್‌ ಆಗುತ್ತಿದೆ.

publive-image

ಹೌದು, ವೈರಲ್​ ಆದ ವಿಡಿಯೋದಲ್ಲಿ ಸಂಜಯ್ ಕಪೂರ್ ಮೈದಾನದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತದೆ. ವೈದ್ಯಕೀಯ ತಂಡವು ಸಿಪಿಆರ್ ಮಾಡುತ್ತಿದೆ, ಆದರೆ ಅವರ ದೇಹದಲ್ಲಿ ಯಾವುದೇ ಚಲನೆ ಇಲ್ಲ. ಈ ಕ್ಷಣವು ತುಂಬಾ ಭಾವನಾತ್ಮಕ ಮತ್ತು ಹೃದಯ ವಿದ್ರಾವಕವಾಗಿದೆ.


">June 14, 2025

ಜೂನ್ 19ರಂದು ನವದೆಹಲಿಯಲ್ಲಿ ಸಂಜಯ್ ಕಪೂರ್ ಅವರ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ಕರಿಷ್ಮಾ ಕಪೂರ್ ಅವರ 15 ವರ್ಷದ ಮಗ ಕಿಯಾನ್ ತನ್ನ ತಂದೆಯ ಅಂತ್ಯಕ್ರಿಯೆಯನ್ನು ನೆರವೇರಿಸಿದರು. ಜೂನ್ 22 ರಂದು ದೆಹಲಿಯ ತಾಜ್ ಪ್ಯಾಲೇಸ್‌ನಲ್ಲಿ ಸಂಜಯ್ ಕಪೂರ್ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment